Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. Fact Check| ಚೀನಾ-ಪಾಕಿಸ್ತಾನಕ್ಕೆ...

Fact Check| ಚೀನಾ-ಪಾಕಿಸ್ತಾನಕ್ಕೆ ಬಿಎಲ್ಎ ನಾಯಕ ಎಚ್ಚರಿಕೆ ನೀಡುವ ವೀಡಿಯೊ ಹಳೆಯದು, ಜಾಫರ್ ಎಕ್ಸ್‌ಪ್ರೆಸ್ ಅಪಹರಣಕ್ಕೆ ಸಂಬಂಧವಿಲ್ಲ

newsmeter.innewsmeter.in15 March 2025 9:19 PM IST
share
Fact Check| ಚೀನಾ-ಪಾಕಿಸ್ತಾನಕ್ಕೆ ಬಿಎಲ್ಎ ನಾಯಕ ಎಚ್ಚರಿಕೆ ನೀಡುವ ವೀಡಿಯೊ ಹಳೆಯದು, ಜಾಫರ್ ಎಕ್ಸ್‌ಪ್ರೆಸ್ ಅಪಹರಣಕ್ಕೆ ಸಂಬಂಧವಿಲ್ಲ
1.52 ನಿಮಿಷಗಳ ವೈರಲ್ ವೀಡಿಯೊದಲ್ಲಿ ಮುಖ ಮುಚ್ಚಿಕೊಂಡ ಉಗ್ರಗಾಮಿಯೊಬ್ಬರು "ನಮ್ಮ ದಾಳಿಯ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಇದು ಬಲೂಚಿಸ್ತಾನದಿಂದ ತಕ್ಷಣವೇ ಹಿಂದೆ ಸರಿಯುವಂತೆ ಚೀನಾ ಮತ್ತು ಪಾಕಿಸ್ತಾನಕ್ಕೆ ಸರಳ ಮತ್ತು ಸ್ಪಷ್ಟ ಸಂದೇಶವಾಗಿದೆ" ಎಂದು ಹೇಳುತ್ತಿರುವುದು ಕಂಡುಬರುತ್ತದೆ.

Claim: ಜಾಫರ್ ಎಕ್ಸ್‌ಪ್ರೆಸ್ ಅಪಹರಣ 2025ರ ನಂತರ ಬಿಎಲ್ಎ ನಾಯಕ ಬಲೂಚಿಸ್ತಾನದ ತಂಟೆಗೆ ಬರದಂತೆ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆ ಕೊಟ್ಟಿದ್ದಾರೆ.

Fact: ಗ್ವಾದರ್ ಹೋಟೆಲ್ ದಾಳಿಯ ನಂತರ ಬಿಎಲ್‌ಎ ನಾಯಕರೊಬ್ಬರು ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ 2019 ರ ವೀಡಿಯೊ ಇದಾಗಿದೆ.

ಮಾರ್ಚ್ 11 ರಂದು ಆಯಕಟ್ಟಿನ ಬೋಲನ್ ಕಣಿವೆಯಲ್ಲಿ ಕ್ವೆಟ್ಟಾ-ಪೇಶಾವರ್‌ಗೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಎಂಬ ಉಗ್ರಗಾಮಿ ಗುಂಪು ಅಪಹರಿಸಿತ್ತು. ರೈಲಿನಲ್ಲಿ 200 ಭದ್ರತಾ ಸಿಬ್ಬಂದಿ ಸೇರಿದಂತೆ 450 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಸಾಕಷ್ಟು ಪ್ರಯತ್ನದ ನಂತರ, ಪಾಕಿಸ್ತಾನಿ ಸೇನೆಯು ಸುಮಾರು 200 ಪ್ರಯಾಣಿಕರನ್ನು ರಕ್ಷಿಸಿದೆ ಮತ್ತು 50 ದಾಳಿಕೋರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಆದಾಗ್ಯೂ, ಬಿಎಲ್ಎ ಇನ್ನೂ 150 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಸೆರೆಯಲ್ಲಿಟ್ಟುಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ.

