ಮತ್ತೆ ಅಲ್ಪ ಮಟ್ಟಿಗೆ ಕುಸಿದ ಚಿನ್ನದ ಬೆಲೆ

ಸಾಂದರ್ಭಿಕ ಚಿತ್ರ (AI)
ಪ್ರಸ್ತುತ ಸಂಘರ್ಷ ಎಷ್ಟು ದೀರ್ಘ ಕಾಲ ಇರುತ್ತದೆ ಎನ್ನುವುದರ ಮೇಲೆ ಚಿನ್ನದ ಬೆಲೆಗಳ ಸ್ಥಿರತೆ ಅವಲಂಬಿಸಿವೆ.
ಫೆಬ್ರವರಿ ಅಂತ್ಯದಿಂದ ಚಿನ್ನದ ಮೌಲ್ಯ ಸುಮಾರು ಶೇ 10ರಷ್ಟು ಕುಸಿದಿದೆ. ಹೂಡಿಕೆದಾರರು ಚಿನ್ನಕ್ಕೆ ಹೋಲಿಸಿದರೆ ಅಮೆರಿಕನ್ ಡಾಲರ್ ಮೇಲೆ ಹೂಡಿಕೆ ಸುರಕ್ಷಿತವೆಂದು ಭಾವಿಸುತ್ತಿರುವ ಕಾರಣ ಕುಸಿತ ಕಂಡುಬಂದಿದೆ. 2026ರ ಆರಂಭದಲ್ಲಿ ತೈಲ ಬೆಲೆ ಸ್ಥಿರವಾಗಿರುವ ನಿರೀಕ್ಷೆಯಲ್ಲಿ ಚಿನ್ನದ ಮೇಲೆ ವಿಪರೀತ ಹೂಡಿಕೆಯಾಗಿ ಬೆಲೆಗಳು ಏರಿದ್ದವು. ಇದೀಗ ಬೆಳವಣಿಗೆ ವಿರುದ್ಧ ದಿಕ್ಕಿಗೆ ತಿರುಗಿವೆ. ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವಾಗದೆ ಇದ್ದರೆ ತೈಲ ಬೆಲೆಗಳು ಬ್ಯಾರೆಲ್ಗೆ 110 ಡಾಲರ್ ಗೆ ಏರಬಹುದು. ಪ್ರಸ್ತುತ ಸಂಘರ್ಷ ಎಷ್ಟು ದೀರ್ಘ ಕಾಲ ಇರುತ್ತದೆ ಎನ್ನುವುದರ ಮೇಲೆ ಚಿನ್ನದ ಬೆಲೆಗಳ ಸ್ಥಿರತೆ ಅವಲಂಬಿಸಿವೆ.
ಇಂದಿನ ಚಿನ್ನದ ದರ ಹೇಗಿದೆ?
ಎಪ್ರಿಲ್ 13ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 38 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,52,460 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 35 ರೂ. ಕುಸಿದು ಹತ್ತು ಗ್ರಾಂಗೆ 1,39,750 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 29 ರೂ. ಕುಸಿದು ಹತ್ತು ಗ್ರಾಂಗೆ 1,14,340 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಎಪ್ರಿಲ್ 13ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪಮಟ್ಟಿಗೆ ಕುಸಿದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,246 (-38) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,975 (-35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,434 (-29) ರೂ. ಬೆಲೆಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಸ್ಥಿರತೆ
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಏಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಇದೀಗ ಭಾನುವಾರ ಪ್ರತಿ ಗ್ರಾಂಗೆ 5 ರೂ. ಕುಸಿದಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,55,000 ರೂ.ಗೆ ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,246 (-38) ರೂ., 22 ಕ್ಯಾರೆಟ್ ಚಿನ್ನದ ದರ 13,975 (-35) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,251 (-38) ರೂ., 22 ಕ್ಯಾರೆಟ್ ಚಿನ್ನದ ದರ 13,980 (-35) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,338 (-44) ರೂ., 22 ಕ್ಯಾರೆಟ್ ಚಿನ್ನದ ದರ 14,060 (-40) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,246 (-38) ರೂ., 22 ಕ್ಯಾರೆಟ್ ಚಿನ್ನದ ದರ 13,975 (-35) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,246 (-38) ರೂ., 22 ಕ್ಯಾರೆಟ್ ಚಿನ್ನದ ದರ 13,975 (-35) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ.
ಲಕ್ನೊ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ.






