ಬುಧವಾರ ಮತ್ತೆ ಏರುಹಾದಿಯಲ್ಲಿರುವ ಚಿನ್ನ; ಇಂದು ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?

ಸಾಂದರ್ಭಿಕ ಚಿತ್ರ | Photo Credit : freepik
ಮಂಗಳವಾರ ಇಳಿಕೆ ಕಂಡಿದ್ದ ಚಿನ್ನ ಬುಧವಾರ ಮತ್ತೆ ಏರಿಕೆಯಾಗಿದೆ. ಫೆಡರಲ್ ಬಡ್ಡಿದರದ ಕಡಿತದ ನಿರೀಕ್ಷೆಯಿಂದಾಗಿ ಚಿನ್ನದ ಬೆಲೆಗಳು ಮತ್ತೆ ಏರತೊಡಗಿವೆ. ಬೆಳ್ಳಿಯ ದರವೂ ಪ್ರತಿ ಕೆಜಿಗೆ ರೂ 3000 ಏರಿಕೆಯಾಗಿದೆ. ಡಿಸೆಂಬರ್ 3ರಂದು ಮಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ
ಅಮೆರಿಕದ ಜೊತೆಗಿನ ಸುಂಕದ ಸಮರ, ಫೆಡರಲ್ ಬಡ್ಡಿದರ ಕಡಿತದ ನಿರೀಕ್ಷೆ, ರಷ್ಯಾ- ಉಕ್ರೇನ್ ಯುದ್ದಧ, ವ್ಯಾಪಾರ ಸಮರಗಳು ಮತ್ತು ಡಾಲರ್ ಮೌಲ್ಯದಂತಹ ಅಂಶಗಳು ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಮಂಗಳವಾರ ಇಳಿಕೆ ಕಂಡಿದ್ದ ಚಿನ್ನ ಬುಧವಾರ ಮತ್ತೆ ಏರಿಕೆಯಾಗಿದೆ. ಕಳೆದೊಂದು ವಾರದಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ನಂತರ ಮಂಗಳವಾರ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಬುಧವಾರ ಮತ್ತೆ ಏರಿಕೆಯ ಹಾದಿ ಹಿಡಿದಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?
ಬುಧವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಮತ್ತೆ ಏರಿದೆ. ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ರೂ. 13,058 (+71)22 ಕ್ಯಾರೆಟ್ ಚಿನ್ನಕ್ಕೆ ರೂ. 11,970 (+65) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,794 (+53) ಬೆಲೆ ತಲುಪಿದೆ.
ಇದೀಗ ಚಿನ್ನ ಸುರಕ್ಷಿತ ಹೂಡಿಕೆಯ ಸಾಧನವಾಗಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ. 2025ರಲ್ಲಿ ಚಿನ್ನದ ಬೆಲೆ ಶೇ 60ರಷ್ಟು ಏರಿಕೆಯಾಗಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.
ಬೆಂಗಳೂರಿನಲ್ಲಿ ಚಿನ್ನದ ದರಗಳು
ಬೆಂಗಳೂರಲ್ಲಿ ಚಿನ್ನದ ಬೆಲೆಗಳು ಮತ್ತೆ ಏರಿಕೆಯಾಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ರೂ 710 ರಷ್ಟು ಏರಿಕೆಯಾಗಿದ್ದು, ರೂ 1,30,580ರಲ್ಲಿ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಆಭರಣ ತಯಾರಿಕೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ರೂ 650 ರಷ್ಟು ಏರಿಕೆಯಾಗಿದ್ದು, ರೂ 1,19,970ಕ್ಕೆ ಇಳಿದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ
ಬುಧವಾರ ಸ್ಪಾಟ್ ಗೋಲ್ಡ್ ದರ ಔನ್ವಸ್ಗೆ 33 ಡಾಲರ್ಗಿಂತ ಹೆಚ್ಚು ಕಡಿಮೆಯಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ 4207ಕ್ಕೆ ಇಳಿದಿದೆ. ಸ್ಪಾಟ್ ಸಿಲ್ವರ್ ದರ ಔನ್ಸ್ಗೆ ಶೇ 0.54ರಷ್ಉ ಇಳಿದು ರೂ 58.25ಕ್ಕೆ ತಲುಪಿದೆ.
ಬೆಳ್ಳಿ ದರ ರೂ 3000 ಏರಿಕೆ
ಬೆಳ್ಳಿ ಬೆಲೆಯು ಚಿನ್ನದ ಬೆಲೆಗೆ ಪೈಪೋಟಿ ನೀಡುವಂತೆ ಏರಿಕೆಯಾಗುತ್ತಿದೆ. ದೇಶೀಯವಾಗಿ ಒಂದು ಕೆಜಿ ಬೆಳ್ಳಿ ದರ ರೂ 2 ಲಕ್ಷದ ಗಡಿಯನ್ನು ತಲುಪಿತ್ತು. ಆದರೆ, ನಂತರ ಇದು ಮತ್ತೆ ರೂ 1.5 ಲಕ್ಷಕ್ಕೆ ಕುಸಿದಿತ್ತು. ಇದೀಗ ಮತ್ತೆ ಏರಿಕೆಯಾಗಿದ್ದು, ಇಂದು ಬುಧವಾರ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ರೂ 3000 ಏರಿಕೆಯಾಗಿದೆ. ಪ್ರಸ್ತುತ ಹೈದರಾಬಾದ್ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ದರ ರೂ 1.99 ಲಕ್ಷದಂತೆ ವಹಿವಾಟು ನಡೆಸುತ್ತಿದೆ. ಬೆಂಗಳೂರು, ಮುಂಬೈ ಸೇರಿದಂತೆ ಇತರೆ ಪ್ರಮುಖ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ 1.91 ಲಕ್ಷದಂತೆ ಮಾರಾಟವಾಗುತ್ತಿದೆ.