1.52 ನಿಮಿಷಗಳ ವೈರಲ್ ವೀಡಿಯೊದಲ್ಲಿ ಮುಖ ಮುಚ್ಚಿಕೊಂಡ ಉಗ್ರಗಾಮಿಯೊಬ್ಬರು "ನಮ್ಮ ದಾಳಿಯ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಇದು ಬಲೂಚಿಸ್ತಾನದಿಂದ ತಕ್ಷಣವೇ ಹಿಂದೆ ಸರಿಯುವಂತೆ ಚೀನಾ ಮತ್ತು ಪಾಕಿಸ್ತಾನಕ್ಕೆ ಸರಳ ಮತ್ತು ಸ್ಪಷ್ಟ ಸಂದೇಶವಾಗಿದೆ" ಎಂದು ಹೇಳುತ್ತಿರುವುದು ಕಂಡುಬರುತ್ತದೆ. ತಮ್ಮ ನಾಯಕ ಜನರಲ್ ಅಸ್ಲಾಂ ಬಲೂಚ್ ಕಳುಹಿಸಿದ ಸಂದೇಶಕ್ಕೆ ಚೀನಾ ಪ್ರಾಮುಖ್ಯತೆ ನೀಡಲಿಲ್ಲ, ಇದು ದಾಳಿಗೆ ಕಾರಣವಾಯಿತು ಎಂದು ಆ ವ್ಯಕ್ತಿ ಹೇಳಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಮಾರ್ಚ್ 12, 2025 ರಂದು ಹಂಚಿಕೊಂಡು, ‘‘ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ನಿನ್ನೆ 100 ಪಾಕಿಸ್ತಾನ ಸೈನಿಕರ ಸಹಿತ 400 ಜನರಿದ್ದ ರೈಲನ್ನು ಅಪಹರಿಸಿತ್ತು.. ಆರು ಜನ ಸೈನಿಕರನ್ನು ಹತ್ಯೆ ಮಾಡಿತ್ತು. ನಂತರ ಪಾಕಿಸ್ತಾನ ಸೇನೆ ಎಲ್ಲಾ 27 ಬಂಡುಕೋರರನ್ನು ಹತ್ಯೆ ಮಾಡಿ ಪ್ರಯಾಣಿಕರನ್ನು ಬಿಡುಗಡೆ ಮಾಡಿತ್ತೆಂದು ಸುದ್ದಿಯಾಗಿತ್ತು. ಇದೀಗ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಆತ್ಮಾಹುತಿ ತಂಡವಾದ ಮಜೀದ್ ಬ್ರಿಗೇಡ್ ಬಲೂಚಿಸ್ತಾನದ ತಂಟೆಗೆ ಬರದಂತೆ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆ ಕೊಟ್ಟಿದೆಯಂತೆ... ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡುಬರುತ್ತಿದೆ...’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಹಾಗೆಗೆ ಕನ್ನಡ ಪ್ರಸಿದ್ಧ ಡಿಜಿಟಲ್ ಮಾಧ್ಯಮ ಕನ್ನಡ ಪ್ರಭ ಕೂಡ ಮಾರ್ಚ್ 12, 2025 ರಂದು ಇದೇ ವೀಡಿಯೊವನ್ನು ಹಂಚಿಕೊಂಡು ‘‘ಬದುಕುವ ಆಸೆ ಇದ್ದರೆ ಬಲೂಚಿಸ್ತಾನದಿಂದ ಹಿಂದೆ ಸರಿಯಿರಿ: ಚೀನಾ ಮತ್ತು ಪಾಕಿಸ್ತಾನಕ್ಕೆ BLA ಖಡಕ್ ಎಚ್ಚರಿಕೆ’’ ಎಂದು ಸುದ್ದಿ ಪ್ರಕಟಿಸಿದೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2019ರ ವೀಡಿಯೊ ಆಗಿದ್ದು, 2025ರ ಜಾಫರ್ ಎಕ್ಸ್‌ಪ್ರೆಸ್ ಅಪಹರಣಕ್ಕೆ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಪಾಕಿಸ್ತಾನದ ಮಾಧ್ಯಮ CSCR.pk ಜುಲೈ 9, 2019 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು. ಜುಲೈ 2 ರಂದು, ಯುನೈಟೆಡ್ ಸ್ಟೇಟ್ಸ್ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಬ್ರಾಂಡ್ ಮಾಡಿತು ಎಂಬ ಮಾಹಿತಿ ಇದರಲ್ಲಿದೆ. ಈ ಮೂಲಕ ಇದು 2025ರ ಜಾಫರ್ ಎಕ್ಸ್‌ಪ್ರೆಸ್ ಅಪಹರಣಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಯಿತು.

