ಬೀದಿ ನಾಯಿ ದಾಳಿಗೆ ನಾಲ್ಕು ತಿಂಗಳ ಮಗು ಸಾವು

ಸಾಂದರ್ಭಿಕ ಚಿತ್ರ
ಹೈದರಾಬಾದ್: ಬೀದಿ ನಾಯಿಯೊಂದರ ದಾಳಿಯಿಂದ ನಾಲ್ಕು ತಿಂಗಳ ಮಗುವೊಂದು ಮೃತಪಟ್ಟ ಘಟನೆ ತೆಲಂಗಾಣದ ಹೈದರಾಬಾದ್ ನ ಶೇಖ್ ಪೇಟ್ ಪ್ರದೇಶದಲ್ಲಿ ಡಿಸೆಂಬರ್ 9ರಂದು ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ತೆಲಂಗಾಣದ ಮೆಹಬೂಬ್ನಗರ್ ಜಿಲ್ಲೆಯವರಾದ ಮಗುವಿನ ಹೆತ್ತವರು ಕೂಲಿ ಕಾರ್ಮಿಕರಾಗಿದ್ದು, ಮಗುವನ್ನು ತಮ್ಮ ಗುಡಿಸಿಲಿನಲ್ಲಿರುವ ತೊಟ್ಟಿಲಲ್ಲಿ ಮಲಗಿಸಿ ಕೆಲಸಕ್ಕೆ ತೆರಳಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭ ಮೂರು ಬೀದಿ ನಾಯಿಗಳು ಗುಡಿಸಲಿನ ಸಮೀಪ ತೆರಳಿವೆ ಹಾಗೂ ಅವುಗಳಲ್ಲಿ ಒಂದು ನಾಯಿ ಬಾಗಿಲು ಇಲ್ಲದ ಗುಡಿಸಲಿನ ಒಳಗೆ ನುಗ್ಗಿ ಮಗುವಿನ ಮುಖ, ತಲೆಗೆ ಕಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರ ಗಾಯಗೊಂಡಿದ್ದ ಮಗುವನ್ನು ಅನಂತರ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದ ರವಿವಾರ ಮೃತಪಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





