Bihar | ಕ್ಷೇತ್ರದ ಜನತೆಗೆ ಪ್ರವಾಹದ ಸಂಕಷ್ಟ: ಬಿಜೆಪಿಯ ಶಾಸಕಿ ಮೈಥಿಲಿ ಠಾಕೂರ್ ವಿದೇಶ ಪ್ರವಾಸ
‘ಬಿಹಾರದ ಜನರೇ, ಇಂತಹವರನ್ನು ಮುಂದೆಂದೂ ಆಯ್ಕೆ ಮಾಡಬೇಡಿ’ ಎಂದ ಜನರು

ಪಾಟ್ನಾ: ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕಿ ಹಾಗೂ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರು ಲಂಡನ್ ಹಾಗೂ ನೆದರ್ಲ್ಯಾಂಡ್ಸ್ ಗೆ ಪ್ರವಾಸ ಕೈಗೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಭಾರಿ ಮಳೆಯಿಂದ ಕಮಲಾ ನದಿ ಉಕ್ಕಿ ಹರಿದ ಪರಿಣಾಮ ಬಿಹಾರದ ಹಲವು ಗ್ರಾಮಗಳು ಜಲಾವೃತಗೊಂಡಿದ್ದವು. ದರ್ಭಾಂಗಾ ಜಿಲ್ಲೆಯ ಅಲಿನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೈಥಿಲಿ ಠಾಕೂರ್ ಅವರ ಕ್ಷೇತ್ರವೂ ಪ್ರವಾಹದಿಂದ ಬಾಧಿತವಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರವಾಹ ಪರಿಸ್ಥಿತಿಯ ನಡುವೆಯೇ ಅವರು ವಿದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದನ್ನು ಕೆಲವರು ಪ್ರಶ್ನಿಸಿದ್ದಾರೆ.
ಮೈಥಿಲಿ ಠಾಕೂರ್ ಅವರು ಲಂಡನ್ ಹಾಗೂ ನೆದರ್ಲ್ಯಾಂಡ್ಸ್ ಪ್ರವಾಸ ಮುಗಿಸಿ ಇತ್ತೀಚೆಗೆ ಬಿಹಾರಕ್ಕೆ ಮರಳಿದ್ದಾರೆ. ಪ್ರವಾಹ ಪರಿಸ್ಥಿತಿ ಹಾಗೂ ವಿದೇಶ ಪ್ರವಾಸದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ವಾಹನದತ್ತ ತೆರಳಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೆದರ್ಲ್ಯಾಂಡ್ಸ್ ನ ರೋಟರ್ಡ್ಯಾಮ್ ನಲ್ಲಿ ನಡೆದ ‘ಎಂಡ್ಲೆಸ್ ಇಂಡಿಯಾ’ ಸಾಂಸ್ಕೃತಿಕ ಉತ್ಸವದಲ್ಲಿ ಮೈಥಿಲಿ ಠಾಕೂರ್ ಭಾಗವಹಿಸಿ ಬಿಹಾರದ ಸಾಂಪ್ರದಾಯಿಕ ಜಾನಪದ ಸಂಗೀತ ಹಾಗೂ ಛೈತಿ ಹಾಡುಗಳನ್ನು ಪ್ರಸ್ತುತಪಡಿಸಿದ್ದರು. ಬಿಜೆಪಿ ಬೆಂಬಲಿಗರು ಇದನ್ನು ಬಿಹಾರದ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವ ಕಾರ್ಯಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಯೊಬ್ಬರು ವಿದೇಶ ಪ್ರವಾಸ ಕೈಗೊಂಡಿರುವುದು ಸೂಕ್ತವೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಎತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ಸ್ಥಳಾಂತರ, ಜಲಾವೃತ ಹಾಗೂ ಪರಿಹಾರ ಕಾರ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಶಾಸಕಿ ವಿದೇಶದಲ್ಲಿದ್ದದ್ದು ಅವರ ಆದ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೇಂದ್ರ ಹಾಗೂ ಸಮುದಾಯ ಅಡುಗೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಪರಿಹಾರ ಸಾಮಗ್ರಿ ವಿತರಣೆ ವೇಳೆ ಪ್ಯಾಕೆಟ್ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೇರಿದಂತೆ ಹಲವು ಘಟನೆಗಳು ವರದಿಯಾಗಿವೆ. ಪರಿಹಾರ ಕಾರ್ಯದಲ್ಲಿನ ಲೋಪದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಏಳು ಇಂಜಿನಿಯರ್ ಗಳನ್ನು ಅಮಾನತುಗೊಳಿಸಿರುವುದಾಗಿಯೂ ವರದಿಯಾಗಿದೆ.
ಮೈಥಿಲಿ ಠಾಕೂರ್ ಅವರು ವಿದೇಶದಲ್ಲಿದ್ದ ಸಂದರ್ಭದ ದೃಶ್ಯಗಳು ಹಾಗೂ ಬಿಹಾರಕ್ಕೆ ಮರಳಿದ ಬಳಿಕ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೆ ತೆರಳುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿರುವ ಕೆಲವರು, ಪ್ರವಾಹದ ಸಂದರ್ಭದಲ್ಲಿ ಶಾಸಕರ ಆದ್ಯತೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.
