ಗುವಾಹಟಿಯಲ್ಲಿ ಸಿಜೆಪಿ ಸಹ-ಸಂಯೋಜಕ ಅಶುತೋಷ್ ರಂಕಾ, ತಂಡ ಪೊಲೀಸ್ ವಶಕ್ಕೆ
ಅಸ್ಸಾಂನ ಶಾಲೆಗಳ ಸ್ಥಿತಿ ಬಹಿರಂಗವಾಗುವ ಭಯ ಹಿಮಂತ ಶರ್ಮಾ ಅವರಿಗಿದೆ ಎಂದ ಅಶುತೋಷ್

Photo Credit: Screengrab Times Now
ಗುವಾಹಟಿ: ಸಿಜೆಪಿ (CJP)ಯ ಸಹ-ಸಂಯೋಜಕ ಅಶುತೋಷ್ ರಂಕಾ ಮತ್ತು ಅವರ ತಂಡವನ್ನು ರವಿವಾರ ಗುವಾಹಟಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದಿರುವ ಕುರಿತು ರಂಕಾ ಮಾತನಾಡಿ, ‘ಅಸ್ಸಾಂನ ಶಾಲೆಗಳ ನಿಜವಾದ ಸ್ಥಿತಿಯನ್ನು ನಾವು ಜನರಿಗೆ ತೋರಿಸಿದರೆ, ಶಾಲೆಗಳ ಪರಿಸ್ಥಿತಿ ದೇಶಕ್ಕೆ ಗೊತ್ತಾಗುತ್ತದೆ ಎಂಬ ಭಯ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗಿದೆ’ ಎಂದು ಆರೋಪಿಸಿದರು.
‘ಕಾಝಿರಂಗದಲ್ಲಿ ನಮ್ಮ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದನ್ನು ನಾವು ಬಹಿರಂಗಪಡಿಸುತ್ತೇವೆ ಎಂಬ ಭಯವೂ ಅವರಿಗೆ ಇದೆ. ಭೂಮಿ, ಅರಣ್ಯ ಮತ್ತು ಜಲ ಸಂಪನ್ಮೂಲಗಳನ್ನು ಕಸಿದುಕೊಂಡು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಈ ಸಂಗತಿಯನ್ನೂ ನಾವು ಬಯಲಿಗೆಳೆಯುತ್ತೇವೆ ಎಂಬ ಕಾರಣಕ್ಕೆ ಹಿಮಂತ ಬಿಸ್ವಾ ಶರ್ಮಾ ಭಯಭೀತರಾಗಿದ್ದಾರೆ’ ಎಂದು ಅವರು ಆರೋಪಿಸಿದರು.
Next Story






