ಎರಡನೇ ದಿನಕ್ಕೆ ಕಾಲಿಟ್ಟ CJP ಪ್ರತಿಭಟನೆ : ವಿದ್ಯಾರ್ಥಿಗಳ ಜೊತೆ ಕೈ ಜೋಡಿಸುವಂತೆ ರೈತರಿಗೆ ಅಭಿಜಿತ್ ದೀಪ್ಕೆ ಮನವಿ

Photo | thehindu /Sushil Kumar Verma
ಹೊಸದಿಲ್ಲಿ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ರವಿವಾರ 2ನೇ ದಿನಕ್ಕೆ ಕಾಲಿಟ್ಟಿದೆ.
ಸಚಿವರು ರಾಜೀನಾಮೆ ನೀಡುವವರೆಗೂ ತಾವು ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದು , ಈ ಮಧ್ಯೆ ಪೊಲೀಸರು ಪ್ರತಿಭಟನಾ ಸ್ಥಳ ಖಾಲಿ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
CJP ಸ್ಥಾಪಕ ಅಭಿಜಿತ್ ದೀಪ್ಕೆ , ದೇಶದಾದ್ಯಂತದ ರೈತರು ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಬೇಕು ಎಂದು ಆಗ್ರಹಿಸಿದ್ದಾರೆ.
ದಿಲ್ಲಿ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಲೈಟ್ಸ್ ನ್ನು ಆಫ್ ಮಾಡಿದ್ದಾರೆ ಮತ್ತು ನೀರು, ಆಹಾರ ಹಾಗೂ ಶೌಚಾಲಯಗಳ ಬಳಕೆಗೆ ನಿರ್ಬಂಧ ಹೇರಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ. ಆ ಬಳಿಕ, ನೀರು ಸರಬರಾಜನ್ನು ಪುನಃ ಕಲ್ಪಿಸಲಾಗಿದ್ದು, ದೀಪಗಳನ್ನು ಮತ್ತೆ ಆನ್ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿರುವ ಶೌಚಾಲಯಗಳಿಗೆ ನೀರು ಸರಬರಾಜನ್ನು ಸ್ಥಗಿತಗೊಳಿಸದಂತೆ ದೀಪ್ಕೆ ಅವರು ದಿಲ್ಲಿ ಪೊಲೀಸರಲ್ಲಿ ವಿನಂತಿಸಿದ್ದಾರೆ.




