ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವಿನ ಪ್ರಕರಣ: ಆನ್ಲೈನ್ನಲ್ಲಿ ಔಷಧ ಮಾರಾಟಕ್ಕೆ ನಿಷೇಧ ಹೇರಲಿರುವ ಉತ್ತರಾಖಂಡ ಸರಕಾರ

ಸಾಂದರ್ಭಿಕ ಚಿತ್ರ | Photo Credit : freepik.com
ಡೆಹ್ರಾಡೂನ್: ದೇಶಾದ್ಯಂತ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆನ್ಲೈನ್ಲ್ಲಿ ಔಷಧಗಳ ಮಾರಾಟಕ್ಕೆ ನಿಷೇಧ ವಿಧಿಸಲು ಉತ್ತರಾಖಂಡ ಸರಕಾರ ಸಿದ್ಧತೆ ನಡೆಸುತ್ತಿದೆ.
ಆನ್ಲೈನ್ನಲ್ಲಿ ಔಷಧ ಮಾರಾಟಕ್ಕೆ ನಿಷೇಧ ಈ ತಿಂಗಳ ಅಂತ್ಯದಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.
ಆನ್ಲೈನಲ್ಲಿ ಔಷಧಗಳ ಮಾರಾಟದ ಕುರಿತು ನಿಯಂತ್ರಣ ಹಾಗೂ ಮೆಲ್ವಿಚಾರಣೆಯಲ್ಲಿರುವ ಸಮಸ್ಯೆ ಹಾಗೂ ಸವಾಲುಗಳ ಕುರಿತು ಕಳವಳ ವ್ಯಕ್ತಪಡಿಸಿರುವ ರಾಜ್ಯ ಆಹಾರ ಹಾಗೂ ಔಷಧ ಆಡಳಿತ (ಎಫ್ಡಿಎ) ಕೇಂದ್ರ ಸರಕಾರಕ್ಕೆ ಔಪಚಾರಿಕವಾಗಿ ಕ್ರಮಗಳನ್ನು ಶಿಫಾರಸು ಮಾಡಿದೆ.
ದೇಶದ ಇತರ ಭಾಗಗಳಲ್ಲಿ ಉತ್ಪಾದನೆಯಾದ ನಿರ್ದಿಷ್ಟ ಕೆಮ್ಮಿನ ಸಿರಪ್ನಿಂದ ಮಕ್ಕಳ ಸಾವನ್ನಪ್ಪಿದ ಕುರಿತ ಹಲವು ವರದಿಗಳು ಪ್ರಕಟವಾದ ಬಳಿಕ, ಔಷಧ ಹಾಗೂ ಪ್ರಸಾದನಗಳ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರದ ನಿರ್ಧರಿಸಿದ ಹಿನ್ನೆಲೆಯಲ್ಲಿ ಉತ್ತರಾಖಂಡ ಸರಕಾರ ಈ ನಿರ್ಣಯ ತೆಗೆದುಕೊಂಡಿದೆ.
ಔಷಧಗಳ ಆನ್ಲೈನ್ ಮಾರಾಟ ಹಾಗೂ ಮನೆಗೆ ವಿತರಿಸುವುದನ್ನು ಕಟ್ಟುನಿಟ್ಟಿನಿಂದ ನಿಯಂತ್ರಿಸುವ ಅಗತ್ಯತೆಯನ್ನು ಉತ್ತರಾಖಂಡ ಸರಕಾರ ಒತ್ತಿ ಹೇಳಿದೆ.
ಉತ್ತರಾಖಂಡ ಹಾಗೂ ಇತರ ಹಲವು ರಾಜ್ಯಗಳು ಆನ್ಲೈನ್ನಲ್ಲಿ ಔಷಧಗಳ ಮಾರಾಟ ನಿಷೇಧಿಸಲು ಶಿಫಾರಸು ಮಾಡಿವೆ. ಔಷಧಗಳ ನಿಯಂತ್ರಣಕ್ಕೆ ರೂಪಿಸಲಾಗುತ್ತಿರುವ ಕೇಂದ್ರದ ನೂತನ ಕಾನೂನಿನಲ್ಲಿ ಈ ನಿಯಮ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಈ ಬೆಳವಣಿಗೆಯನ್ನು ರಾಜ್ಯ ಆಹಾರ ಹಾಗೂ ಔಷಧ ಆಡಳಿತ (ಎಫ್ಡಿಎ)ದ ಹೆಚ್ಚುವರಿ ಆಯುಕ್ತ ತಾಜ್ಬರ್ ಸಿಂಗ್ ಜಗ್ಗಿ ಬುಧವಾರ ದೃಢಪಡಿಸಿದ್ದಾರೆ. ಔಷಧಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸುವಂತೆ ಉತ್ತರಾಖಂಡ ಹಾಗೂ ಇತರ ಹಲವು ರಾಜ್ಯಗಳು ಶಿಫಾರಸು ಮಾಡಿವೆ. ಔಷಧ ನಿಯಂತ್ರಣಕ್ಕಾಗಿ ರೂಪಿಸಲಾಗುತ್ತಿರುವ ಕೇಂದ್ರದ ಹೊಸ ಕಾನೂನಿನಲ್ಲಿ ಈ ನಿಯಮ ಖಂಡಿತವಾಗಿ ಸೇರ್ಪಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.