ಕಲಾವಿದೆಯಾಗಿ ವಿದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಿಂತ, ಪ್ರವಾಹದಂತಹ ತುರ್ತು ಪರಿಸ್ಥಿತಿಯಲ್ಲಿ ಕ್ಷೇತ್ರದ ಜನರೊಂದಿಗೆ ಶಾಸಕರಾಗಿ ನಿಲ್ಲಬೇಕಾದ ಹೊಣೆಗಾರಿಕೆ ಇದೆ ಎಂದು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಹರ್ಷ್ ಯಾದವ್ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು, “ಶಾಸಕಿಯಾದ ಬಳಿಕ ಮೈಥಿಲಿ ಠಾಕೂರ್ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಎರಡು ಬಾರಿ, ಆದರೆ 18 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಂಸದರಾದ ಬಳಿಕ ರವಿ ಕಿಶನ್ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಮೂರು ಬಾರಿ, ಆದರೆ 33 ಸಿನಿಮಾಗಳು ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ” ಎಂದು ಟೀಕಿಸಿದ್ದಾರೆ.
“ಇಂತಹವರನ್ನು ಆಯ್ಕೆ ಮಾಡುವ ಜನರನ್ನೇ ನೋಡಿ ನಗಬೇಕಾಗಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಶಾಸಕಿ ವಿದೇಶದಲ್ಲಿ ಪ್ರದರ್ಶನ ನೀಡಿದ ಸಂದರ್ಭದ ಹಾಗೂ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೆ ತೆರಳುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು, “ಇವರು ಬಿಹಾರದ ಅಲಿನಗರದ ಶಾಸಕಿ ಮೈಥಿಲಿ ಠಾಕೂರ್. ಸದ್ಯ ಪ್ರವಾಹದ ನೀರಿನಿಂದ ಇಡೀ ಬಿಹಾರ ಸಂಕಷ್ಟಕ್ಕೆ ಸಿಲುಕಿದ್ದು, 50 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿ ರಾಜಕಾರಣಿಗಳಿಂದ ನೆರವು ಕೋರುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಮೈಥಿಲಿ ಠಾಕೂರ್ ಅವರು ನೆದರ್ಲ್ಯಾಂಡ್ಸ್‌ನ ಹಾಲೆಂಡ್ ನಲ್ಲಿ ಸುಮಾರು ಒಂದು ವಾರ ಪ್ರವಾಸದಲ್ಲಿದ್ದರು. ಬಿಹಾರಕ್ಕೆ ಮರಳಿದ ಬಳಿಕ ಮಾಧ್ಯಮದವರು ಈ ಕುರಿತು ಪ್ರಶ್ನಿಸಿದಾಗ, ಅವರು ಮುಜುಗರಕ್ಕೊಳಗಾದಂತೆ ಮುಖ ಮುಚ್ಚಿಕೊಂಡರು. ‘ಬಿಹಾರದ ಜನರೇ, ಇಂತಹವರನ್ನು ಮುಂದೆಂದೂ ಆಯ್ಕೆ ಮಾಡಬೇಡಿ’ ಎಂದು ಪೋಸ್ಟ್ ಮಾಡಿದ್ದಾರೆ.
She is Maithili Thakur, an MLA from Alinagar, Bihar.
These days the whole of Bihar is sinking due to floodwaters and over 50 lakh people are affected and seeking help from Politicians.
But she had been touring Holland, in the Netherlands, for about a week. Upon arriving in Bihar, when the media questioned her, she began to hide her face out of embarrassment.
Dear Biharis, never elect such clowns ahead. 🙏
In Holland In Bihar
— Simpu Singh (@Simpu_SinghIND) October 5, 2026
पुरा बिहार बाढ़ मे डूबा है विधायक साहिबा छूटी माना रही है। https://t.co/UJALhiyYsY
— Anushka Yadav (@_AnushkaYadav) October 5, 2026
She was elected to rename the towns not for your afflictions or safety.
— Lycus (@L5nc_Yu5_0sx1) October 5, 2026
Maithili Thakur’s response to questions about flood victims and her foreign trip deserves an award. 👏🫡 https://t.co/9VIISiuJVR
— #YeThikKarkeDikhao (@YTKDIndia) October 5, 2026
MLA Maithili thakur hides her face over questions of prioritising foreign trips over Bihar flood crisis and women's safety.
I wish I'll be remaining childless happily rather than having a daughter like her in future. https://t.co/TE5YmiOsIR
— POL (@CptoneP) October 5, 2026
MLA Maithili thakur hides her face over questions of prioritising foreign trips over Bihar flood crisis and women's safety.
I wish I'll be remaining childless happily rather than having a daughter like her in future. https://t.co/TE5YmiOsIR
— POL (@CptoneP) October 5, 2026






