ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 99.75 ರೂ. ಇಳಿಕೆ

ಹೊಸದಿಲ್ಲಿ: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಆಗಸ್ಟ್ 1ರಿಂದ ಜಾರಿಗೆ ಬರುವಂತೆ 99.75 ರೂ. ಇಳಿಕೆ ಮಾಡಲಾಗಿದೆ.
ದರ ಇಳಿಕೆಯಿಂದಾಗಿ ದಿಲ್ಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,680 ರೂ. ತಲುಪಿದೆ.
ಪ್ರತಿ ತಿಂಗಳ ಮೊದಲನೆ ದಿನ ಎಲ್ ಪಿಜಿ ದರ ಪರಷ್ಕೃರಣೆ ಮಾಡಲಾಗುತ್ತದೆ.
ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರ ಇಳಿಕೆಯಾಗಿದ್ದರೆ, ಜೂನ್ ನಲ್ಲಿ ಏರಿಸಲಾಗಿತ್ತು. ಏತನ್ಮಧ್ಯೆ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ದರ ಯಥಾಸ್ಥಿತಿಯಲ್ಲಿದೆ.
Next Story





