ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆ : ಮಂಗಳೂರಿನಲ್ಲಿ ಇಂದಿನ ದರವೆಷ್ಟು?

Photo | AI
ತೈಲ ಬೆಲೆ ಏರಿಕೆಯಿಂದಾಗಿ ಹಣದುಬ್ಬರದ ಭೀತಿಯ ನಡುವೆ ಚಿನ್ನದ ಬೆಲೆ ಶೇ 4ರಷ್ಟು ಕುಸಿದರೆ, ಬೆಳ್ಳಿಯ ಬೆಲೆ ಶೇ 2ರಷ್ಟು ಕುಸಿದಿದೆ.
ಚಿನ್ನ-ಬೆಳ್ಳಿಯ ಬೆಲೆಗಳು ದೇಸೀ ಮತ್ತು ಅಂತಾರಾಷ್ಟ್ರೀಯ ಮಟ್ಟದ ವ್ಯಾಪಕ ಅಂಶಗಳಿಂದ ಪ್ರಭಾವಿತವಾಗುತ್ತವೆ. ಜಾಗತಿಕ ಆರ್ಥಿಕ ಸ್ಥಿತಿ ಮತ್ತು ಭೌಗೋಳಿಕ ರಾಜಕೀಯ ಅಂಶಗಳು ಸಂಕೀರ್ಣ ಮಿಶ್ರಣದಲ್ಲಿ ಚಿನ್ನ-ಬೆಳ್ಳಿಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ.
ತೈಲ ಬೆಲೆ ಏರಿಕೆಯಿಂದಾಗಿ ಹಣದುಬ್ಬರದ ಭೀತಿಯ ನಡುವೆ ಚಿನ್ನದ ಬೆಲೆ ಶೇ 4ರಷ್ಟು ಕುಸಿದರೆ, ಬೆಳ್ಳಿಯ ಬೆಲೆ ಶೇ 2ರಷ್ಟು ಕುಸಿದಿದೆ. ಅಲ್ಲದೆ, ಅಮೆರಿಕನ್ ಡಾಲರ್ನ ಚಲನೆಗಳು ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್ನ ನೀತಿಯ ಸುತ್ತಲಿನ ನಿರೀಕ್ಷೆಗಳು ಬೆಲೆಗಳ ಮೇಲೆ ಪರಿಣಾಮ ಬೀರಿವೆ.
ಕಳೆದೊಂದು ತಿಂಗಳಿನಿಂದ ಬಹುತೇಕ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,000– 13500ರೂ. ನಡುವೆ ಸ್ಥಿರವಾಗಿದೆ. ಇದೇ ಬೆಲೆಯ ನಡುವೆ ಏರಿಳಿತ ಕಾಣುತ್ತಿತ್ತು. ಸತತ ನಾಲ್ಕು ದಿನಗಳಿಂದ ಚಿನ್ನದ ಬೆಲೆಗಳು ಏರು ಹಾದಿಯಲ್ಲಿದ್ದವು. ಗುರುವಾರ ಈ ಮೌಲ್ಯದ ಗರಿಷ್ಠ ಮಟ್ಟ (13,500) ತಲುಪುವಷ್ಟು ತೀವ್ರ ಏರಿಕೆಯನ್ನು ಕಂಡಿತ್ತು. ಇದೀಗ ಶುಕ್ರವಾರ ಚಿನ್ನದ ದರ ತೀವ್ರ ಕುಸಿತ ದಾಖಲಿಸಿದ್ದು, 22 ಕ್ಯಾರೆಟ್ನ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 170ರೂ. ಕುಸಿದು, 13,230 ರೂ. ಗೆ ತಲುಪಿದೆ.
ಚಿನ್ನದ ದರದಲ್ಲಿ ಏರಿಕೆ
ಜುಲೈ 24ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 185 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,44,330 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 170ರೂ. ಕುಸಿದು, ಹತ್ತು ಗ್ರಾಂಗೆ 1,32,300ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 139ರೂ. ಇಳಿಕೆಯಾಗಿ, ಹತ್ತು ಗ್ರಾಂಗೆ 1,08,250 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಜುಲೈ 24ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ತೀವ್ರ ಕುಸಿತ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,433 (-185) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,230 (-170) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,825 (-139) ರೂ. ಬೆಲೆಗೆ ಬಂದು ನಿಂತಿದೆ.
