ʼವಾಕ್ ಸ್ವಾತಂತ್ರ್ಯʼ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದನ್ನು ಅನುಮತಿಸುವುದಿಲ್ಲ: ಶರ್ಮಿಷ್ಠಾ ಪನೋಲಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಶರ್ಮಿಸ್ತಾ ಪನೋಲಿ | PC : PTI
ಹೊಸದಿಲ್ಲಿ : ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ಆಕ್ಷೇಪಾರ್ಹ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಕಲ್ಕತ್ತಾ ಹೈಕೋರ್ಟ್ ಶರ್ಮಿಸ್ತಾ ಪನೋಲಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ.
ವಾಕ್ ಸ್ವಾತಂತ್ರ್ಯವು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವುದನ್ನು ಅನುಮತಿಸುವುದಿಲ್ಲ ಎಂದು ಹೇಳಿದೆ.
ದೇಶದ ವೈವಿಧ್ಯತೆಯನ್ನು ಎತ್ತಿ ಹಿಡಿದ ಹೈಕೋರ್ಟ್, ಆಕೆಯ ಹೇಳಿಕೆಗಳು ಒಂದು ವಿಭಾಗದ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಗಮನಿಸಿದೆ.
ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ಶರ್ಮಿಷ್ಠಾ ಪನೋಲಿ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಆ ಬಳಿಕ ವೀಡಿಯೊವನ್ನು ಅಳಿಸಿ ಹಾಕಲಾಗಿತ್ತು.
Next Story