ಹಾಗೆಯೆ ರಿವರ್ಸ್ ಇಮೇಜ್ ಸರ್ಚ್​ನಲ್ಲಿ ನಮಗೆ ಮೇ 20, 2019 ರಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿ ಸಿಕ್ಕಿದೆ. 2 ನಿಮಿಷ 20 ಸೆಕೆಂಡುಗಳ ಈ ವೀಡಿಯೊಗೆ, ‘‘ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿಮಗೆ ಬಲೂಚಿಸ್ತಾನ ತೊರೆಯಲು ಇನ್ನೂ ಸಮಯವಿದೆ, ಇಲ್ಲದಿದ್ದರೆ ಬಲೂಚ್ ಪುತ್ರರು ಮತ್ತು ಪುತ್ರಿಯರಿಂದ ನೀವು ಎಂದಿಗೂ ಮರೆಯಲಾಗದ ಪ್ರತೀಕಾರವನ್ನು ನೋಡುತ್ತೀರಿ. ಬಿಎಲ್‌ಎ ಮಜೀದ್ ಬ್ರಿಗೇಡ್ ಕಮಾಂಡರ್ ಹೊಸದಾಗಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಬೆದರಿಕೆ ಹಾಕಿದ್ದಾರೆ’’ ಎಂದು ಶೀರ್ಷಿಕೆ ನೀಡಲಾಗಿದೆ.

ಈ ಎಕ್ಸ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕ್ಲಿಪ್‌ನ ದೀರ್ಘ ಆವೃತ್ತಿಯ ಆರಂಭಿಕ ಕೆಲವು ಫ್ರೇಮ್‌ಗಳಲ್ಲಿ, ಬಿಎಲ್‌ಎ ನಾಯಕ, "ನಮ್ಮ ಆತ್ಮತ್ಯಾಗ ತಂಡ ಮಜೀದ್ ಬ್ರಿಗೇಡ್ ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲೆ ದಾಳಿ ಮಾಡಿ ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ಭಾರೀ ನಷ್ಟವನ್ನುಂಟುಮಾಡಿತು..." ಎಂದು ಹೇಳುತ್ತಾರೆ. ವೀಡಿಯೊದ ಆರಂಭದಲ್ಲಿ ಮತ್ತು 0:46 ಸೆಕೆಂಡ್​ ವೇಳೆ ಹೋಟೆಲ್ ಮೇಲೆ ನಡೆಸಿದ ದಾಳಿಯ ಬಗ್ಗೆ ಎರಡು ಬಾರಿ ಉಲ್ಲೇಖಿಸುವುದನ್ನು ಕೇಳಬಹುದು.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಹೋಟೆಲ್ ಮೇಲೆ ಬಿಎಲ್‌ಎ ನಡೆಸಿದ ದಾಳಿಯ ಕುರಿತು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿ ಇಮೇಜ್ ಸೆಕ್ಷನ್​ನಲ್ಲಿ ಹುಡುಕಿದ್ದೇವೆ. ಆಗ ಮೇ 19, 2019 ರಂದು ದಿ ಬಲೂಚಿಸ್ತಾನ್ ಪೋಸ್ಟ್ ವೈರಲ್ ವೀಡಿಯೊದ ದೃಶ್ಯಗಳಿಗೆ ಹೋಲುವ ಸ್ಕ್ರೀನ್‌ಶಾಟ್​ನೊಂದಿಗೆ ಪ್ರಕಟಿಸಿದ ಸುದ್ದಿ ನಮಗೆ ಸಿಕ್ಕಿತು.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಬಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್‌ನ ನಾಲ್ವರು ಸದಸ್ಯರು ಗ್ವಾದರ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ನುಗ್ಗಿ 26 ಗಂಟೆಗಳ ಕಾಲ ಪಾಕಿಸ್ತಾನಿ ಕಮಾಂಡೋಗಳೊಂದಿಗೆ ನಡೆದ ಮುಖಾಮುಖಿಯ ಕೆಲವೇ ದಿನಗಳಲ್ಲಿ ಈ ವೀಡಿಯೊ ಬಿಡುಗಡೆಯಾಗಿದೆ. ಮೇ 11 ರಂದು ಗ್ವಾದರ್‌ನಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಮಾರಕ ದಾಳಿಯು ಬೀಜಿಂಗ್‌ನ ಆಯಕಟ್ಟಿನ ಆಳ ಸಮುದ್ರ ಬಂದರು ಸೇರಿದಂತೆ ಪಾಕಿಸ್ತಾನದಲ್ಲಿ ಪ್ರಮುಖ ಅಭಿವೃದ್ಧಿ ಅಭಿಯಾನದ ಸುತ್ತಲಿನ ಭದ್ರತಾ ಕಳವಳಗಳನ್ನು ತೀವ್ರಗೊಳಿಸಿದೆ’’ ಎಂಬ ಮಾಹಿತಿ ಇದರಲ್ಲಿದೆ.

