Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಜೆಪಿ ನನ್ನನ್ನು 50 ಬಾರಿ, 100 ಬಾರಿ...

ಬಿಜೆಪಿ ನನ್ನನ್ನು 50 ಬಾರಿ, 100 ಬಾರಿ ಅನರ್ಹಗೊಳಿಸಬಹುದು, ಆದರೆ...: ವಯನಾಡ್ ನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?

ವಾರ್ತಾಭಾರತಿವಾರ್ತಾಭಾರತಿ12 Aug 2023 8:45 PM IST
share
ಬಿಜೆಪಿ ನನ್ನನ್ನು 50 ಬಾರಿ, 100 ಬಾರಿ ಅನರ್ಹಗೊಳಿಸಬಹುದು, ಆದರೆ...: ವಯನಾಡ್ ನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?

ವಯನಾಡ್ (ಕೇರಳ): ಸಂಸದ ಸ್ಥಾನವನ್ನು ಮರಳಿ ಪಡೆದ ನಂತರ ತಾವು ಪ್ರತಿನಿಧಿಸುತ್ತಿರುವ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ವಯನಾಡ್ ನನ್ನ ಕುಟುಂಬವಾಗಿದ್ದು, ಬಿಜೆಪಿ ಮತ್ತು ಆರ್‍ಎಸ್‍ಎಸ್ ಗೆ ಕುಟುಂಬಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ತಿಳಿದಿಲ್ಲ ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

“ಒಂದು ವೇಳೆ ಯಾರಾದರೂ ಇಬ್ಬರು ಸಹೋದರರನ್ನು ಅಥವಾ ತಂದೆಯನ್ನು ಆತನ ಮಗಳಿಂದ ಬೇರ್ಪಡಿಸಲು ಬಯಸಿದರೆ ಅವರ ಸಂಬಂಧವು ಮತ್ತಷ್ಟು ಬಲಿಷ್ಠವಾಗುತ್ತದೆ. ಅವರು ನನ್ನನ್ನು ಹಾಗೂ ನಿಮ್ಮನ್ನು ಬೇರ್ಪಡಿಸಲು ಪ್ರಯತ್ನಿಸಿದಷ್ಟೂ ನಾವಿಬ್ಬರೂ ಮತ್ತಷ್ಟು ಹತ್ತಿರವಾಗುತ್ತೇವೆ ಎಂಬ ಸಂಗತಿಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಒಂದು ವೇಳೆ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ ವಯನಾಡ್ ನೊಂದಿಗೆ ಆತನ ಸಂಬಂಧ ಮುರಿದು ಬೀಳಲಿದೆ ಎಂದು ಅವರು ಭಾವಿಸಿದ್ದಾರೆ. ಇಲ್ಲ, ಒಂದು ವೇಳೆ ನೀವು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ, ಜನರೊಂದಿಗಿನ ಆತನ ಸಂಬಂಧ ಮತ್ತಷ್ಟು ಬಲಿಷ್ಠವಾಗುತ್ತದೆ. ನೀವು ನನ್ನ ಪರವಾಗಿ ನಿಂತಿದ್ದೀರಿ. ನನ್ನನ್ನು 50 ಬಾರಿ ಅನರ್ಹಗೊಳಿಸಿದರೂ, ವಯನಾಡ್ ನೊಂದಿಗಿನ ನನ್ನ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕಿದೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಬಿಜೆಪಿ ಮಾಡುವುದೇ ಈ ಕೆಲಸವನ್ನು. ಅವರು ಕುಟುಂಬಗಳನ್ನು ಬೇರ್ಪಡಿಸುತ್ತಾರೆ. ಮಣಿಪುರದಲ್ಲಿ ಅವರು ಅದನ್ನೇ ಮಾಡಿದರು. ನಾವು ಅದನ್ನು ಮರು ನಿರ್ಮಾಣ ಮಾಡುತ್ತೇವೆ. ಒಂದು ವೇಳೆ ನೀವು ಎರಡು ತಿಂಗಳಲ್ಲಿ ಮಣಿಪುರಕ್ಕೆ ಬೆಂಕಿ ಹಚ್ಚಿದರೆ, ನಾವದನ್ನು ಐದು ವರ್ಷಗಳೊಳಗೆ ಮರು ನಿರ್ಮಾಣ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ

