ಮಧ್ಯಪ್ರದೇಶ | ಕ್ಷಿಪ್ರಾ ನದಿಯಲ್ಲಿ ಕೊಚ್ಚಿ ಹೋದ ಮೂವರು ಪೊಲೀಸ್ ಅಧಿಕಾರಿಗಳಿದ್ದ ಕಾರು : ಒಬ್ಬರ ಮೃತದೇಹ ಪತ್ತೆ

Photo | newindianexpress.
ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಕಾರು ಸೇತುವೆಯಿಂದ ಕ್ಷಿಪ್ರಾ ನದಿಗೆ ಬಿದ್ದು ಮೂವರು ಪೊಲೀಸ್ ಅಧಿಕಾರಿಗಳು ನೀರುಪಾಲಾಗಿದ್ದಾರೆ.
ಉನ್ಹೆಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಶೋಕ್ ಶರ್ಮಾ, ಸಬ್ ಇನ್ಸ್ಪೆಕ್ಟರ್ ನಿನಾಮ ಮತ್ತು ಮಹಿಳಾ ಕಾನ್ಸ್ಟೆಬಲ್ ಆರತಿ ಪ್ರಯಾಣಿಸುತ್ತಿದ್ದ ಕಾರು ಸೇತುವೆಯಿಂದ ಬಿದ್ದು ಕ್ಷಿಪ್ರಾ ನದಿಯಲ್ಲಿ ಕೊಚ್ಚಿಹೋಗಿದೆ. ಮೂವರು ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
"ಆರತಿ ಪಾಲ್ ಚಾಲನೆ ಮಾಡುತ್ತಿದ್ದಾಗ ಕಾರು ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಕೆಳಗೆ ಬಿದ್ದಿದೆ. ಈವರೆಗೆ ಒಬ್ಬರ ಮೃತದೇಹ ಪತ್ತೆಯಾಗಿದೆ. ಎನ್ಡಿಆರ್ಎಫ್ ತಂಡಗಳು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
Next Story