ANI ಕೂಡ ಮೇ 19, 2019 ರಂದು ‘‘ಅಧ್ಯಕ್ಷ ಜಿನ್‌ಪಿಂಗ್ ನಿಮಗೆ ಬಲೂಚಿಸ್ತಾನ ತೊರೆಯಲು ಇನ್ನೂ ಸಮಯವಿದೆ ಎಂದು ಬಿಎಲ್‌ಎಯ ಮಜೀದ್ ಬ್ರಿಗೇಡ್ ಚೀನಾ, ಪಾಕ್‌ಗೆ ಬೆದರಿಕೆ ಹಾಕಿದೆ’’ ಎಂಬ ಶೀರ್ಷಿಕೆಯೊಂದಿಗೆ ಈ ಕುರಿತು ಸುದ್ದಿ ಪ್ರಕಟಿಸಿದೆ. ಇದರಲ್ಲಿ ಕೂಡ ‘‘ಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್‌ನ ನಾಲ್ವರು ಸದಸ್ಯರು ಗ್ವಾದರ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ನುಗ್ಗಿ 26 ಗಂಟೆಗಳ ಕಾಲ ಪಾಕಿಸ್ತಾನ ಮತ್ತು ಕಮಾಂಡೋಗಳೊಂದಿಗೆ ಯುದ್ಧ ಮಾಡಿದ ಎಂಟು ದಿನಗಳ ನಂತರ ಈ ವೀಡಿಯೊ ಬಿಡುಗಡೆಯಾಗಿದೆ’’ ಎಂದು ಬರೆಯಲಾಗಿದೆ.

ಮೇ 2019 ರಲ್ಲಿ ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್‌ ಮೇಲಿನ ದಾಳಿಯ ಕೆಲವು ದಿನಗಳ ನಂತರ ಈ ವೀಡಿಯೊ ಬಿಡುಗಡೆ ಆಗಿದೆ ಎಂದು ಅದೇ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಓದಬಹುದು.

ಹಾಗೆಯೆ ಮೇ 2019 ರಲ್ಲಿ ಗ್ವಾದರ್‌ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ನಡೆದ ದಾಳಿಯ ಕುರಿತ ವರದಿಯನ್ನು ಇಲ್ಲಿ, ಇಲ್ಲಿ ಓದಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಗ್ವಾದರ್ ಹೋಟೆಲ್ ದಾಳಿಯ ನಂತರ ಬಿಎಲ್‌ಎ ನಾಯಕರೊಬ್ಬರು ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ 2019 ರ ವೀಡಿಯೊವನ್ನು 2025 ರ ಜಾಫರ್ ಎಕ್ಸ್‌ಪ್ರೆಸ್ ಅಪಹರಣಕ್ಕೆ ಸಂಬಂಧಿಸಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನ್ಯೂಸ್ ಮೀಟರ್ ಖಚಿತವಾಗಿ ಹೇಳುತ್ತದೆ.

Claim Review:ಜಾಫರ್ ಎಕ್ಸ್‌ಪ್ರೆಸ್ ಅಪಹರಣ 2025ರ ನಂತರ ಬಿಎಲ್ಎ ನಾಯಕ ಬಲೂಚಿಸ್ತಾನದ ತಂಟೆಗೆ ಬರದಂತೆ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆ ಕೊಟ್ಟಿದ್ದಾರೆ.

Claimed By:Facebook User

Claim Reviewed By:NewsMeter

Claim Source:Social Media

Claim Fact Check:False

Fact:ಗ್ವಾದರ್ ಹೋಟೆಲ್ ದಾಳಿಯ ನಂತರ ಬಿಎಲ್‌ಎ ನಾಯಕರೊಬ್ಬರು ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ 2019 ರ ವೀಡಿಯೊ ಇದಾಗಿದೆ.

ಈ ಲೇಖನವನ್ನು ಮೊದಲು 'newsmeter.in' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

share
newsmeter.in
newsmeter.in
Next Story
X