ವಿಳಂಬಿತ ವಿಮಾನಗಳ ಸಂಚಾರ ರದ್ದು ; ವಿಮಾನ ಯಾನ ಸಂಸ್ಥೆಗಳಿಗೆ ಹೊಸ ಎಸ್ಒಪಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ರವಿವಾರ ಮಂಜಿನಿಂದ ಕಂಡು ಬಂದಂತಹ ಗೊಂದಲದ ಪರಿಸ್ಥಿತಿಯನ್ನು ನಿರ್ವಹಿಸಲು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೋಮವಾರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಬೋರ್ಡಿಂಗ್ ನಿರಾಕರಣೆ, ವಿಮಾನಗಳ ಸಂಚಾರ ರದ್ದು, ವಿಮಾನಗಳ ಸಂಚಾರದಲ್ಲಿ ವಿಳಂಬದ ಕಾರಣದಿಂದ ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳಿಗೆ ಪ್ರಮಾಣಿತ ಕಾರ್ಯ ವಿಧಾನ (ಎಸ್ಒಪಿ)ದಲ್ಲಿ ಡಿಜಿಸಿಎ, ವಿಳಂಬವಾಗುವ ವಿಮಾನಗಳನ್ನು ವಿಮಾನ ಯಾನ ಸಂಸ್ಥೆಗಳು ರದ್ದುಗೊಳಿಸಬಹುದು ಎಂದು ಹೇಳಿದೆ.
ಎಲ್ಲಾ ವಿಮಾನ ಯಾನ ಸಂಸ್ಥೆಗಳು ಪ್ರಮಾಣಿತ ಕಾರ್ಯ ವಿಧಾನವನ್ನು ಕೂಡಲೇ ಅನುಸರಿಸುವಂತೆ ಡಿಜಿಸಿಎ ಹೇಳಿದೆ.
ವಿಮಾನ ಯಾನ ಸಂಸ್ಥೆಗಳ ನಿಯಂತ್ರಣಕ್ಕಿಂತ ಹೊರತಾದ ವಿಶೇಷ ಸನ್ನಿವೇಶದಲ್ಲಿ ಈ ನಿಯಮಗಳ ನಿಬಂಧನೆಗಳು ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಹೇಳಿದೆ.
Next Story





