ಬಸ್ ಚಲಾಯಿಸುತ್ತಿದ್ದಾಗ ಚಾಲಕನಿಗೆ ಹೃದಯಾಘಾತ; ಕಂಡಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Photo credit: indiatoday.in
ಚೆನ್ನೈ : ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಬಸ್ ಚಲಾಯಿಸುತ್ತಿದ್ದಾಗ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ ನಿರ್ವಾಹಕ ಬಸ್ ನಿಲ್ಲಿಸಿ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದಾರೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುದುಕೊಟ್ಟೈ ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರಿದ್ದರು. ಬಸ್ ಕನಕಂಪಟ್ಟಿ ದಾಟುತ್ತಿದ್ದಂತೆ ಚಾಲಕ ಪ್ರಭು ಕಂಡಕ್ಟರ್ಗೆ ಕರೆ ಮಾಡಿ ನನಗೆ ಜೋರಾಗಿ ಎದೆ ನೋಯುತ್ತಿದೆ ಎಂದು ಹೇಳಲು ಪ್ರಯತ್ನಿಸಿದರು. ಆದರೆ ಕಂಡೆಕ್ಟರ್ ಪ್ರತಿಕ್ರಿಯಿಸುವ ಮೊದಲೇ ಪ್ರಭು ಕುಸಿದು ಬಿದ್ದರು. ಹೃದಯಾಘಾತವಾಗಿ ಕುಸಿದು ಬಿದ್ದ ಚಾಲಕನಿಗೆ ಕಂಡಕ್ಟರ್ ಮತ್ತು ಪ್ರಯಾಣಿಕರು ಸಹಾಯಕ್ಕೆ ಧಾವಿಸುವುದು. ಕಂಡೆಕ್ಟರ್ ಬ್ರೇಕ್ ಹಿಡಿದು ಬಸ್ ಅನ್ನು ನಿಯಂತ್ರಣಕ್ಕೆ ತರುವುದು ಕಂಡು ಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
பழனி அருகே மாட்டுப் பாதையில் தனியார் பேருந்து ஓட்டுநர் திடீர் மாரடைப்பால் மரணம். துரிதமாக செயல்பட்டு பேருந்தை நிறுத்திய நடத்துநர்.#heartattack #TamilNadu #Chanakyaa
— சாணக்யா (@ChanakyaaTv) May 23, 2025
Stay informed with the latest news through Chanakyaa via https://t.co/sbYbLDGhBo pic.twitter.com/358EDntWLE







