ದಿಲ್ಲಿಯಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ : ಇಬ್ಬರು ಆರೋಪಿಗಳ ಬಂಧನ

Credit: iStock Photo
ಹೊಸದಿಲ್ಲಿ : ಕರ್ನಾಟಕದ ಹಂಪಿ ಬಳಿ ಇಸ್ರೇಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆನ್ನಲ್ಲೇ ದಿಲ್ಲಿಯ ಮಹಿಪಾಲ್ಪುರ ಹೋಟೆಲ್ನಲ್ಲಿ ಬ್ರಿಟನ್ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿದ್ದ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ಮಹಿಳೆಯು ಬ್ರಿಟನ್ನಿಂದ ದಿಲ್ಲಿಗೆ ಬಂದಿದ್ದರು. ಈ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಆರೋಪಿಯ ಸಹಚರ ಕೂಡ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆ ಕುರಿತು ಬ್ರಿಟನ್ ಹೈಕಮಿಷನ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story