ಫೆಲೆಸ್ತೀನ್ ಪರ ಭಿತ್ತಿಪತ್ರ| ಭಾರತವನ್ನು ತೊರೆಯುವಂತೆ ಬ್ರಿಟಿಷ್ ಪ್ರಜೆಗಳಿಗೆ ನೋಟಿಸ್

ಜೈಪುರ, ಫೆ. 3: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯಾ ಯುದ್ಧಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎಂಬ ಆರೋಪದಲ್ಲಿ, ಭಾರತ ತೊರೆಯುವಂತೆ ಇಬ್ಬರು ಬ್ರಿಟಿಷ್ ರಾಷ್ಟ್ರೀಯರಿಗೆ ರಾಜಸ್ಥಾನ ಪೊಲೀಸ್‌ನ ಕ್ರಿಮಿನಲ್ ಇನ್ವೆಸ್ಟಿಗೇಶನ್ ಟೀಮ್ (ಸಿಐಡಿ) ನೋಟಿಸ್‌ಗಳನ್ನು ನೀಡಿದೆ.
‘‘ಫ್ರೀ ಫೆಲೆಸ್ತೀನ್, ಬಾಯ್ಕಾಟ್ ಇಸ್ರೇಲ್’’ (ಫೆಲೆಸ್ತೀನ್‌ಗೆ ಸ್ವಾತಂತ್ರ್ಯ ಕೊಡಿ, ಇಸ್ರೇಲನ್ನು ಬಹಿಷ್ಕರಿಸಿ) ಮುಂತಾದ ಘೋಷಣೆಗಳು ಭಿತ್ತಿಪತ್ರಗಳಲ್ಲಿದ್ದವು. ಈ ಇಬ್ಬರು ಬ್ರಿಟಿಷ್ ರಾಷ್ಟ್ರೀಯರು ಪ್ರವಾಸಿ ವೀಸಾಗಳಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಅವರ ಕೃತ್ಯಗಳು, ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದ ವೀಸಾ ಶರತ್ತುಗಳನ್ನು ಉಲ್ಲಂಘಿಸುತ್ತವೆ ಎಂದು ಸಿಐಡಿ ಹೇಳಿಕೊಂಡಿದೆ.
Next Story





