ಉಪ ರಾಷ್ಟ್ರಪತಿ ಚುನಾವಣೆ : ಅಧಿಸೂಚನೆ ಪ್ರಕಟ

Photo Credit: PTI
ಹೊಸದಿಲ್ಲಿ: ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗಾಗಿ ಚುನಾವಣಾ ಆಯೋಗ ಗುರುವಾರ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯ ಪ್ರಕಾರ ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕ. ನಾಮಪತ್ರಗಳ ಪರಿಶೀಲನೆ ಆಗಸ್ಟ್ 22ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಆಗಸ್ಟ್ 25 ಕೊನೆಯ ದಿನಾಂಕ. ಚುನಾವಣೆ ಸೆಪ್ಟಂಬರ್ 9ರಂದು ನಡೆಯಲಿದೆ.
ಜಗದೀಪ್ ಧನ್ಕರ್ ಅವರು ಅನಾರೋಗ್ಯದ ಕಾರಣ ಉಲ್ಲೇಖಿಸಿ 2025 ಜುಲೈ 21ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂವಿಧಾನದ ಕಲಂ 67 (ಎ) ಅಡಿಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದರು.
ಧನ್ಕರ್ ಅವರ ಅಧಿಕಾರಾವಧಿ 2027 ಆಗಸ್ಟ್ ವರೆಗೆ ಇತ್ತು. ಆದರೆ, ಅವರು ರಾಜೀನಾಮೆ ನೀಡಿದ ಬಳಿಕ ಉಪ ರಾಷ್ಟ್ರಪತಿ ಸ್ಥಾನ ಖಾಲಿ ಉಳಿದಿದೆ.
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರು ಮತದಾನ ಮಾಡಲು ಅವಕಾಶ ಇದೆ.
Next Story





