ತೂಗುಯ್ಯಾಲೆಯಲ್ಲಿ ಚಿನಿವಾರ ಪೇಟೆ; ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?

ಸಾಂದರ್ಭಿಕ ಚಿತ್ರ | Photo Credit : freepik
ಪ್ರಬಲವಾದ ಅಮೆರಿಕನ್ ಡಾಲರ್, ಏರುತ್ತಿರುವ ತೈಲ ಬೆಲೆಗಳು ಮತ್ತು ಹೆಚ್ಚಿನ ಬಡ್ಡಿದರಗಳ ಆತಂಕದ ನಡುವೆಯೂ ಭಾರತದಲ್ಲಿ ಚಿನ್ನ–ಬೆಳ್ಳಿ ಬೆಲೆಗಳು ತೂಗುಯ್ಯಾಲೆಯಲ್ಲಿವೆ.
ಮೇ ತಿಂಗಳಲ್ಲಿ ಸ್ಥಿರವಾಗಿದ್ದ ಬೆಳ್ಳಿಯ ಬೆಲೆಯು ಜೂನ್ ಆರಂಭದಲ್ಲಿ ಕುಸಿಯಲು ಆರಂಭಿಸಿತ್ತು. ಸೋಮವಾರವೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿತದೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದವು. ಮಂಗಳವಾರ ಚಿನ್ನದ ದರ ಅಲ್ಪ ಮಟ್ಟಿಗೆ ಏರಿಕೆಯಾಗಿದ್ದರೆ, ಬುಧವಾರ ಮತ್ತು ಗುರುವಾರ ಮತ್ತೆ ತೀವ್ರ ಕುಸಿತ ದಾಖಲಾಗಿತ್ತು. ಇದೀಗ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಏರಿಕೆ ಕಂಡಿವೆ.
ಪ್ರಬಲವಾದ ಅಮೆರಿಕನ್ ಡಾಲರ್, ಏರುತ್ತಿರುವ ತೈಲ ಬೆಲೆಗಳು ಮತ್ತು ಹೆಚ್ಚಿನ ಬಡ್ಡಿದರಗಳ ಆತಂಕದಿಂದ ಚಿನ್ನ–ಬೆಳ್ಳಿ ಬೆಲೆಗಳಲ್ಲಿ ಏರಿಳಿತ ಮುಂದುವರಿದಿದೆ. ಅಮೆರಿಕ–ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಹೆಚ್ಚಾಗಿದ್ದು, ಕಚ್ಚಾತೈಲ ಬೆಲೆಗಳಲ್ಲಿಯೂ ಏರಿಕೆ ಕಂಡುಬಂದಿದೆ. ಕಳೆದ ಎರಡು ವಾರಗಳಿಂದ ಚಿನ್ನದ ದರದಲ್ಲಿ ನಿರಂತರ ಏರಿಳಿತ ದಾಖಲಾಗುತ್ತಿದ್ದು, ಕಳೆದ ಶುಕ್ರವಾರ ಸ್ವಲ್ಪ ಏರಿಕೆ ಕಂಡ ಬಳಿಕ ಸೋಮವಾರದಿಂದ ಇಳಿಕೆ ಕಂಡಿತ್ತು. ಇದೀಗ ಶುಕ್ರವಾರ ಮತ್ತೆ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.
►ಮತ್ತೆ ಏರಿದ ಚಿನ್ನದ ದರ
ಜೂನ್ 12ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರದ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ 294 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,48,580 ರೂ.ಗೆ ತಲುಪಿದೆ.
ಆಭರಣ ಚಿನ್ನವಾದ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 270 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,36,200 ರೂ.ಗೆ ತಲುಪಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 221 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,11,440 ರೂ.ಗೆ ತಲುಪಿದೆ.
►ಮಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ?
ಜೂನ್ 12ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನ ವೇಳೆಗೆ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.
ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,858 (+294) ರೂ. ಆಗಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,620 (+270) ರೂ. ಆಗಿದ್ದು, ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,144 (+221) ರೂ. ಆಗಿದೆ.
