CBSE Result-2026| ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ

Photo| NDTV
10ನೇ ತರಗತಿಗೆ ಎರಡು ಅಂತಿಮ ಪರೀಕ್ಷೆಗಳನ್ನು ನಡೆಸುವುದನ್ನು ಸಿಬಿಎಸ್ಇ ಈ ವರ್ಷದಿಂದ ಆರಂಭಿಸಿದೆ. ಮೊದಲ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವುದು ಕಡ್ಡಾಯವಾಗಿದೆ. ಈಗ ಅದರ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 93.70 ಶೇಕಡ ಮಂದಿ ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ ಶೇಕಡಾವಾರು ತೇರ್ಗಡೆ ಪ್ರಮಾಣ 93.66 ಶೇಕಡ ಆಗಿತ್ತು.
ಬಾಲಕಿಯರು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಎದುರಿಸಿರುವ ಬಾಲಕಿಯ ಪೈಕಿ 94.99 ಶೇಕಡ ಮಂದಿ ತೇರ್ಗಡೆಯಾಗಿದ್ದಾರೆ. ಇದು ಬಾಲಕರ ತೇರ್ಗಡೆ ಪ್ರಮಾಣಕ್ಕಿಂತ ಶೇ. 1.3 ರಷ್ಟು ಹೆಚ್ಚಾಗಿದೆ.
‘‘ಒಟ್ಟು 55,368 ವಿದ್ಯಾರ್ಥಿಗಳು 95 ಶೇಕಡಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ ಹಾಗೂ 22,157 ವಿದ್ಯಾರ್ಥಿಗಳು 90 ಶೇಕಡಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಒಟ್ಟು 24.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
Next Story




