ಹೊಳೆಯುತ್ತಿಲ್ಲ ಚಿನ್ನ | ಗರಿಷ್ಠ ಮಟ್ಟದಿಂದ ಶೇ. 33ರಷ್ಟು ಕುಸಿದ ಚಿನ್ನ; ಒಂದು ಪವನ್ ಗೆ ಬೆಲೆ ಎಷ್ಟು ಗೊತ್ತಾ?

ಸಾಂದರ್ಭಿಕ ಚಿತ್ರ (AI)
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಕಂಡುಬಂದಿದ್ದ ಗರಿಷ್ಠ ಮಟ್ಟದಿಂದ ಚಿನ್ನದ ಬೆಲೆಯು ಸುಮಾರು ಶೇ. 33ರಷ್ಟು ಕುಸಿದಿದೆ.
ಚಿನ್ನವು ಮೊದಲಿನಂತೆ ಹೊಳೆಯುತ್ತಿಲ್ಲ, ಆಕರ್ಷಕವಾಗಿಯೂ ಉಳಿದಿಲ್ಲ. ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನದ ದರ ಶನಿವಾರ ನ. 21ರಂದು ಈ ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಜನವರಿ ನಂತರ ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಚಿನ್ನ-ಬೆಳ್ಳಿ ದರ ಕುಸಿತದ ಹಾದಿಯಲ್ಲಿದೆ. ಈ ಹಿಂದೆ ಜೂನ್ ನಲ್ಲಿ ವರ್ಷದ ಕನಿಷ್ಠ ದರ ದಾಖಲಿಸಿದ ನಂತರ ಚಿನ್ನದ ದರ ಜುಲೈನಿಂದ ಸೆಪ್ಟೆಂಬರ್ ನಡುವೆ ಹೆಚ್ಚು ಕುಸಿತ ಕಾಣದೆ ಸ್ಥಿರವಾಗಿತ್ತು. ಅಕ್ಟೋಬರ್ ತಿಂಗಳಿಡೀ ಕುಸಿತದ ಹಾದಿಯಲ್ಲಿದ್ದ ಚಿನ್ನ-ಬೆಳ್ಳಿಯ ದರದಲ್ಲಿ, ಅಕ್ಟೋಬರ್ ಕೊನೆಯ ವಾರದಲ್ಲಿ ಸ್ವಲ್ಪ ಸ್ಥಿರತೆ ಕಂಡುಬಂದಿತ್ತು. ಕಳೆದ ನ. 9ರಿಂದ ಮತ್ತೆ ಕುಸಿತದತ್ತ ಸಾಗುತ್ತಿದೆ.
ವಾಸ್ತವದಲ್ಲಿ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಕಂಡುಬಂದಿದ್ದ ಗರಿಷ್ಠ ಮಟ್ಟದಿಂದ ಚಿನ್ನದ ಬೆಲೆಯು ಸುಮಾರು ಶೇ. 33ರಷ್ಟು ಕುಸಿದಿದೆ. 2025ರಲ್ಲಿ ಚಿನ್ನದ ಈ ಅದ್ಭುತ ಏರಿಕೆಗೆ ಕೊನೆಯೇ ಇಲ್ಲವೇನೋ ಎಂಬಂತಿತ್ತು. 2026ರ ಆರಂಭದ ತಿಂಗಳಲ್ಲಿ ಚಿನ್ನ ಪ್ರತಿ 10 ಗ್ರಾಂಗೆ 1.8 ಲಕ್ಷ ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ನಂತರ ಬೆಲೆ ಇಳಿಕೆಗೆ ತಡೆಯೇ ಕಾಣುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸುಮಾರು ಶೇ. 37ರಷ್ಟು ಕುಸಿದಿದೆ. ಇದು ಕಳೆದ ಒಂದು ವರ್ಷದಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಡಾಲರ್ ಮೌಲ್ಯದ ಏರಿಳಿತ ಮತ್ತು ಒಟ್ಟು ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳಿಂದ ಚಿನ್ನದ ದರ ತೀವ್ರ ಒತ್ತಡ ಎದುರಿಸಿದೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಬಹುದು ಎಂಬ ನಿರೀಕ್ಷೆಯಿಂದ ಡಾಲರ್ ಮೌಲ್ಯ ಹೆಚ್ಚಾಗಿದೆ. ಸಾಮಾನ್ಯವಾಗಿ ಡಾಲರ್ ಬಲಗೊಂಡಾಗ ಚಿನ್ನದ ಬೆಲೆ ಇಳಿಯುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಬಾರದ ಕಾರಣ ಸರ್ಕಾರಿ ಬಾಂಡ್ ಗಳ ಲಾಭಾಂಶ ಹೆಚ್ಚಾಗುತ್ತದೆ. ಚಿನ್ನ ಯಾವುದೇ ಬಡ್ಡಿ ನೀಡದ ಕಾರಣ ಹೂಡಿಕೆದಾರರು ಚಿನ್ನದ ಬದಲು ಬಾಂಡ್ ಗಳತ್ತ ತಿರುಗುತ್ತಿದ್ದಾರೆ. ಒಟ್ಟು ಷೇರು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ನಷ್ಟ ಉಂಟಾದಾಗ ಹೂಡಿಕೆದಾರರು ನಷ್ಟ ಸರಿದೂಗಿಸಲು ಅಥವಾ ನಗದು ಹೊಂದಿಸಲು ಚಿನ್ನವನ್ನು ಅನಿವಾರ್ಯವಾಗಿ ಮಾರುತ್ತಿದ್ದಾರೆ. ಇದು ಬೆಲೆಯನ್ನು ಮತ್ತಷ್ಟು ಕೆಳಕ್ಕೆ ತಳ್ಳಿದೆ.
