ನೀಟ್ ಪರೀಕ್ಷಾ ಅಕ್ರಮಗಳ ಕುರಿತು ಚರ್ಚೆಗೆ ಒತ್ತಾಯ: 12 ಗಂಟೆಯವರೆಗೆ ಲೋಕಸಭೆ ಅಧಿವೇಶನ ಮುಂದೂಡಿಕೆ

ಸಾಂದರ್ಭಿಕ ಚಿತ್ರ Photo: PTI
ಹೊಸದಿಲ್ಲಿ: ಮಂಗಳವಾರ ಆರಂಭವಾದ ಲೋಕಸಭೆ ಅಧಿವೇಶನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಗಿದೆ.
ಪ್ರಶ್ನೋತ್ತರ ವೇಳೆಯೊಂದಿಗೆ ಆರಂಭವಾದ ಲೋಕಸಭೆಯ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ಹಿಬಿ ಈಡನ್ ತುರ್ತು ಚರ್ಚೆಗೆ ಒತ್ತಾಯಿಸುವ ನಿಲುವಳಿ ಸೂಚನೆ ನೀಡಿದರು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಲ್ಲಿ ಮರುಕಳಿಸುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಕುರಿತು ಚರ್ಚಿಸಲು ನಿಲುವಳಿ ಸೂಚನೆ ನೀಡಿದ ಕಾಂಗ್ರೆಸ್ ಸಂಸದ, ಚರ್ಚೆಗೆ ಒತ್ತಾಯಿಸಿದ್ದಾರೆ.
ಬಳಿಕ ಅಧಿವೇಶನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.
Next Story




