ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ದಾನಿಶ್ ಅಲಿಯವರನ್ನು ‘ಭಯೋತ್ಪಾದಕ’ಎಂದು ಕರೆದ ಬಿಜೆಪಿ ಸಂಸದ ರಮೇಶ್ ಬಿಧುರಿ!
ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಷಾದ

ರಮೇಶ್ ಬಿಧುರಿ ಹಾಗೂ ದಾನಿಶ್ ಅಲಿ, Photo: YouTube/Sansad TV
ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಬಿಜೆಪಿ ಸಂಸದ ರಮೇಶ್ ಬಿಧುರಿ ಗುರುವಾರ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ದಾನಿಶ್ ಅಲಿ ಅವರನ್ನು "ಭಯೋತ್ಪಾದಕ" ಎಂದು ಕರೆದಿದ್ದಾರೆ ಎಂದು ವರದಿಯಾಗಿದೆ.
ಸಂಸತ್ತಿನ ಕೆಳಮನೆಯಲ್ಲಿ ಚಂದ್ರಯಾನ-3ರ ಯಶಸ್ಸಿನ ಚರ್ಚೆಯ ವೇಳೆ ಬಿಜೆಪಿ ನಾಯಕನಿಂದ ಈ ವಿವಾದಾತ್ಮಕ ಹೇಳಿಕೆ ಬಂದಿದೆ.
"ಯೇ ಉಗ್ರವಾದಿ , ಯೇ ಆತಂಕವಾದಿ ಹೈ, ಉಗ್ರವಾದಿ ಹೈ, ಯೇ ಆತಂಕ್ ವಾದಿ ಹೈ," ಎಂದು ಬಿಧುರಿ ಚರ್ಚೆಯ ಸಮಯದಲ್ಲಿಹೇಳುತ್ತಿರುವುದು ಕೇಳಿಬಂದಿದೆ.
ದಾನಿಶ್ ಅಲಿ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಬಿಧುರಿ ಹೇಳಿಕೆಗೆ ರಕ್ಷಣಾ ಸಚಿವ ಹಾಗೂ ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.
ಬಿಧುರಿ ಹೇಳಿಕೆಯನ್ನುನಾನು ಕೇಳಿಲ್ಲ ಇದು ವಿರೋಧ ಪಕ್ಷದ ಸದಸ್ಯರನ್ನು ನೋಯಿಸಿದರೆ ಅವುಗಳನ್ನು ಕಲಾಪದಿಂದ ತೆಗೆದುಹಾಕುವಂತೆ ಸಭಾಪತಿಯನ್ನು ಒತ್ತಾಯಿಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದರು
ಅಧ್ಯಕ್ಷ ತೆ ವಹಿಸಿದ್ದ ಕಾಂಗ್ರೆಸ್ ಸದಸ್ಯ ಕೆ.ಸುರೇಶ್ ಮಾತನಾಡಿ, ಹೇಳಿಕೆಯನ್ನು ತೆಗೆಯುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ ಎಂದರು.
"ಸದಸ್ಯರು ನೀಡಿದ ಹೇಳಿಕೆಯಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ರಕ್ಷಣಾ ಸಚಿವರು ಹೇಳಿದರು.
ಸಿಂಗ್ ಅವರ ಮಾತಿಗೆ ಸದಸ್ಯರು ಮೇಜುಗಳನ್ನು ಕುಟ್ಟಿ ಶ್ಲಾಘಿಸಿದರು