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ
ನ. 21ರಂದು ಶನಿವಾರ ಬೆಳಗ್ಗೆ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 49 ರೂ. ಇಳಿಕೆಯಾಗಿದ್ದು, 10 ಗ್ರಾಂ ಬೆಲೆ 1,25,080 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 45 ರೂ. ಕುಸಿದಿದ್ದು, 10 ಗ್ರಾಂಗೆ 1,14,650 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 37 ರೂ. ಕಡಿಮೆಯಾಗಿ, 10 ಗ್ರಾಂಗೆ 93,810 ರೂ.ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ನಹ 21ರಂದು ಶನಿವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸ್ವಲ್ಪ ಕುಸಿತ ದಾಖಲಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 12,508 ರೂ. (-49) ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 11,465 ರೂ. (-45) ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 9,381 ರೂ. (-37) ಬೆಲೆಗೆ ಬಂದು ನಿಂತಿದೆ.
ಇಂದು ಬೆಳ್ಳಿಯ ದರದಲ್ಲಿ ಸ್ಥಿರತೆ
ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಬೆಳ್ಳಿಯ ಬೆಲೆ ನಂತರ ಕುಸಿತದ ಹಾದಿಯಲ್ಲಿತ್ತು. ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000 ರೂ.ವರೆಗೆ ಏರಿತ್ತು. ಆಗಸ್ಟ್ ಕೊನೆಯ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ನಿಂತಿತ್ತು.
ಸೆಪ್ಟೆಂಬರ್ ನಂತರದ ವಾರಗಳಲ್ಲಿ ಸ್ವಲ್ಪ ಏರಿಳಿತ ಕಂಡರೂ ಮತ್ತೆ ದರ ಕುಸಿದು ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ಸ್ಥಿರವಾಗಿತ್ತು. ನಂತರ ಅಕ್ಟೋಬರ್ ತಿಂಗಳಲ್ಲಿ ಕುಸಿದ ಬೆಳ್ಳಿಯ ದರ ಅ. 15ರಂದು ಪ್ರತಿ ಗ್ರಾಂಗೆ 5 ರೂ. ಇಳಿದು ಮತ್ತೆ ಪ್ರತಿ ಕೆಜಿಗೆ 2,30,000 ರೂ.ಗೆ ತಲುಪಿ ಸ್ಥಿರವಾಗಿತ್ತು.
ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 2,00,000 ರೂ.ಗೆ ತಲುಪಿತ್ತು. ಅಂದಿನಿಂದ ಅದೇ ಬೆಲೆಗೆ ಸ್ಥಿರವಾಗಿತ್ತು. ನಂತರ ನವೆಂಬರ್ ಆರಂಭದಲ್ಲಿ ಸ್ವಲ್ಪ ಏರಿಳಿತ ಕಂಡರೂ, ನ. 14ರ ನಂತರ ಮತ್ತೆ ನಿರಂತರ ಕುಸಿದಿರುವ ಬೆಳ್ಳಿಯ ದರ ನ. 18ರಂದು ಪ್ರತಿ ಕೆಜಿಗೆ 1,85,000 ರೂ.ಗೆ ತಲುಪಿತ್ತು. ನ. 19ರಂದು ಗುರುವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಇಳಿದಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 1,80,000 ರೂ.ಗೆ ಇಳಿದಿತ್ತು. ಶುಕ್ರವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಇಳಿದಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 1,75,000 ರೂ.ಗೆ ತಲುಪಿದೆ. ಇಂದು ಅದೇ ಬೆಲೆಗೆ ಸ್ಥಿರವಾಗಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 12,523 ರೂ. (-49), 22 ಕ್ಯಾರೆಟ್ ಚಿನ್ನದ ದರ 11,480 ರೂ. (-45).
ಮುಂಬೈ: 24 ಕ್ಯಾರೆಟ್ ಚಿನ್ನದ ದರ 12,508 ರೂ. (-49), 22 ಕ್ಯಾರೆಟ್ ಚಿನ್ನದ ದರ 11,465 ರೂ. (-45).
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 12,513 ರೂ. (-49), 22 ಕ್ಯಾರೆಟ್ ಚಿನ್ನದ ದರ 11,470 ರೂ. (-45).
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 12,508 ರೂ. (-49), 22 ಕ್ಯಾರೆಟ್ ಚಿನ್ನದ ದರ 11,465 ರೂ. (-45).
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 12,508 ರೂ. (-49), 22 ಕ್ಯಾರೆಟ್ ಚಿನ್ನದ ದರ 11,465 ರೂ. (-45).
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 12,508 ರೂ. (-49), 22 ಕ್ಯಾರೆಟ್ ಚಿನ್ನದ ದರ 11,465 ರೂ. (-45).
ಜೈಪುರ: 24 ಕ್ಯಾರೆಟ್ ಚಿನ್ನದ ದರ 12,523 ರೂ. (-49), 22 ಕ್ಯಾರೆಟ್ ಚಿನ್ನದ ದರ 11,480 ರೂ. (-45).
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 12,523 ರೂ. (-49), 22 ಕ್ಯಾರೆಟ್ ಚಿನ್ನದ ದರ 11,480 ರೂ. (-45).
ಲಕ್ನೊ: 24 ಕ್ಯಾರೆಟ್ ಚಿನ್ನದ ದರ 12,523 ರೂ. (-49), 22 ಕ್ಯಾರೆಟ್ ಚಿನ್ನದ ದರ 11,480 ರೂ. (-45).
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 12,508 ರೂ. (-49), 22 ಕ್ಯಾರೆಟ್ ಚಿನ್ನದ ದರ 11,465 ರೂ. (-45).






