ಸ್ವಲ್ಪ ಇಳಿಕೆ ಕಂಡ ಚಿನ್ನ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಅಮೆರಿಕದ ಡಾಲರ್ ದುರ್ಬಲಗೊಳ್ಳುತ್ತಿರುವುದು, ಅಮೆರಿಕದ ಸುಂಕದ ಪರಿಣಾಮ ಬೀರುತ್ತಿರುವುದು, ಯುದ್ಧ ಭೀತಿಯಿಂದ ಜಾಗತಿಕ ರಾಜಕೀಯ ಅನಿಶ್ಚಿತತೆಗೆ ಹೆಚ್ಚಾಗಿರುವುದು ಚಿನ್ನದ ದರ ಏರಿಕೆಗೆ ಮುಖ್ಯ ಕಾರಣಗಳಾಗಿವೆ.
ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಚಿನ್ನ ಇಂದು ಸ್ವಲ್ಪ ಇಳಿಕೆ ಕಂಡಿದೆ. ಆದರೆ ಬೆಲೆ ಸ್ಥಿರವಾಗಿ ಮುಂದುವರಿಯುವ ಸಾಧ್ಯತೆ ಕಡಿಮೆಯಿದೆ ಎನ್ನುತ್ತಾರೆ ಹಣಕಾಸು ತಜ್ಞರು. ಮುಖ್ಯವಾಗಿ ಕೇಂದ್ರೀಯ ಬ್ಯಾಂಕ್ಗಳು ಚಿನ್ನದ ಖರೀದಿಗೆ ತೊಡಗಿರುವುದು, ಗೋಲ್ಡ್ ಇಟಿಎಫ್ ನಲ್ಲಿ ಹೂಡಿಕೆ ಹೆಚ್ಚಾಗಿರುವುದು, ಅಮೆರಿಕದ ಡಾಲರ್ ದುರ್ಬಲಗೊಳ್ಳುತ್ತಿರುವುದು, ಅಮೆರಿಕದ ಸುಂಕದ ಪರಿಣಾಮ ಬೀರುತ್ತಿರುವುದು, ಯುದ್ಧ ಭೀತಿಯಿಂದ ಜಾಗತಿಕ ರಾಜಕೀಯ ಅನಿಶ್ಚಿತತೆಗೆ ಹೆಚ್ಚಾಗಿರುವುದು ಚಿನ್ನದ ದರ ಏರಿಕೆಗೆ ಕಾರಣಗಳಾಗಿವೆ.
ಗೋಲ್ಡ್ಮನ್ ಸ್ಯಾಕ್ಸ್ ವರದಿ ಪ್ರಕಾರ ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ ಒಂದು ಔನ್ಸ್ಗೆ 5400 ಡಾಲರ್ ತಲುಪಬಹುದು. ಅಂದರೆ ಒಂದು ಗ್ರಾಮ್ ಚಿನ್ನದ ಬೆಲೆ ರೂ 17,430ಕ್ಕೆ ಏರಬಹುದು. ಆದರೆ, ಈಗ ನಡೆಯುತ್ತಿರುವ ಏರಿಕೆಯ ಪರಿ ಗಮನಿಸಿದರೆ ಇನ್ನೆರಡು ತಿಂಗಳಲ್ಲೇ ಈ ಬೆಲೆ ತಲುಪಬಹುದು. ಮೆಟಲ್ಸ್ ಫೋಕಸ್ ಎನ್ನುವ ಕಂಪನಿಯ ಅಂದಾಜಿನ ಪ್ರಕಾರ ಈ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಔನ್ಸ್ಗೆ 5,500 ಡಾಲರ್ಗೆ ಏರಬಹುದು. ಅಂದರೆ ಒಂದು ಗ್ರಾಮ್ ಚಿನ್ನದ ಬೆಲೆ ರೂ 17,753 ಇರಬಹುದು.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಮಂಗಳವಾರ ಜನವರಿ 27ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಇಳಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,195 (-76) ರೂ. ಗೆ ಇಳಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,845 (-70) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,146 (-57) ರೂ. ಬೆಲೆಗೆ ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ ಹೇಗಿದೆ?
ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 16,210 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,860 ರೂ. ಇದೆ.
ಮುಂಬೈ 24 ಕ್ಯಾರೆಟ್ ಚಿನ್ನದ ದರ 16,195 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,845 ರೂ. ಇದೆ.
ಅಹಮದಾಬಾದ್ 24 ಕ್ಯಾರೆಟ್ ಚಿನ್ನದ ದರ 16,200 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,850 ರೂ. ಇದೆ.
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ 16,320 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,960 ರೂ. ಇದೆ.
ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 16,195 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,845 ರೂ. ಇದೆ.
ಹೈದರಾಬಾದ್ನಲ್ಲಿ 24 ಕ್ಯಾರೆಟ್ ಚಿನ್ನದ ದರ 16,195 ರೂ.ಇದ್ದರೆ, 22 ಕ್ಯಾರೆಟ್ ಚಿನ್ನದ ದರ 14,845 ರೂ.ಇದೆ.