“ಕುಟುಂಬವೆಂದರೇನು? ಅದು ನಿಮ್ಮನ್ನು ನೋಡಿಕೊಳ್ಳುತ್ತದೆ, ನಿಮ್ಮನ್ನು ರಕ್ಷಿಸುತ್ತದೆ, ನಿಮಗೆ ಗೌರವ ನೀಡುತ್ತದೆ. ನೀವು ನನಗೆ ಮಾಡಿರುವುದು ಇದನ್ನೇ. ನೀವು ನನ್ನನ್ನು ರಕ್ಷಿಸಿದಿರಿ, ನನಗೆ ಪ್ರೀತಿ, ವಾತ್ಸಲ್ಯ ನೀಡಿದಿರಿ. ನೀವು ನನ್ನನ್ನು 50 ಬಾರಿ, 100 ಬಾರಿ ಅನರ್ಹಗೊಳಿಸಬಹುದು. ಆದರೆ, ಅದರಿಂದ ಈ ಸಂಬಂಧ ಮತ್ತಷ್ಟು ಬಲಿಷ್ಠವಾಗಲಿದೆ.” ಎಂದೂ ರಾಹುಲ್ ಗಾಂಧಿ ತಿಳಿಸಿದ್ದಾರೆ.

“ಭಾರತವೊಂದು ಕುಟುಂಬವಾಗಿದ್ದು, ಅದನ್ನು ವಿಭಜಿಸಲು ಅವರು ಬಯಸುತ್ತಿದ್ದಾರೆ. ಮಣಿಪುರ ಕೂಡಾ ಒಂದು ಕುಟುಂಬವಾಗಿದ್ದು, ಅದನ್ನು ನಾಶಪಡಿಸಲು ಅವರು ಯತ್ನಿಸುತ್ತಿದ್ದಾರೆ. ಬಿಜೆಪಿ ಪೊಲೀಸರಿಂದ ಸಾವಿರಾರು ಕುಟುಂಬಗಳು ನಾಶವಾಗಿವೆ. ನಾವು ಜನರನ್ನು ಒಗ್ಗೂಡಿಸಿ, ಕುಟುಂಬಗಳನ್ನು ಮರು ನಿರ್ಮಾಣ ಮಾಡುತ್ತೇವೆ” ಎಂದು ಅವರು ಭರವಸೆ ನೀಡಿದ್ದಾರೆ.

ಮಣಿಪುರದ ಅನುಭವವನ್ನು ಸ್ಮರಿಸಿಕೊಂಡ ರಾಹುಲ್ ಗಾಂಧಿ, ಬಿಜೆಪಿ ಮಣಿಪುರವನ್ನು ಕಗ್ಗೊಲೆ ಮಾಡಿದೆ; ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು ಅವಕಾಶ ನೀಡಿದೆ. “ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಾ? ಭಾರತ ಮಾತೆಯ ಕಗ್ಗೊಲೆ ಬಗ್ಗೆ ಮಾತನಾಡಲು ನೀವು ಕೇವಲ ಎರಡು ನಿಮಿಷ ವ್ಯಯಿಸಿದಿರಿ. ಹೀಗೆ ಮಾಡಲು ನಿಮಗೆಷ್ಟು ಧೈರ್ಯ? ಭಾರತದ ಪರಿಕಲ್ಪನೆಯನ್ನು ನೀವು ಅದ್ಹೇಗೆ ಅಗೌರವಿಸುತ್ತೀರಿ? ಕಳೆದ ನಾಲ್ಕು ತಿಂಗಳಿನಿಂದ ನೀವೇನು ಮಾಡುತ್ತಿದ್ದಿರಿ? ನೀವೇಕೆ ಅಲ್ಲಿಗೆ ತೆರಳಲಿಲ್ಲ? ನೀವು ಹಿಂಸಾಚಾರವನ್ನು ತಡೆಯಲು ಏಕೆ ಯತ್ನಿಸಲಿಲ್ಲ? ಯಾಕೆಂದರೆ, ನೀವು ರಾಷ್ಟ್ರೀಯವಾದಿಯಲ್ಲ. ಭಾರತದ ಪರಿಕಲ್ಪನೆಯನ್ನು ಕಗ್ಗೊಲೆ ಮಾಡುವ ಯಾರೂ ರಾಷ್ಟ್ರೀಯವಾದಿಯಾಗಿರಲು ಸಾಧ್ಯವಿಲ್ಲ. ಭಾರತವನ್ನು ಪ್ರೀತಿಸಲು ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X