ಶಾಲೆಯ ಬಳಿ ಗ್ಯಾಸ್ ಸೋರಿಕೆ ಶಂಕೆ: ದಿಲ್ಲಿಯ 24 ವಿದ್ಯಾರ್ಥಿಗಳು ಆಸ್ಪತ್ರೆಗೆ

Photo: Twitter@NDTV
ಹೊಸದಿಲ್ಲಿ: ದಿಲ್ಲಿಯ ನರೈನಾ ಪ್ರದೇಶದ ಮುನ್ಸಿಪಲ್ ಶಾಲೆಯ ಸಮೀಪದಲ್ಲಿ ಅನಿಲ ಸೋರಿಕೆ ಘಟನೆಯ ನಂತರ 24 ವಿದ್ಯಾರ್ಥಿಗಳು ಇಂದು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ತೊಂಬತ್ತು ವಿದ್ಯಾರ್ಥಿಗಳನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು ಹಾಗೂ ಇತರ ಒಂಬತ್ತು ಮಂದಿಯನ್ನು ಆಚಾರ್ಯ ಶ್ರೀ ಭಿಕ್ಷು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ದಿಲ್ಲಿಯ ಹಳೆಯ ಮುನ್ಸಿಪಲ್ ಕಾರ್ಪೊರೇಶನ್ ಆಸ್ಪತ್ರೆಯು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.
"ಶಾಲೆಯ ಬಳಿ ಕೆಲವು ಗ್ಯಾಸ್ ಸೋರಿಕೆ ಘಟನೆಯಿಂದಾಗಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿದ್ದಾರೆ, ಅವರನ್ನು ಎರಡು ಆಸ್ಪತ್ರೆಗಳಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ವೈದ್ಯರು ಹೇಳಿದರು.
ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಎರಡು ಆಸ್ಪತ್ರೆಗಳಿಗೆ ಹಾಗೂ ಶಾಲೆಗೆ ಹೋಗಿದ್ದಾರೆ ಮತ್ತು MCD ಯ ಶಿಕ್ಷಣ ಇಲಾಖೆ ಕೂಡ ಕಾರ್ಯಪ್ರವೃತ್ವವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Next Story







