Tamil Nadu | LTTE ಮುಖ್ಯಸ್ಥನಿಗೆ ಗೌರವ ಸಲ್ಲಿಸಿದ CM ವಿಜಯ್; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಮುಖ್ಯಮಂತ್ರಿ ವಿಜಯ್(PTI) , ವಿ. ಪ್ರಭಾಕರನ್(NDTV)
ಚೆನ್ನೈ, ಮೇ 19: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ನಿಷೇಧಿತ ಸಂಘಟನೆ LTTE ಸಂಸ್ಥಾಪಕ ವಿ. ಪ್ರಭಾಕರನ್ ಗೆ ಗೌರವ ಸಲ್ಲಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅವರ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ LTTEಯೇ ಕಾರಣ ಎಂಬುದನ್ನು ನೆನಪಿಸಲು ಪ್ರಯತ್ನಿಸಿದೆ.
ವಿಜಯ್ ಅವರನ್ನು ಸಮರ್ಥಿಸಿಕೊಂಡಿರುವ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ), ಅವರ ಮಾತಿನ ಉದ್ದೇಶ ಕೇವಲ ಪ್ರಭಾಕರನ್ ಸಾವಿನ ಬಗ್ಗೆ ಮಾತ್ರವಾಗಿರಲಿಲ್ಲ; ಬದಲಾಗಿ ಶ್ರೀಲಂಕಾದಲ್ಲಿ ನಡೆದ ಸಾವಿರಾರು ತಮಿಳರ ಮಾರಣಹೋಮದ ಕುರಿತಾಗಿತ್ತು ಎಂದು ಒತ್ತಿ ಹೇಳಿದೆ.
1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಭಾಕರನ್ ನನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿತ್ತು. ಅನಂತರ ಭಾರತದಲ್ಲಿ LTTEಯನ್ನು ನಿಷೇಧಿಸಲಾಗಿತ್ತು.
Next Story




