ಮತ್ತೆ ಕುಸಿದ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 100 ಡಾಲರ್ ಒಳಗೆ ಇರುವುದೂ ಚಿನ್ನ ಮತ್ತು ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರಲಿದೆ.
ಜಾಗತಿಕವಾಗಿ ಅನಿಶ್ಚಿತತೆ ಹೆಚ್ಚಿರುವ ಕಾರಣದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಳಿತ ಕಾಣುತ್ತಿದೆ. ಅಮೆರಿಕ ಮತ್ತು ಇರಾನ್ ಯುದ್ಧದ ಪರಿಣಾಮ, ಅಮೆರಿಕದ ಫೆಡರಲ್ ರಿಸರ್ವ್ ನ ದರ ಕಡಿತದ ಕ್ರಮಗಳು ಚಿನ್ನ ಮತ್ತು ಬೆಳ್ಳಿಯ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಅಮೆರಿಕದ ಹೊಸ ಫೆಡ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ರನ್ನು ನೇಮಿಸುವ ಸಾಧ್ಯತೆಯೂ ಬೆಲೆಯ ಮೇಲೆ ಪ್ರಭಾವ ಬೀರಲಿದೆ. ಅಮೆರಿಕ-ಇರಾನ್ ಯುದ್ಧದ ಬೆಳವಣಿಗೆಗಳು ಭವಿಷ್ಯವನ್ನು ರೂಪಿಸುತ್ತವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯಕ್ಕೆ ಕದನ ವಿರಾಮವನ್ನು ವಿಸ್ತರಿಸಿದ್ದರೂ, ಹಾರ್ಮುಝ್ ಜಲಸಂಧಿಯ ದಿಗ್ಬಂಧನ ಇನ್ನೂ ಜಾರಿಯಲ್ಲಿದೆ. ಕಚ್ಚಾ ತೈಲ ಪ್ರತಿ ಬ್ಯಾರೆಲ್ಗೆ 100 ಡಾಲರ್ ಒಳಗೆ ಇರುವುದೂ ಚಿನ್ನ ಮತ್ತು ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರಲಿದೆ.
ಇಂದಿನ ಚಿನ್ನದ ದರ ಹೇಗಿದೆ?
ಎಪ್ರಿಲ್ 23ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 120 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,53,550 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 110 ರೂ. ಕಡಿಮೆಯಾಗಿ ಹತ್ತು ಗ್ರಾಂಗೆ 1,40,750 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 90 ರೂ. ಕುಸಿದು, ಹತ್ತು ಗ್ರಾಂಗೆ 1,15,160 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಎಪ್ರಿಲ್ 23ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,355 (-120) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,075 (-110) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,516 (-90) ರೂ. ಬೆಲೆಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಕುಸಿತ
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಎಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಕಳೆದ ಶನಿವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,75,000 ಕ್ಕೆ ಬಂದು ತಲುಪಿದೆ. ಸೋಮವಾರವೂ ಅದೇ ದರದಲ್ಲಿ ಸ್ಥಿರವಾಗಿದೆ. ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಮತ್ತೆ ಪ್ರತಿ ಕೆಜಿಗೆ 2,65,000 ಕ್ಕೆ ಬಂದು ತಲುಪಿದೆ. ಬುಧವಾರ ಅದೇ ಬೆಲೆಯಲ್ಲಿ ಸ್ಥಿರವಾಗಿತ್ತು. ಇದೀಗ ಗುರುವಾರ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿಯ ಬೆಲೆ ಮತ್ತೆ ಪ್ರತಿ ಕೆಜಿಗೆ 2,60,000 ಕ್ಕೆ ಬಂದು ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,370 (-120) ರೂ., 22 ಕ್ಯಾರೆಟ್ ಚಿನ್ನದ ದರ 14,090 (-110) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,355 (-120) ರೂ., 22 ಕ್ಯಾರೆಟ್ ಚಿನ್ನದ ದರ 14,075 (-110) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,360 (-120) ರೂ., 22 ಕ್ಯಾರೆಟ್ ಚಿನ್ನದ ದರ 14,080 (-110) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,448 (-98) ರೂ., 22 ಕ್ಯಾರೆಟ್ ಚಿನ್ನದ ದರ 14,160 (-90) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,355 (-120) ರೂ., 22 ಕ್ಯಾರೆಟ್ ಚಿನ್ನದ ದರ 14,075 (-110) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,355 (-120) ರೂ., 22 ಕ್ಯಾರೆಟ್ ಚಿನ್ನದ ದರ 14,075 (-110) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,370 (-120) ರೂ., 22 ಕ್ಯಾರೆಟ್ ಚಿನ್ನದ ದರ 14,090 (-110) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,370 (-120) ರೂ., 22 ಕ್ಯಾರೆಟ್ ಚಿನ್ನದ ದರ 14,090 (-110) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,370 (-120) ರೂ., 22 ಕ್ಯಾರೆಟ್ ಚಿನ್ನದ ದರ 14,090 (-110) ರೂ.






