ಜಾಗತಿಕ ಅನಿಶ್ಚಿತತೆ ನಡುವೆ ಇಳಿಕೆ ಹಾದಿಯಲ್ಲಿ ಚಿನ್ನ-ಬೆಳ್ಳಿ ಬೆಲೆ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಮಂಗಳವಾರ- ಬುಧವಾರ ಸ್ಥಿರವಾಗಿದ್ದ ಚಿನ್ನದ ಮೌಲ್ಯ ನಿನ್ನೆಯಿಂದ ಮತ್ತೆ ಕುಸಿತದ ಹಾದಿಯಲ್ಲಿದೆ ಮತ್ತು ಕಳೆದೊಂದು ವಾರದಿಂದ ಸ್ಥಿರವಾಗಿದ್ದ ಬೆಳ್ಳಿಯ ದರವೂ ಕುಸಿದಿದೆ.
ಕಳೆದ ವಾರವಿಡೀ ಕಡಿಮೆಯಾಗಿದ್ದ ಚಿನ್ನದ ದರ ಶುಕ್ರವಾರ ಸ್ವಲ್ಪ ಏರಿಕೆ ಕಂಡಿತ್ತು. ಕಳೆದ ಶನಿವಾರ ಮತ್ತು ಇದೇ ಸೋಮವಾರ ಚಿನ್ನದ ಬೆಲೆ ಕುಸಿದಿತ್ತು. ಮಂಗಳವಾರ ಮತ್ತು ಬುಧವಾರ ಸ್ಥಿರವಾಗಿದ್ದ ಚಿನ್ನದ ಮೌಲ್ಯ ನಿನ್ನೆಯಿಂದ ಮತ್ತೆ ಕುಸಿತದ ಹಾದಿಯಲ್ಲಿದೆ. ಕಳೆದೊಂದು ವಾರದಿಂದ ಸ್ಥಿರವಾಗಿದ್ದ ಬೆಳ್ಳಿಯ ದರವೂ ಕುಸಿದಿದೆ.
ಕಚ್ಚಾ ತೈಲ ಬೆಲೆಗಳ ಏರಿಕೆ, ಹಣದುಬ್ಬರ ಮತ್ತು ಅಮೆರಿಕ-ಇರಾನ್ ಸಂಘರ್ಷಕ್ಕೆ ಸಂಬಂಧಿಸಿದ ಜಾಗತಿಕ ಅನಿಶ್ಚಿತತೆಗಳಿಂದ ಚಿನ್ನದ ಬೆಲೆಗಳು ಇಳಿಯುತ್ತಿವೆ. ಹೂಡಿಕೆದಾರರು ಭಾರತದ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಘೋಷಣೆ ಮತ್ತು ಅಮೆರಿಕದ ಆರ್ಥಿಕ ನೀತಿಗಳಿಗಾಗಿ ಕಾಯುತ್ತಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನವಿರಾಮದ ಘೋಷಣೆಯ ನಂತರ ವಾರಾಂತ್ಯದಲ್ಲಿ ಅಮೆರಿಕ- ಇರಾನ್ ಸಂಘರ್ಷಕ್ಕೂ ಪರಿಹಾರ ಸಿಗುವ ಭರವಸೆಯಲ್ಲಿ ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ.
ಕಡಿಮೆಯಾದ ಚಿನ್ನದ ದರ
ಜೂನ್ 5ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 38 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,55,730 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 35 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,42,750 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 28 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,16,800 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಜೂನ್ 5ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,573 (-38) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,275 (-35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,680 (-28) ರೂ. ಬೆಲೆಗೆ ಬಂದು ತಲುಪಿದೆ.
ಕುಸಿದ ಬೆಳ್ಳಿಯ ಮೌಲ್ಯ
ಮಾರ್ಚ್ ಮತ್ತು ಏಪ್ರಿಲ್ನಲ್ಲಿ 2,55,000 ರೂ. ಸುತ್ತ ಮುತ್ತ ಬಂದು ನಿಂತಿದ್ದ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷದವರೆಗೂ ಏರಿತ್ತು. ನಂತರ, ಬಹುತೇಕ ತಿಂಗಳಿಡೀ ಅದೇ ಬೆಲೆಯ ಆಸುಪಾಸಿನಲ್ಲಿ ಮುಂದುವರಿದಿತ್ತು. ಕಳೆದ ವಾರ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಈ ವಾರವೂ ಅದೇ ಬೆಲೆಗೆ ಸ್ಥಿರವಾಗಿ ನಿಂತಿತ್ತು. ಇದೀಗ ಶುಕ್ರವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,588 (-38) ರೂ., 22 ಕ್ಯಾರೆಟ್ ಚಿನ್ನದ ದರ 14,290 (-35) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,573 (-38) ರೂ., 22 ಕ್ಯಾರೆಟ್ ಚಿನ್ನದ ದರ 14,275 (-35) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,578 (-38) ರೂ., 22 ಕ್ಯಾರೆಟ್ ಚಿನ್ನದ ದರ 14,280 (-35) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,796 (-1) ರೂ., 22 ಕ್ಯಾರೆಟ್ ಚಿನ್ನದ ದರ 14,430 (-50) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,573 (-38) ರೂ., 22 ಕ್ಯಾರೆಟ್ ಚಿನ್ನದ ದರ 14,275 (-35) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,573 (-38) ರೂ., 22 ಕ್ಯಾರೆಟ್ ಚಿನ್ನದ ದರ 14,275 (-35) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,588 (-38) ರೂ., 22 ಕ್ಯಾರೆಟ್ ಚಿನ್ನದ ದರ 14,290 (-35) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,588 (-38) ರೂ., 22 ಕ್ಯಾರೆಟ್ ಚಿನ್ನದ ದರ 14,290 (-35) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,588 (-38) ರೂ., 22 ಕ್ಯಾರೆಟ್ ಚಿನ್ನದ ದರ 14,290 (-35) ರೂ.