►ಏರಿದ ಬೆಳ್ಳಿಯ ಮೌಲ್ಯ
ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ರತಿ ಕೆಜಿಗೆ 2,55,000 ರೂ. ಆಸುಪಾಸಿನಲ್ಲಿ ವಹಿವಾಟಾಗುತ್ತಿದ್ದ ಬೆಳ್ಳಿಯ ಮೌಲ್ಯ ಮೇ ತಿಂಗಳ ಆರಂಭದಲ್ಲಿ 2,90,000 ರೂ.ವರೆಗೆ ಏರಿಕೆಯಾಗಿತ್ತು. ಬಳಿಕ ಬಹುತೇಕ ತಿಂಗಳಿಡೀ ಪ್ರತಿ ಕೆಜಿಗೆ 2,80,000 ರೂ. ಮಟ್ಟದಲ್ಲಿ ಸ್ಥಿರವಾಗಿತ್ತು. ಕಳೆದ ವಾರವೂ ಇದೇ ಬೆಲೆಯಲ್ಲಿತ್ತು.
ಆದರೆ ಕಳೆದ ಶುಕ್ರವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 5 ರೂ. ಇಳಿಕೆಯಾಗಿ, ಪ್ರತಿ ಕೆಜಿಗೆ 2,75,000 ರೂ.ಗೆ ಇಳಿದಿತ್ತು. ಶನಿವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಇಳಿಕೆಯಾಗಿ, ಪ್ರತಿ ಕೆಜಿಗೆ 2,65,000 ರೂ.ಗೆ ತಲುಪಿತ್ತು.
ಸೋಮವಾರ ಪ್ರತಿ ಗ್ರಾಂಗೆ 5 ರೂ. ಇಳಿಕೆಯಾಗಿ ಬೆಲೆ 2,60,000 ರೂ.ಗೆ ಇಳಿದಿತ್ತು. ಮಂಗಳವಾರ ಸ್ಥಿರವಾಗಿದ್ದ ಬೆಲೆ ಬುಧವಾರ ಪ್ರತಿ ಗ್ರಾಂಗೆ 10 ರೂ. ಇಳಿಕೆಯಾಗಿ, ಪ್ರತಿ ಕೆಜಿಗೆ 2,50,000 ರೂ.ಗೆ ತಲುಪಿತ್ತು. ಗುರುವಾರವೂ ಅದೇ ಮಟ್ಟದಲ್ಲಿ ಮುಂದುವರಿದಿತ್ತು.
ಇದೀಗ ಶುಕ್ರವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ, ಪ್ರತಿ ಕೆಜಿಗೆ 2,60,000 ರೂ.ಗೆ ತಲುಪಿದೆ.
►ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು)
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,582 (+3) ರೂ., 22 ಕ್ಯಾರೆಟ್ ಚಿನ್ನದ ದರ 13,635 (+270) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,858 (+294) ರೂ., 22 ಕ್ಯಾರೆಟ್ ಚಿನ್ನದ ದರ 13,620 (+270) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,863 (+294) ರೂ., 22 ಕ್ಯಾರೆಟ್ ಚಿನ್ನದ ದರ 13,625 (+270) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,055 (+327) ರೂ., 22 ಕ್ಯಾರೆಟ್ ಚಿನ್ನದ ದರ 13,800 (+300) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,858 (+294) ರೂ., 22 ಕ್ಯಾರೆಟ್ ಚಿನ್ನದ ದರ 13,620 (+270) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,858 (+294) ರೂ., 22 ಕ್ಯಾರೆಟ್ ಚಿನ್ನದ ದರ 13,620 (+270) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,582 (+3) ರೂ., 22 ಕ್ಯಾರೆಟ್ ಚಿನ್ನದ ದರ 13,635 (+270) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,582 (+3) ರೂ., 22 ಕ್ಯಾರೆಟ್ ಚಿನ್ನದ ದರ 13,635 (+270) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,582 (+3) ರೂ., 22 ಕ್ಯಾರೆಟ್ ಚಿನ್ನದ ದರ 13,635 (+270) ರೂ.






