ದಿಲ್ಲಿ ಪ್ರತಿಭಟನೆ | ಧ್ರುವ್ ರಾಠೀ ಬಿಡುಗಡೆ: CJP ನಾಯಕ ಅಭಿಜಿತ್ ದೀಪ್ಕೆ ಸೇರಿ ಮೂವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು

ಧ್ರುವ್ ರಾಠೀ , ಅಭಿಜಿತ್ ದೀಪ್ಕೆ | Photo Credit : PTI
ಹೊಸದಿಲ್ಲಿ: ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದ್ದ ಯೂಟ್ಯೂಬರ್ ಧ್ರುವ್ ರಾಠೀ ಅವರನ್ನು ಪೊಲೀಸರು ತಡರಾತ್ರಿ ಬಿಡುಗಡೆ ಮಾಡಿದ್ದಾರೆ. ಆದರೆ, ಸಿಜೆಪಿ (CJP) ನಾಯಕರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ಪೊಲೀಸ್ ವಶ ಮುಂದುವರಿದಿದೆ.
ಈ ಮೂವರನ್ನು ರವಿವಾರ ದಿಲ್ಲಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
Next Story




