‘ನೀಲಿ ಡ್ರಮ್’ ಕೊಲೆ ಪ್ರಕರಣ: ಮುಸ್ಕಾನ್ ರಸ್ತೋಗಿ, ಪ್ರಿಯಕರ ಸಾಹಿಲ್ ಶುಕ್ಲಾಗೆ ಗಲ್ಲು ಶಿಕ್ಷೆ

Photo Credit : NDTV
ಮೀರತ್: ‘ನೀಲಿ ಡ್ರಮ್’ ಕೊಲೆ ಪ್ರಕರಣದಲ್ಲಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಮೀರತ್ ನ್ಯಾಯಾಲಯ ಬುಧವಾರ ಗಲ್ಲು ಶಿಕ್ಷೆ ವಿಧಿಸಿದೆ.
ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್ಪುತ್ ಅವರನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ಇಬ್ಬರನ್ನೂ ಸೆ.30ರಂದು ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಪ್ರಕರಣವು ಅತ್ಯಂತ ‘ಅಪರೂಪದಲ್ಲಿ ಅಪರೂಪ’ (rarest of rare) ವರ್ಗಕ್ಕೆ ಸೇರುತ್ತದೆ ಎಂದು ವಾದಿಸಿದ್ದ ಪ್ರಾಸಿಕ್ಯೂಷನ್, ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿತ್ತು.
2025ರ ಮಾರ್ಚ್ ನಲ್ಲಿ ಮೀರತ್ ನಲ್ಲಿ ರಾಜ್ಪುತ್ ಹತ್ಯೆಯಾಗಿದ್ದರು. ಬಳಿಕ ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಸಿಮೆಂಟ್ ಮತ್ತು ಮರಳು ತುಂಬಿದ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ಬಚ್ಚಿಡಲಾಗಿತ್ತು. ಡ್ರಮ್ನೊಳಗೆ ಅವಶೇಷಗಳು ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
126 ಬಾರಿ ಪ್ರಕರಣದ ವಿಚಾರಣೆ ನಡೆದಿದ್ದು, 22 ಮಂದಿ ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ:
2025ರ ಮಾರ್ಚ್ನಲ್ಲಿ ಮೀರತ್ನಲ್ಲಿ ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್ಪುತ್ ಹತ್ಯೆಯಾಗಿದ್ದರು. ಆರೋಪಿಗಳಾದ ಸೌರಭ್ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಸೇರಿ ರಾಜ್ಪುತ್ ಅವರನ್ನು ಹತ್ಯೆ ಮಾಡಿ, ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ್ದರು. ಬಳಿಕ ಅವಶೇಷಗಳನ್ನು ಸಿಮೆಂಟ್ ಮತ್ತು ಮರಳು ತುಂಬಿದ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ಬಚ್ಚಿಟ್ಟಿದ್ದರು.
ರಾಜ್ಪುತ್ ನಾಪತ್ತೆಯಾಗಿರುವ ಕುರಿತು ತನಿಖೆ ಆರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ನೀಲಿ ಡ್ರಮ್ನಲ್ಲಿ ಅವರ ದೇಹದ ಅವಶೇಷಗಳು ಪತ್ತೆಯಾಗಿದ್ದವು. ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪವೂ ಇಬ್ಬರ ಮೇಲಿತ್ತು.






