ಭಾರೀ ಏರಿಕೆ ಕಂಡ ಚಿನ್ನದ ಬೆಲೆ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ : ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ನಂತರ ಭೌಗೋಳಿಕ-ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕುಸಿಯುತ್ತಲೇ ಬಂದಿತ್ತು. ಜೂನ್ 25ರಂದು ಅತಿ ಕನಿಷ್ಠ ದರವನ್ನು ದಾಖಲಿಸಿತ್ತು. ನಂತರ ಏರಿಳಿತ ಕಂಡುಬಂದಿತ್ತು. ಆದರೆ, ಆಗಸ್ಟ್ ಮೊದಲ ವಾರದಿಂದಲೇ ಪ್ರಾರಂಭವಾದ ಚಿನ್ನದ ದರ ಏರಿಕೆಯ ಟ್ರೆಂಡ್ ಇನ್ನೂ ಮುಂದುವರಿದಿದೆ.
ಸೋಮವಾರ ಆಭರಣ ಚಿನ್ನದ ಬೆಲೆ ಮತ್ತೆ ಪ್ರತಿ ಗ್ರಾಂಗೆ 15,000 ಮೀರಿ ಏರಿಕೆಯಾಗಿದೆ. ಮಾರ್ಚ್ ಮಾಸದ ಬೆಲೆಯ ಸಮಕ್ಕೆ ಬಂದಿದೆ. ದುರ್ಬಲ ಡಾಲರ್ ಕಾರಣದಿಂದ ಮೂರು ತಿಂಗಳ ಹಿಂದಿನ ಬೆಲೆಗೆ ಏರಿದೆ.
ಡಾಲರ್ ಮೌಲ್ಯವು ಬಹು-ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಕಾರಣ ಚಿನ್ನವು ದೃಢವಾದ ಬೆಲೆಯೊಂದಿಗೆ ವಾರವನ್ನು ಆರಂಭಿಸಿದೆ. ದುರ್ಬಲ ಡಾಲರ್ ಇತರ ಕರೆನ್ಸಿ ಹೊಂದಿರುವ ಖರೀದಿದಾರಿಗೆ ಚಿನ್ನವನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ.
ಚಿನ್ನದ ದರದಲ್ಲಿ ಏರಿಕೆ
ಆಗಸ್ಟ್ 24ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರದ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 88 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,63, 970 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 80ರೂ. ಏರಿದ್ದು, ಹತ್ತು ಗ್ರಾಂಗೆ 1,50,300ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 61ರೂ. ಹೆಚ್ಚಾಗಿ, ಹತ್ತು ಗ್ರಾಂಗೆ 1,22,930ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಆಗಸ್ಟ್ 24ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,397 (+88) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,030 (+80)ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,293 (+61)ರೂ. ಬೆಲೆಗೆ ಬಂದು ನಿಂತಿದೆ.
ಏರಿದ ಬೆಳ್ಳಿಯ ದರ
ಮಂಗಳೂರಿನಲ್ಲಿ ಬೆಳ್ಳಿಯ ಬೆಲೆ ಮೇ 13ರಂದು ಪ್ರತಿ ಕೆಜಿಗೆ 3,30,000ಕ್ಕೆ ಏರಿದ ನಂತರ, ಬಹುತೇಕ ಮೇ ತಿಂಗಳಿಡೀ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಆದರೆ ಜೂನ್ನಲ್ಲಿ ಸ್ವಲ್ಪ ಏರಿಳಿತ ಕಂಡುಬಂದು ಪ್ರತಿ ಕೆಜಿಗೆ 2,40,000 ರೂ.ಗೆ ಬಂದು ನಿಂತಿತ್ತು. ಜುಲೈ ಆರಂಭದಲ್ಲಿ ಪ್ರತಿ ಕೆಜಿಗೆ 2,50,000ರೂ.ವರೆಗೂ ಬೆಲೆ ಏರಿದ ನಂತರ ಇಳಿದಿತ್ತು.
ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000ರೂ.ಗೆ ಸ್ಥಿರವಾಗಿತ್ತು. ಆದರೆ ಕಳೆದೆರಡು ವಾರದಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,50,000 ರೂ. ಗೆ ಬೆಲೆ ಸ್ಥಿರವಾಗಿತ್ತು. ಇದೀಗ ಆಗಸ್ಟ್ ಕೊನೆ ವಾರದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,412 (+88) ರೂ., 22 ಕ್ಯಾರೆಟ್ ಚಿನ್ನದ ದರ 15,045 (+80) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,397 (+88) ರೂ., 22 ಕ್ಯಾರೆಟ್ ಚಿನ್ನದ ದರ 15,030 (+80) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,402 (+88) ರೂ., 22 ಕ್ಯಾರೆಟ್ ಚಿನ್ನದ ದರ 15,035 (+80) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,397 (+88) ರೂ., 22 ಕ್ಯಾರೆಟ್ ಚಿನ್ನದ ದರ 15,030 (+80) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,397 (+88) ರೂ., 22 ಕ್ಯಾರೆಟ್ ಚಿನ್ನದ ದರ 15,030 (+80) ರೂ
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,397 (+88) ರೂ., 22 ಕ್ಯಾರೆಟ್ ಚಿನ್ನದ ದರ 15,030 (+80) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 16,412 (+88) ರೂ., 22 ಕ್ಯಾರೆಟ್ ಚಿನ್ನದ ದರ 15,045 (+80) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,412 (+88) ರೂ., 22 ಕ್ಯಾರೆಟ್ ಚಿನ್ನದ ದರ 15,045 (+80) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,412 (+88) ರೂ., 22 ಕ್ಯಾರೆಟ್ ಚಿನ್ನದ ದರ 15,045 (+80) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 16,397 (+88) ರೂ., 22 ಕ್ಯಾರೆಟ್ ಚಿನ್ನದ ದರ 15,030 (+80) ರೂ.






