ಮತ್ತೆ ಕುಸಿದ ಚಿನ್ನದ ಬೆಲೆ: ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಈಗಿನ ಕುಸಿತವು ಎಪ್ರಿಲ್- ಜುಲೈ ನಡುವಿನ ಮದುವೆ ಋತುವಿಗೆ ಖರೀದಿದಾರರು ಆಭರಣ ಖರೀದಿಸಲು ಪ್ರೇರೇಪಿಸಬಹುದು.
ಪಶ್ಚಿಮ ಏಷ್ಯಾದ ಭೌಗೋಳಿಕ- ರಾಜಕೀಯ ಬೆಳವಣಿಗೆಗಳ ನಡುವೆ ಅಮೂಲ್ಯ ಲೋಹಗಳ ಬೆಲೆ ಸೂಕ್ಷ್ಮವಾಗಿರುವುದು ದೇಸಿ ಮಾರುಕಟ್ಟೆಗಳಲ್ಲಿ ಮಾರುಕಟ್ಟೆ ದಿಕ್ಕನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಸೋಮವಾರ ಅಮೆರಿಕದ ಡಾಲರ್ನ ಹಿನ್ನಡೆ ಮತ್ತು ತೈಲ ಬೆಲೆಗಳ ಇಳಿಕೆಯಿಂದ ಚಿನ್ನದ ಬೆಲೆಗಳು ಚೇತರಿಸಿಕೊಂಡಿದ್ದವು. ಆದರೆ ಮಂಗಳವಾರ ಮತ್ತೆ ಕುಸಿತದ ಜೊತೆಗೆ ಮಾರುಕಟ್ಟೆ ಆರಂಭವಾಗಿದೆ.
ಈಗಿನ ಕುಸಿತವು ಎಪ್ರಿಲ್- ಜುಲೈ ನಡುವಿನ ಮದುವೆ ಋತುವಿಗೆ ಖರೀದಿದಾರರು ಆಭರಣ ಖರೀದಿಸಲು ಪ್ರೇರೇಪಿಸಬಹುದು. ಅನೇಕರು ಅಕ್ಷಯ ತೃತೀಯ ಸಮಯದಲ್ಲಿ ಮುಂಗಡ ಆರ್ಡರ್ ನೀಡುವ ಸಾಧ್ಯತೆಯಿದೆ. ವಿಶ್ವ ಚಿನ್ನ ಮಂಡಳಿಯ ಪ್ರಕಾರ ಕೇಂದ್ರೀಯ ಬ್ಯಾಂಕ್ಗಳು ಇತ್ತೀಚೆಗೆ ಸುಮಾರು 19 ಟನ್ಗಳಷ್ಟು ಚಿನ್ನವನ್ನು ಖರೀದಿಸಿದ್ದು, ಪ್ರಮುಖ ಮೀಸಲು ಆಸ್ತಿಯಾಗಿ ಚಿನ್ನಕ್ಕೆ ಆದ್ಯತೆ ನೀಡಲು ಮುಂದುವರಿಸಿರುವುದು ಸಾಬೀತಾಗಿದೆ.
ಇಂದಿನ ಚಿನ್ನದ ದರ ಹೇಗಿದೆ?
ಎಪ್ರಿಲ್ 7ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 82 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,49,840 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 75 ರೂ. ಕುಸಿದು ಹತ್ತು ಗ್ರಾಂಗೆ 1,37,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 61 ರೂ. ಕುಸಿದು ಹತ್ತು ಗ್ರಾಂಗೆ 1,12,380 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಎಪ್ರಿಲ್ 7ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,984 (-82) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,735 (-75) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,238 (-61) ರೂ. ಬೆಲೆಗೆ ತಲುಪಿದೆ.
ಸ್ಥಿರವಾದ ಬೆಳ್ಳಿ
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 9ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಕಳೆದ ವಾರದಿಂದ ಪ್ರತಿ ಕೆಜಿಗೆ 2,45,000- 2,50,000 ರೂ. ನಡುವೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ, ಕಳೆದ ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,50,000 ರೂ.ಗೆ ಬಂದಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,55,000 ರೂ. ಗೆ ಬಂದು ತಲುಪಿತ್ತು. ಗುರುವಾರ ಪ್ರತಿ ಗ್ರಾಂಗೆ 5 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,50,000 ರೂ. ಗೆ ಬಂದು ತಲುಪಿದೆ. ಕಳೆದ ಶುಕ್ರವಾರದಿಂದ ಇಂದಿನವರೆಗೆ ಇದೇ ಬೆಲೆಯಲ್ಲಿ ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,999 (-82) ರೂ., 22 ಕ್ಯಾರೆಟ್ ಚಿನ್ನದ ದರ 13,750 (-75) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,984 (-82) ರೂ., 22 ಕ್ಯಾರೆಟ್ ಚಿನ್ನದ ದರ 13,735 (-75) ರೂ.
ಅಹ್ಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,989 (-82) ರೂ., 22 ಕ್ಯಾರೆಟ್ ಚಿನ್ನದ ದರ 13,740 (-75) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,120 (-142) ರೂ., 22 ಕ್ಯಾರೆಟ್ ಚಿನ್ನದ ದರ 13,860 (-130) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,984 (-82) ರೂ., 22 ಕ್ಯಾರೆಟ್ ಚಿನ್ನದ ದರ 13,735 (-75) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,984 (-82) ರೂ., 22 ಕ್ಯಾರೆಟ್ ಚಿನ್ನದ ದರ 13,735 (-75) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,999 (-82) ರೂ., 22 ಕ್ಯಾರೆಟ್ ಚಿನ್ನದ ದರ 13,750 (-75) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,999 (-82) ರೂ., 22 ಕ್ಯಾರೆಟ್ ಚಿನ್ನದ ದರ 13,750 (-75) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,999 (-82) ರೂ., 22 ಕ್ಯಾರೆಟ್ ಚಿನ್ನದ ದರ 13,750 (-75) ರೂ.







