ದಿಲ್ಲಿ ಸೇವಾ ಮಸೂದೆ ಕುರಿತ ಚರ್ಚೆ: ಗಾಲಿ ಕುರ್ಚಿಯಲ್ಲೇ ರಾಜ್ಯಸಭೆಗೆ ಹಾಜರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ (PTI)
ಹೊಸದಿಲ್ಲಿ: ದಿಲ್ಲಿ ಸೇವೆಗಳ ಮಸೂದೆ-2023ರ ಕುರಿತು ನಡೆಯುವ ಚರ್ಚೆಗಾಗಿ ನಿರ್ಣಾಯಕ ರಾಜ್ಯಸಭಾ ಅಧಿವೇಶನದಲ್ಲಿ ಭಾಗವಹಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡು ಸಂಸತ್ತಿಗೆ ಆಗಮಿಸಿದರು.
ಸೋಮವಾರ ರಾಜ್ಯಸಭೆಯಲ್ಲಿ ಹಾಜರಿರುವಂತೆ ಕಾಂಗ್ರೆಸ್ ಪಕ್ಷವು ತನ್ನ ಸಂಸದರಿಗೆ ಮೂರು ಗೆರೆಯ ವಿಪ್ ಅನ್ನು ನೀಡಿತ್ತು.
ಸೋಮವಾರ ರಾಜ್ಯಸಭೆಯಲ್ಲಿ ಅತ್ಯಂತ ಮುಖ್ಯ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಆಗಸ್ಟ್ 4ರ ಅಧಿಸೂಚನೆಯಲ್ಲಿ ಕಾಂಗ್ರೆಸ್ ತಿಳಿಸಿದೆ.
ಪ್ರತಿಪಕ್ಷಗಳ ಒಕ್ಕೂಟ INDIA ಈ ಮಸೂದಗೆ ವಿರೋಧ ವ್ಯಕ್ತಪಡಿಸಿವೆ.
Next Story