ದಿಲ್ಲಿ ವಿಧಾನಸಭಾ ಚುನಾವಣೆ | ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿದ ಸಮೀಕ್ಷೆಗಳು

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ದಿಲ್ಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದೆ. JVC ನಡೆಸಿದ ಸಮೀಕ್ಷೆಯು ಬಿಜೆಪಿಗೆ 39-45 ಸ್ಥಾನಗಳನ್ನು ನೀಡಿದರೆ, ಪೀಪಲ್ಸ್ ಪಲ್ಸ್ 51-60 ಸ್ಥಾನ, ಮಾಟ್ರಿಝ್ 35-40 ಸ್ಥಾನ, ಪೀಪಲ್ಸ್ ಇನ್ಸೈಟ್ 40-44 ಸ್ಥಾನಗಳನ್ನು ನೀಡಿದೆ.
ಪಿ ಮಾರ್ಗ್ ಸಮೀಕ್ಷೆಯು ಬಿಜೆಪಿಗೆ 39-49 ಸ್ಥಾನಗಳನ್ನು, ಚಾಣಕ್ಯ 39-44, ಪೋಲ್ ಡೈರಿ 42-50, ಡಿವಿ ರಿಸರ್ಚ್ 36-44, ವಿ ಪ್ರಿಸೈಡ್ 18-23 ಸ್ಥಾನಗಳನ್ನು ನೀಡಿದೆ.
ವಿ ಪ್ರಿಸೈಡ್ ಚುನಾವಣಾ ಸಮೀಕ್ಷೆ ಮಾತ್ರ ಆಪ್ ಗೆಲ್ಲುತ್ತದೆ ಎಂದು ಹೇಳಿದೆ. ಅದು ಆಮ್ ಆದ್ಮಿಗೆ 46-52 ಸ್ಥಾನಗಳನ್ನು ನೀಡಿದೆ.
ಮಾಟ್ರಿಝ್ ಪ್ರಕಾರ ಆಪ್ 32-37 ಸ್ಥಾನಗಳನ್ನು ಗೆಲ್ಲಲಿದೆ. ಜೆವಿಸಿ ಪೋಲ್ ಸಮೀಕ್ಷೆಯಂತೆ 22-31, ಪೀಪಲ್ಸ್ ಪಲ್ಸ್ 10-19, ಪೀಪಲ್ಸ್ ಇನ್ಸೈಟ್ 25-29, ಪಿ ಮಾರ್ಕ್ 21-31, ಚಾಣಕ್ಯ 25-28, ಪೋಲ್ ಡೈರಿ 18-25, ಡಿವಿ ರಿಸರ್ಚ್ 26-34 ಸ್ಥಾನಗಳಲ್ಲಿ ಆಪ್ ಪಕ್ಷವು ಗೆಲ್ಲಲಿದೆ ಎಂದು ಹೇಳಿದೆ.
ಮಾಟ್ರಿಝ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ 0-1, ಜೆವಿಸಿ ಪೋಲ್ ನಲ್ಲಿ 0-2, ಪೀಪಲ್ಸ್ ಪಲ್ಸ್ ನಲ್ಲಿ ಶೂನ್ಯ, ಪೀಪಲ್ಸ್ ಇನ್ಸೈಟ್ ಪ್ರಕಾರ 0-1, ಪಿ-ಮಾರ್ಕ್ 0-1, ಚಾಣಕ್ಯ 2-3, ಪೋಲ್ ಡೈರಿ 0-2, ಆರ್ ವಿ ರಿಸರ್ಚ್ ಕಾಂಗ್ರೆಸ್ ಪಕ್ಷಕ್ಕೆ ಸಮೀಕ್ಷೆಯಲ್ಲಿ ಶೂನ್ಯ ಸ್ಥಾನ ನೀಡಿದೆ.