ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಭಯೋತ್ಪಾದಕರು : ಹೈದರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ

Photo | timesofindia
ಕರ್ನೂಲ್ : ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಭಯೋತ್ಪಾದಕರು, ಅಂತಹವರ ಮೇಲೆ ಕರುಣೆ ತೋರುವುದಿಲ್ಲ ಎಂದು ಕರ್ನೂಲ್ ಬಸ್ ದುರಂತದ ಬಗ್ಗೆ ಪ್ರತಿಕ್ರಿಯಿಸುವಾಗ ಹೈದರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ ಹೇಳಿದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿ ಸಿ ಸಜ್ಜನರ, ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಭಯೋತ್ಪಾದಕರು ಮತ್ತು ಅವರ ಕೃತ್ಯಗಳು ಭಯೋತ್ಪಾದನಾ ಕೃತ್ಯಗಳಿಗಿಂತ ಕಡಿಮೆಯಿಲ್ಲ. 20 ಅಮಾಯಕರ ಪ್ರಾಣಹಾನಿಯಾದ ಕರ್ನೂಲ್ ಬಸ್ ದುರಂತ ನಿಜವಾದ ಅರ್ಥದಲ್ಲಿ ಅಪಘಾತವಲ್ಲ. ಇದು ಕುಡಿದ ಮತ್ತಿನಲ್ಲಿ ಬೈಕ್ ಸವಾರನ ಅಜಾಗರೂಕ ಮತ್ತು ಬೇಜವಾಬ್ದಾರಿ ವರ್ತನೆಯಿಂದ ಉಂಟಾದ ತಡೆಗಟ್ಟಬಹುದಾದ ಹತ್ಯೆಯಾಗಿತ್ತು. ಇದು ರಸ್ತೆ ಅಪಘಾತವಲ್ಲ, ನಿರ್ಲಕ್ಷ್ಯದ ಕ್ರಿಮಿನಲ್ ಕೃತ್ಯವಾಗಿದೆ. ಸೆಕೆಂಡುಗಳಲ್ಲಿ ಇಡೀ ಕುಟುಂಬಗಳನ್ನು ನಾಶಮಾಡಿತು. ಬಿ.ಶಿವ ಶಂಕರ್ ಎಂದು ಗುರುತಿಸಲಾದ ಬೈಕ್ ಸವಾರ ಮದ್ಯದ ಅಮಲಿನಲ್ಲಿದ್ದ. ಮದ್ಯಪಾನ ಮಾಡಿ ಚಲಾಯಿಸುವ ಅವನ ನಿರ್ಧಾರವು ಊಹಿಸಲಾಗದ ಪ್ರಮಾಣದ ದುರಂತವಾಗಿ ಪರಿವರ್ತನೆಯಾಯಿತು ಎಂದು ಹೇಳಿದರು.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಪ್ರತಿಯೊಂದು ಅರ್ಥದಲ್ಲಿಯೂ ಭಯೋತ್ಪಾದಕರು ಎಂಬ ನನ್ನ ಹೇಳಿಕೆಗೆ ನಾನು ದೃಢವಾಗಿ ಬದ್ಧನಾಗಿದ್ದೇನೆ. ಅವರು ಜನರ ಜೀವನ, ಕುಟುಂಬಗಳು ಮತ್ತು ಭವಿಷ್ಯವನ್ನು ನಾಶಪಡಿಸುತ್ತಾರೆ. ಇಂತಹ ಕೃತ್ಯಗಳನ್ನು ಎಂದಿಗೂ ಸಹಿವುದಿಲ್ಲ ಎಂದು ಹೇಳಿದರು.
ಹೈದರಾಬಾದ್ನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಶೂನ್ಯ ಸಹನೆ ನೀತಿಯನ್ನು ಅನುಸರಿಸುತ್ತಿದ್ದೇವೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಯಾವುದೇ ದಯೆ, ವಿನಾಯಿತಿ ಮತ್ತು ಕರುಣೆ ತೋರುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಮಧ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ತಪ್ಪು ಎಂದು ಕರೆಯುವ ಸಮಯ ಮುಗಿದಿದೆ. ಇದು ಅಪರಾಧವಾಗಿದ್ದು, ಅದಕ್ಕೆ ತಕ್ಕಂತೆ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
Drunk drivers are terrorists. Period.
— V.C. Sajjanar, IPS (@SajjanarVC) October 26, 2025
Drunk drivers are terrorists and their actions are nothing short of acts of terror on our roads. The horrific #Kurnool bus accident, which claimed the lives of 20 innocent people, was not an accident in the truest sense. It was a preventable… pic.twitter.com/oXTp0uOt2k







