ʼಒಂದು ರಾಷ್ಟ್ರ ಒಂದು ಚುನಾವಣಾʼ ಸಮಿತಿಗೆ ಮಾಜಿ ನ್ಯಾಯಮೂರ್ತಿ ರೋಹಿತ್ ಆರ್ಯರನ್ನು ಸಂಯೋಜಕರನ್ನಾಗಿ ನೇಮಿಸಿದ ಬಿಜೆಪಿ
ನಿವೃತ್ತಿಯಾದ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದ ನ್ಯಾಯಮೂರ್ತಿಗಳು

ರೋಹಿತ್ ಆರ್ಯ | PC : barandbench.com
ಹೊಸದಿಲ್ಲಿ : ಮಧ್ಯಪ್ರದೇಶ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ರೋಹಿತ್ ಆರ್ಯ ಅವರನ್ನು ಬಿಜೆಪಿ ಪಕ್ಷ ʼಒಂದು ರಾಷ್ಟ್ರ, ಒಂದು ಚುನಾವಣೆʼಯ ರಾಜ್ಯ ಸಮಿತಿಗೆ ಪಕ್ಷದ ಸಂಯೋಜಕರನ್ನಾಗಿ ನೇಮಿಸಿದೆ.
ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ವಿಷ್ಣು ದತ್ ಶರ್ಮಾ ಅವರು ನ್ಯಾಯಮೂರ್ತಿ ಆರ್ಯ ಅವರನ್ನು ಸಂಯೋಜಕರಾಗಿ ಮತ್ತು ಪುಷ್ಯಮಿತ್ರ ಭಾರ್ಗವ ಅವರನ್ನು ಸಹ ಸಂಯೋಜಕರಾಗಿ ನೇಮಿಸಿದ್ದಾರೆ.
ನ್ಯಾಯಮೂರ್ತಿ ರೋಹಿತ್ ಆರ್ಯ ಅವರು ನಿವೃತ್ತಿಯಾದ ಸುಮಾರು ಮೂರು ತಿಂಗಳ ನಂತರ ಕಳೆದ ಜುಲೈನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನ್ಯಾಯಮೂರ್ತಿ ರೋಹಿತ್ ಆರ್ಯ ಅವರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಮತ್ತು ಕೋವಿಡ್-19 ಪ್ರೋಟೋಕಾಲ್ ಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಸ್ಟಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರಿಗೆ ಜಾಮೀನು ನಿರಾಕರಿಸಿ 2021ರಲ್ಲಿ ಸುದ್ದಿಯಲ್ಲಿದ್ದರು.
ಸೌಜನ್ಯ :barandbench.com
Next Story





