ವಾಣಿಜ್ಯ ಬಳಕೆಯ ಅಡುಗೆ ಅನಿಲ ಬೆಲೆ ಏರಿಕೆ, ವಿಮಾನ ಇಂಧನ ಬೆಲೆ ಇಳಿಕೆ
ಚುನಾವಣೆಯ ಹೊಸ್ತಿಲಲ್ಲಿ ಇಳಿದಿದ್ದ ಸಿಲಿಂಡರ್ ಬೆಲೆ, ಈಗ 21.ರೂ ಹೆಚ್ಚಳ

ಸಾಂದರ್ಭಿಕ ಚಿತ್ರ | Photo: NDTV
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ತೈಲಮಾರುಕಟ್ಟೆ ಕಂಪೆನಿಗಳು ಶುಕ್ರವಾರ ವಾಣಿಜ್ಯ ಬಳಕೆಯ 19 ಕಿಲೋಗ್ರಾಂ ಮ್ತೂಗುವ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 21 ರೂಪಾಯಿಗಳಷ್ಟು ಹೆಚ್ಚಿಸಿವೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆದಿಲ್ಲಿಯಲ್ಲಿ 1,796.50 ರೂಪಾಯಿ, ಕೋಲ್ಕತದಲ್ಲಿ 1,908 ರೂಪಾಯಿ, ಮುಂಬೈಯಲ್ಲಿ 1,749 ರೂಪಾಯಿ ಮತ್ತು ಚೆನ್ನೈಯಲ್ಲಿ 1,968.5 ರೂಪಾಯಿ ಆಗಲಿದೆ.
ಇದಕ್ಕೂ ಮೊದಲು, ನವೆಂಬರ್ 16ರಂದು ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆಯನ್ನು 57 ರೂಪಾಯಿ ನಷ್ಟು ಕಡಿತಗೊಳಿಸಲಾಗಿತ್ತು. ಆದರೆ ಎರಡು ತಿಂಗಳುಗಳ ಅವಧಿಯಲ್ಲಿ ಮಾಡಲಾದ ತೀವ್ರ ಏರಿಕೆಗಳ ಬಳಿಕ, ಈಕಡಿತವನ್ನು ಘೋಷಿಸಲಾಗಿತ್ತು. ಅಕ್ಟೋಬರ್ ಒಂದ ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು 209 ರೂ. ಮತ್ತು ನವೆಂಬರ್ ಒಂದರಂದು 100 ರೂ.ನಷ್ಟು ಏರಿಸಲಾಗಿತ್ತು.
ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 14.2 ಕಿಲೋಗ್ರಾಮ್ಸ ಗೃಹ ಬಳಕೆ ಲಿಂಡರ್ ಬೆಲೆ ಈಗ ದಿಲ್ಲಿಯಲ್ಲಿ 903 ರೂ. ಆಗಿದೆ.
ಭಾರತದಲ್ಲಿ ಅಡುಗೆ ಅನಿಲದ ಬೆಲೆಯನ್ನು ಇಂಡಿಯನ್ ಆಯಿಲ್ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ನಿಯಂತ್ರಿಸುತ್ತಿವೆ. ಹಿಂದಿನ ತಿಂಗಳ ಸರಾಸರಿ ಅಂತರಾಷ್ಟ್ರೀಯ ಬೆಲೆಯ ಆಧಾರದಲ್ಲಿ ಪ್ರತಿ ತಿಂಗಳ ಮೊದಲದಿನದಂದು ಬೆಲೆಯನ್ನು ಪರಿಷ್ಕರಿಸಲಾಗುತ್ತದೆ.
ವಿಮಾನ ಇಂಧನ ಬೆಲೆಯಲ್ಲಿ ಕಡಿತ
ಅದೇವೇಳೆ, ತೈಲಮಾರುಕಟ್ಟೆಕಂಪೆನಿಗಳುಶುಕ್ರವಾರವಿಮಾನಇಂಧನ (ಎಟಿಎಫ್) ದರವನ್ನು 5.79 ಶೇಕಡದಷ್ಟುಕಡಿತಮಾಡಿವೆ. ಇದರೊಂದಿಗೆ, 1,000 ಲೀಟರ್ಇಂಧನದಬೆಲೆಯು 1,06,155.7ರೂಪಾಯಿಗೆಇಳಿದಿದೆ.
ಇದಕ್ಕೂಮೊದಲು, ನವೆಂಬರ್ 1ರಂದುವಿಮಾನಇಂಧನದರವನ್ನು 6 ಶೇಕಡದಷ್ಟುಇಳಿಸಲಾಗಿತ್ತು. ಒಟ್ಟಾರೆಯಾಗಿಅಕ್ಟೋಬರ್ಒಂದರಿಂದೀಚೆಗೆವಿಮಾನಇಂಧನದಬೆಲೆಯುಬಹುತೇಕಮೂರನೇಒಂದರಷ್ಟುಇಳಿದಿದೆ. ಅಂದರೆಸಾವಿರಲೀಟರ್ಇಂಧನದಬೆಲೆಯು 29,391 ರೂ.ನಷ್ಟುಇಳಿದಿದೆ. ಜುಲೈಯಿಂದನಿರಂತರವಾಗಿನಾಲ್ಕುತಿಂಗಳುಬೆಲೆಏರಿಸಿದಬಳಿಕಈಕಡಿತವನ್ನುಮಾಡಲಾಗಿದೆ.







