ಚಿನಿವಾರ ಪೇಟೆಯಲ್ಲಿ ಚೇತರಿಕೆಯ ಆಶಾವಾದ: ಚಿನ್ನದ ಬೆಲೆ ಕುಸಿತ

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ: ಅಮೆರಿಕ-ಚೀನಾ ನಡುವಿನ ವ್ಯಾಪಾರ ಕದನ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಸೂಚನೆಯ ಹಿನ್ನೆಲೆಯಲ್ಲಿ, ಸುರಕ್ಷಿತ ಹೂಡಿಕೆ ವಲಯ ಎಂದೇ ಪರಿಗಣಿತವಾಗಿರುವ ಚಿನ್ನಕ್ಕಾಗಿನ ಬೇಡಿಕೆಯಲ್ಲಿ ಇಳಿಮುಖವಾಗಿದೆ. ಹೀಗಾಗಿ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಇಳಿಕೆಯಾಗಿದೆ.
ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ಪ್ರಕಾರ, ಶನಿವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆ ಕಂಡು, 1,26,600 ರೂ.ಗೆ ತಲುಪಿತ್ತು.
ಸೋಮವಾರ ಚಿನಿವಾರ ಪೇಟೆಯಲ್ಲಿ ಶೇ. 99.5ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 700 ರೂ. ಇಳಿಕೆಯಾಗಿದ್ದು, ಎಲ್ಲ ತೆರಿಗೆಗಳೂ ಸೇರಿದಂತೆ 1,25,300 ರೂ.ಗೆ ತಲುಪಿದೆ. ಇದಕ್ಕೂ ಹಿಂದಿನ ಅವಧಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 1,26,000 ರೂ.ಗೆ ಅಂತ್ಯಗೊಂಡಿತ್ತು.
ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ದರದಲ್ಲೂ ಭಾರಿ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 4,250 ರೂ. ಇಳಿಕೆಯಾಗಿ, 1,51,250 ರೂ.ಗೆ ಅಂತ್ಯಗೊಂಡಿತು. ಇದಕ್ಕೂ ಮುನ್ನ, ಶನಿವಾರದಂದು ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ 2,900 ರೂ. ಏರಿಕೆ ಕಂಡು, 1,55,500 ರೂ.ನಂತೆ ಅಂತ್ಯಗೊಂಡಿತ್ತು.





