ಮತ್ತೆ ಏರು ಹಾದಿಯಲ್ಲಿರುವ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಅಮೆರಿಕ ಇತರ ದೇಶಗಳ ಮೇಲೆ ಹೇರಿದ ತೆರಿಗೆಗಳ ವಿರುದ್ಧ ಅಲ್ಲಿನ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಅರ್ಥವ್ಯವಸ್ಥೆಯಲ್ಲಿ ಮತ್ತು ಚಿನ್ನದ ಬೆಲೆಯಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಲಿದೆ.
ಜನವರಿಯಲ್ಲಿ ನಾಗಾಲೋಟದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಫೆಬ್ರವರಿ ಆರಂಭದಿಂದಲೇ ಕುಸಿಯುತ್ತಾ ಬಂದಿತ್ತು. ನಂತರ ಸತತ ಕುಸಿತ ಮತ್ತು ಅಲ್ಪ ಏರಿಕೆಗಳ ನಡುವೆ ಪ್ರತಿ ಗ್ರಾಂಗೆ 15 ಸಾವಿರದಿಂದ 16 ಸಾವಿರ ರೂ. ನಡುವೆ ಸ್ಥಿರವಾಗಿ ನಿಂತಿತ್ತು. ಇದೀಗ ಈ ವಾರವಿಡೀ ಇದೇ ಬೆಲೆಯ ನಡುವೆ ಚಿನ್ನ ಏರಿಳಿತ ಕಾಣುತ್ತಿದೆ. ನಿನ್ನೆ ಅಲ್ಪ ಮಟ್ಟಿಗೆ ಕುಸಿದಿದ್ದ ಬೆಲೆ ಇಂದು ಮತ್ತೆ ಅಲ್ಪ ಮಟ್ಟಿಗೆ ಏರಿಕೆಯಾಗಿದೆ.
ಅಮೆರಿಕ ಇತರ ದೇಶಗಳ ಮೇಲೆ ಹೇರಿದ ತೆರಿಗೆಗಳ ವಿರುದ್ಧ ಅಲ್ಲಿನ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಅರ್ಥವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯನ್ನು ಹುಡುಕುವುದರಿಂದ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಫೆಬ್ರವರಿ 21ರಂದು ಶನಿವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 191 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,59,280 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 175 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,46,000 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 143 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,19,460 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಫೆಬ್ರವರಿ 21ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,928 (+191) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,600 (+175) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,946 (+143) ರೂ. ಬೆಲೆಗೆ ತಲುಪಿದೆ.
ಏರುಹಾದಿಯಲ್ಲಿರುವ ಬೆಳ್ಳಿ
ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಕಳೆದ ವಾರದ ಆರಂಭದಲ್ಲಿ ಅಲ್ಪ ಏರಿಕೆ ಕಂಡಿತ್ತು. ನಂತರ ಫೆಬ್ರವರಿ 10ರಿಂದ ಸತತ ಕುಸಿತ ಕಾಣುತ್ತಾ ಬಂದಿದೆ. ಈ ವಾರದ ಆರಂಭದಲ್ಲಿ ಮಂಗಳವಾರ ಪ್ರತಿ ಗ್ರಾಂಗೆ 8 ರೂ. ಕುಸಿತ ಕಂಡಿದ್ದ ಬೆಳ್ಳಿ ಕೆಜಿಗೆ 2,60,000 ರೂ. ಗೆ ಬಂದು ನಿಂತಿತ್ತು. ನಂತರ ಬುಧವಾರ ಪ್ರತಿ ಗ್ರಾಂಗೆ 5 ರೂ. ಕುಸಿದು ಕೆಜಿಗೆ 2,55,000 ರೂ. ಗೆ ಬಂದು ನಿಂತಿತ್ತು. ಆದರೆ ಗುರುವಾರದಿಂದ ಬೆಳ್ಳಿ ಏರುಹಾದಿಯಲ್ಲಿದೆ. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,928 (+191) ರೂ., 22 ಕ್ಯಾರೆಟ್ ಚಿನ್ನದ ದರ 14,600 (+175) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,933 (+191) ರೂ., 22 ಕ್ಯಾರೆಟ್ ಚಿನ್ನದ ದರ 14,605 (+175) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,015 (+284) ರೂ., 22 ಕ್ಯಾರೆಟ್ ಚಿನ್ನದ ದರ 14,680 (+260) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,928 (+191) ರೂ., 22 ಕ್ಯಾರೆಟ್ ಚಿನ್ನದ ದರ 14,600 (+175) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,928 (+191) ರೂ., 22 ಕ್ಯಾರೆಟ್ ಚಿನ್ನದ ದರ 14,600 (+175) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,943 (+191) ರೂ., 22 ಕ್ಯಾರೆಟ್ ಚಿನ್ನದ ದರ 14,615 (+175) ರೂ.