ಸ್ಥಿರವಾದ ಬೆಳ್ಳಿಯ ದರ
ಮಂಗಳೂರಿನಲ್ಲಿ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷ ರೂ.ವರೆಗೂ ಏರಿತ್ತು. ಮೇ 13ರಂದು ಪ್ರತಿ ಕೆಜಿಗೆ 3,30,000ಕ್ಕೆ ಏರಿದ ನಂತರ, ಬಹುತೇಕ ಮೇ ತಿಂಗಳಿಡೀ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000ರೂ.ಗೆ ಬಂದು ಸ್ಥಿರವಾಗಿತ್ತು. ಆದರೆ ಜೂನ್ನಲ್ಲಿ ಸ್ವಲ್ಪ ಏರಿಳಿತ ಕಂಡುಬಂದು ಪ್ರತಿ ಕೆಜಿಗೆ 2,40,000ರೂ.ಗೆ ಬಂದು ನಿಂತಿತ್ತು. ಜುಲೈ ಆರಂಭದಲ್ಲಿ ಅಲ್ಪಮಟ್ಟಿಗೆ ಏರಿಳಿತ ಕಂಡು ಪ್ರತಿ ಕೆಜಿಗೆ 2,50,000 ರೂ.ಗೆ ಬಂದಿತ್ತು.
ಜುಲೈ 11ರಿಂದ 2,35,000ರೂ.ಗೆ ಸ್ಥಿರವಾಗಿದ್ದ ಬೆಳ್ಳಿಯ ದರ ಕಳೆದ ಶುಕ್ರವಾರ ಪ್ರತಿ ಗ್ರಾಂಗೆ 5ರೂ. ಇಳಿಕೆಯಾಗಿ ಮೂರು ತಿಂಗಳಲ್ಲೇ ಕನಿಷ್ಠ ದರವಾದ ಪ್ರತಿ ಕೆಜಿಗೆ 2,30,000ರೂ.ಗೆ ಬಂದಿತ್ತು. ನಂತರ ಇದೇ ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,35,000ರೂ.ಗೆ ತಲುಪಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,40,000 ರೂ.ಗೆ ತಲುಪಿದ್ದು, ಗುರುವಾರ ಅದೇ ಬೆಲೆಗೆ ಸ್ಥಿರವಾಗಿದೆ. ಇದೀಗ ಶುಕ್ರವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಇಳಿಕೆಯಾಗಿ ಪ್ರತಿ ಕೆಜಿಗೆ 2,35,000 ರೂ.ಗೆ ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,448 (-185) ರೂ., 22 ಕ್ಯಾರೆಟ್ ಚಿನ್ನದ ದರ 13,245 (-170) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,433 (-185) ರೂ., 22 ಕ್ಯಾರೆಟ್ ಚಿನ್ನದ ದರ 13,230 (-170) ರೂ.
ಅಹ್ಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,438 (-185) ರೂ., 22 ಕ್ಯಾರೆಟ್ ಚಿನ್ನದ ದರ 13,235 (-170) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,433 (-295) ರೂ., 22 ಕ್ಯಾರೆಟ್ ಚಿನ್ನದ ದರ 13,230 (-270) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,433 (-185) ರೂ., 22 ಕ್ಯಾರೆಟ್ ಚಿನ್ನದ ದರ 13,230 (-170) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,433 (-185) ರೂ., 22 ಕ್ಯಾರೆಟ್ ಚಿನ್ನದ ದರ 13,230 (-170) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,448 (-185) ರೂ., 22 ಕ್ಯಾರೆಟ್ ಚಿನ್ನದ ದರ 13,245 (-170) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,448 (-185) ರೂ., 22 ಕ್ಯಾರೆಟ್ ಚಿನ್ನದ ದರ 13,245 (-170) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,448 (-185) ರೂ., 22 ಕ್ಯಾರೆಟ್ ಚಿನ್ನದ ದರ 13,245 (-170) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 14,433 (-185) ರೂ., 22 ಕ್ಯಾರೆಟ್ ಚಿನ್ನದ ದರ 13,230 (-170) ರೂ.






