ಮತ್ತೆ ಕುಸಿದ ಚಿನ್ನದ ಬೆಲೆ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಕೇಂದ್ರ ಸರಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 15ಕ್ಕೆ ಹೆಚ್ಚಿಸಿದಾಗಿನಿಂದ ಚಿನ್ನದ ಬೆಲೆಗಳು ತೀವ್ರ ಏರಿಳಿತಗಳನ್ನು ಕಂಡಿವೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತು ಹೆಚ್ಚಿನ ಕಚ್ಚಾ ತೈಲ ಬೆಲೆಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಸತತ ಎರಡನೇ ವಾರವೂ ಇಳಿಕೆಯಾಗಿವೆ. ಕಳೆದ ವಾರ ಕೇಂದ್ರ ಸರಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 15ಕ್ಕೆ ಹೆಚ್ಚಿಸಿದಾಗಿನಿಂದ ಚಿನ್ನದ ಬೆಲೆಗಳು ತೀವ್ರ ಏರಿಳಿತಗಳನ್ನು ಕಂಡಿವೆ.
ಮತ್ತೆ ಕುಸಿದ ಚಿನ್ನದ ದರ
ಮೇ 22ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 44 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,59,490 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 40 ರೂ. ಕಡಿಮೆಯಾಗಿ ಹತ್ತು ಗ್ರಾಂಗೆ 1,46,200 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 33 ರೂ. ಕುಸಿದು ಹತ್ತು ಗ್ರಾಂಗೆ 1,19,620 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮೇ 22ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,949 (-44) ರೂ.ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,620 (-40) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,962 (-33) ರೂ. ಬೆಲೆಗೆ ತಲುಪಿದೆ.
ಇಂದಿನ ಬೆಳ್ಳಿಯ ದರವೆಷ್ಟು?
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಏಪ್ರಿಲ್ ಆರಂಭದಲ್ಲಿ 2,55,000 ರೂ. ಗೆ ಬಂದು ತಲುಪಿದ ನಂತರ, ಬಹುತೇಕ ತಿಂಗಳಿಡೀ ಅದೇ ಬೆಲೆಯಲ್ಲಿ ಮುಂದುವರಿದಿತ್ತು. ಕಳೆದ ವಾರದಿಂದ ಬೆಳ್ಳಿಯ ಬೆಲೆ ಏರುತ್ತಲೇ ಇದೆ. ಆದರೆ, ಸೋಮವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,79,900 ರೂ.ಗೆ ಬಂದು ನಿಂತಿದೆ. ಮತ್ತೆ ಮಂಗಳವಾರ ಕೆಜಿ ಬೆಳ್ಳಿಗೆ 2,90,100 ರೂ. ಆಗಿತ್ತು. ಬುಧವಾರ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,80,000 ರೂ.ಗೆ ಕುಸಿದಿತ್ತು. ಗುರುವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,85,000 ರೂ.ಗೆ ಬಂದು ತಲುಪಿತ್ತು. ಇದೀಗ ಶುಕ್ರವಾರ ಅದೇ ಬೆಲೆಗೆ ಸ್ಥಿರವಾಗಿ ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,964 (-59) ರೂ., 22 ಕ್ಯಾರೆಟ್ ಚಿನ್ನದ ದರ 14,625 (-50) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,949 (-44) ರೂ., 22 ಕ್ಯಾರೆಟ್ ಚಿನ್ನದ ದರ 14,620 (-40) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,954 (-59) ರೂ., 22 ಕ್ಯಾರೆಟ್ ಚಿನ್ನದ ದರ 14,625 (-40) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,124 (-43) ರೂ., 22 ಕ್ಯಾರೆಟ್ ಚಿನ್ನದ ದರ 14,780 (-30) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,949 (-44) ರೂ., 22 ಕ್ಯಾರೆಟ್ ಚಿನ್ನದ ದರ 14,620 (-40) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,949 (-44) ರೂ., 22 ಕ್ಯಾರೆಟ್ ಚಿನ್ನದ ದರ 14,620 (-40) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,964 (-59) ರೂ., 22 ಕ್ಯಾರೆಟ್ ಚಿನ್ನದ ದರ 14,625 (-50) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,964 (-59) ರೂ., 22 ಕ್ಯಾರೆಟ್ ಚಿನ್ನದ ದರ 14,625 (-50) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,964 (-59) ರೂ., 22 ಕ್ಯಾರೆಟ್ ಚಿನ್ನದ ದರ 14,625 (-50) ರೂ.






