ಕಾಂಗ್ರೆಸ್ ಪಕ್ಷ ಹೊಸ ಮುಸ್ಲಿಂ ಲೀಗ್: ಬಿಜೆಪಿ ವಾಗ್ದಾಳಿ

ಹೊಸದಿಲ್ಲಿ: ಪ್ರಾರ್ಥನಾ ಸ್ಥಳಗಳ (ವಿಶೇಷ ಹಕ್ಕುಗಳು) ಕಾಯ್ದೆಯನ್ನು ಸುಪ್ರೀಂಕೋರ್ಟ್ ನಲ್ಲಿ ಬೆಂಬಲಿಸಿರುವ ಕಾಂಗ್ರೆಸ್ ಕ್ರಮವನ್ನು ಹಿಂದೂಗಳ ವಿರುದ್ಧದ ಬಹಿರಂಗ ಸಮರ ಎಂದು ಬಿಜೆಪಿ ವಿಶ್ಲೇಷಿಸಿದ್ದು, ಪಕ್ಷ ಇದೀಗ ಹೊಸ ಮುಸ್ಲಿಂ ಲೀಗ್ ಎಂದು ಟೀಕಿಸಿದೆ.
"ಐತಿಹಾಸಿಕ ಅನ್ಯಾಯಕ್ಕೆ ಪರಿಹಾರ ಪಡೆಯುವ ಹಿಂದೂಗಳ ಮೂಲಭೂತ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲು ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ನ ಕಟ್ಟೆ ಏರಿದೆ. ಪ್ರಾರ್ಥನಾ ಸ್ಥಳಗಳ ಕಾಯ್ದೆ-1991ನ್ನು ಪ್ರಶ್ನಿಸುವ ಅರ್ಜಿಯನ್ನು ವಜಾಗೊಳಿಸುವಂತೆ ದೇಶದ ಅತ್ಯುನ್ನತ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದೆ" ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
Next Story





