ಮತ್ತೆ ಕುಸಿದ ಚಿನ್ನದ ಬೆಲೆ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?

Photo: AI-Generated
ಹಣದುಬ್ಬರ ಮತ್ತು ಬಡ್ಡಿದರಗಳ ಬದಲಾವಣೆಯು ಚಿನ್ನ-ಬೆಳ್ಳಿಯ ಬೆಲೆಯನ್ನು ನಿರ್ಧರಿಸುತ್ತದೆ.
ಜನವರಿಯಲ್ಲಿ ಅತ್ಯಧಿಕ ಮಟ್ಟಕ್ಕೆ ಏರಿದ ನಂತರ ಫೆಬ್ರವರಿಯಲ್ಲಿ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಕಾರಣದಿಂದ ಚಿನ್ನದ ಬೆಲೆಗಳು ಕುಸಿಯುತ್ತಾ ಬಂದಿದ್ದು ಜೂನ್ನಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದ್ದವು. ಜುಲೈ ಪೂರ್ತಿ ಕನಿಷ್ಠ ಮಟ್ಟದಲ್ಲಿ ಮುಂದುವರಿದಿದ್ದ ಚಿನ್ನದ ದರ ಆಗಸ್ಟ್ ಮೊದಲ ವಾರದಿಂದಲೇ ಏರಿಕೆಯಾಗಿ ಟ್ರೆಂಡ್ ಇಡೀ ತಿಂಗಳು ಮುಂದುವರಿದಿತ್ತು. ನಂತರ ಆಗಸ್ಟ್ ಕೊನೆ ವಾರ ಮತ್ತು ಸೆಪ್ಟೆಂಬರ್ 1ರಿಂದ ಚಿನ್ನದ ದರ ತೀವ್ರ ಕುಸಿತದ ಹಾದಿಯಲ್ಲಿದೆ.
ನಡುವೆ ಒಂದೆರಡು ಬಾರಿ ಸ್ವಲ್ಪ ಏರಿಕೆಯಾಗಿದ್ದರೂ, ಕುಸಿತ ಜಾರಿಯಲ್ಲಿದೆ. ಕಳೆದ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿರುವುದು ಹಬ್ಬದ ದಿನಗಳಲ್ಲಿ ಗ್ರಾಹಕರಲ್ಲಿ ನಿರಾಳತೆ ಮೂಡಿಸಿತ್ತು. ಶನಿವಾರ ಬೆಲೆ ಮತ್ತೆ ಸ್ವಲ್ಪ ಏರಿಕೆ ಕಂಡುಬಂದಿದೆ. ಇದೀಗ ಸೋಮವಾರ ಮತ್ತು ಮಂಗಳವಾರ ಮಾರುಕಟ್ಟೆ ಕುಸಿತದ ಜೊತೆಗೆ ಆರಂಭವಾಗಿದೆ.
ಚಿನ್ನದ ಬೆಲೆ ನಿರ್ಧರಿಸಲಿರುವ ಹಣದುಬ್ಬರ
ಜಾಗತಿಕ ಉದ್ವಿಗ್ನತೆ ಇದ್ದರೂ ಚಿನ್ನದ ಸುರಕ್ಷಿತ ಹೂಡಿಕೆ ಬೇಡಿಕೆ ಕಡಿಮೆಯಾಗಿದೆ. ಬುಧವಾರದ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ನೀತಿ ನಿರ್ಧಾರ ಮುಂದಿನ ಬದಲಾವಣೆಗೆ ಕಾರಣವಾಗಲಿದೆ.
ಹೌತಿ ಬಂಡುಕೋರರ ದಾಳಿಯಿಂದಾಗಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಏರಿಕೆಯಾಗಲಿದೆ. ಜಾಗತಿಕ ಹಡಗು ಸಾರಿಗೆ ಮಾರ್ಗಗಳಲ್ಲಿ ಅಡಚಣೆ ಮುಂದುವರಿದಿವೆ. ಪ್ರಮುಖ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದೆ. ಹಣದುಬ್ಬರ ಮತ್ತು ಬಡ್ಡಿದರಗಳ ಬದಲಾವಣೆಯು ಚಿನ್ನ-ಬೆಳ್ಳಿಯ ಬೆಲೆಯನ್ನು ನಿರ್ಧರಿಸುತ್ತದೆ.
ಚಿನ್ನದ ದರದಲ್ಲಿ ಇಳಿಕೆ
ಸೆಪ್ಟೆಂಬರ್ 15ರಂದು ಮಂಗಳವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 92ರೂ. ಇಳಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,53,170 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 85ರೂ. ಕುಸಿದಿದ್ದು, ಹತ್ತು ಗ್ರಾಂಗೆ 1,40,400 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 69ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,14,880 ರೂ.ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಸೆಪ್ಟೆಂಬರ್ 15ರಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸ್ವಲ್ಪ ಇಳಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,317 (-92) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,040 (-85) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,488 (-69) ರೂ. ಬೆಲೆಗೆ ಬಂದು ನಿಂತಿದೆ.
ಸ್ಥಿರವಾದ ಬೆಳ್ಳಿಯ ದರ
ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000ರೂ. ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ನಿಂತಿತ್ತು. ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರತಿ ಕೆಜಿ ಬೆಳ್ಳಿದರ 2,50,000ರೂ.ಗೆ ಬಂದು, ಅದೇ ಬೆಲೆಯಲ್ಲಿ ಸ್ಥಿರವಾಗಿತ್ತು. ಆದರೆ ಕಳೆದ ಶುಕ್ರವಾರ ಮತ್ತೆ ಪ್ರತಿ ಗ್ರಾಂ ಬೆಳ್ಳಿ ದರ 10ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ತಲುಪಿದೆ. ಇದೀಗ ಶನಿವಾರ, ಸೋಮವಾರ ಮತ್ತು ಮಂಗಳವಾರವೂ ಅದೇ ಬೆಲೆಗೆ ಸ್ಥಿರವಾಗಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,332 (-92) ರೂ., 22 ಕ್ಯಾರೆಟ್ ಚಿನ್ನದ ದರ 14,055 (-85) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,317 (-92) ರೂ., 22 ಕ್ಯಾರೆಟ್ ಚಿನ್ನದ ದರ 14,040 (-85) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,322 (-92) ರೂ., 22 ಕ್ಯಾರೆಟ್ ಚಿನ್ನದ ದರ 14,045 (-85) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,317 (-92) ರೂ., 22 ಕ್ಯಾರೆಟ್ ಚಿನ್ನದ ದರ 14,040 (-85) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,317 (-92) ರೂ., 22 ಕ್ಯಾರೆಟ್ ಚಿನ್ನದ ದರ 14,040 (-85) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,317 (-92) ರೂ., 22 ಕ್ಯಾರೆಟ್ ಚಿನ್ನದ ದರ 14,040 (-85) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,332 (-92) ರೂ., 22 ಕ್ಯಾರೆಟ್ ಚಿನ್ನದ ದರ 14,055 (-85) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,332 (-92) ರೂ., 22 ಕ್ಯಾರೆಟ್ ಚಿನ್ನದ ದರ 14,055 (-85) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,332 (-92) ರೂ., 22 ಕ್ಯಾರೆಟ್ ಚಿನ್ನದ ದರ 14,055 (-85) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 15,317 (-92) ರೂ., 22 ಕ್ಯಾರೆಟ್ ಚಿನ್ನದ ದರ 14,040 (-85) ರೂ.






