ಮತ್ತೆ ಕುಸಿದ ಚಿನ್ನದ ದರ, ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳ ಕಾರಣದಿಂದ ಚಿನ್ನ-ಬೆಳ್ಳಿ ನಷ್ಟದಲ್ಲಿ ವ್ಯವಹಾರ ನಡೆಸುತ್ತಿವೆ.
ಜೂನ್ ತಿಂಗಳಿನ ಅಮೆರಿಕದ ಹಣದುಬ್ಬರ ದತ್ತಾಂಶವು ನಿರೀಕ್ಷೆಗಿಂತ ಕಡಿಮೆ ಇರುವ ಕಾರಣ ಚಿನ್ನದ ಬೆಲೆಗಳು ಲಾಭದತ್ತ ಸಾಗಬೇಕಿತ್ತು. ಆದರೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳ ಕಾರಣದಿಂದ ನಷ್ಟದಲ್ಲಿ ವ್ಯವಹಾರ ನಡೆಸುತ್ತಿವೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳು ನಿರಂತರ ಹಣದುಬ್ಬರ ಮತ್ತು ಹೆಚ್ಚಿನ ಬಡ್ಡಿದರದ ಆತಂಕ ಉಂಟು ಮಾಡಿದ್ದರಿಂದ ಚಿನ್ನದ ಲಾಭಗಳು ಸೀಮಿತವಾಗಿವೆ.
ಕಳೆದ ಜೂನ್ 15ರಂದು 22 ಕ್ಯಾರೆಟ್ ಆಭರಣ ಚಿನ್ನದ ದರ ಗ್ರಾಂಗೆ 14,000 ಸಮೀಪವಿತ್ತು. ನಂತರ ಕುಸಿಯುತ್ತಾ ಬಂದಿರುವ ಚಿನ್ನದ ದರ ಜೂನ್ 25ಕ್ಕೆ ಗ್ರಾಂಗೆ 12,860 ಗೆ ಇಳಿದಿತ್ತು. ನಂತರ ಜುಲೈ ಆರಂಭದಲ್ಲಿ ಸ್ವಲ್ಪ ಏರಿದ್ದ ಬೆಲೆ ಸತತವಾಗಿ ಗ್ರಾಂಗೆ 13,000 ಸುತ್ತಮುತ್ತ ಏರಿಳಿತ ಕಾಣುತ್ತಿದೆ. ಈ ವಾರದ ಆರಂಭದಲ್ಲೂ ಬೆಲೆಯಲ್ಲಿ ಕುಸಿತ ದಾಖಲಿಸಿದೆ. ಬುಧವಾರ ಸ್ವಲ್ಪ ಏರಿದ್ದ ಚಿನ್ನದ ದರ ಇಂದು ಮತ್ತೆ ಕುಸಿದಿದೆ. ನಿನ್ನೆಯ ಬೆಲೆಗೆ ಹೋಲಿಸಿದರೆ ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 25 ರೂ. ಇಳಿಕೆಯಾಗಿ, ಹತ್ತು ಗ್ರಾಂಗೆ 1,31,350 ರೂ. ಗೆ ತಲುಪಿದೆ.
ಚಿನ್ನದ ದರದಲ್ಲಿ ಇಳಿಕೆ
ಜುಲೈ 16 ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರದ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 28 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,43,290 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 25 ರೂ. ಇಳಿಕೆಯಾಗಿ, ಹತ್ತು ಗ್ರಾಂಗೆ 1,31,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 20 ರೂ. ಕುಸಿದು, ಹತ್ತು ಗ್ರಾಂಗೆ 1,07,470 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಜುಲೈ 16 ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,329 (-28) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,135 (-25) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,747 (-20) ರೂ. ಬೆಲೆಗೆ ಬಂದು ತಲುಪಿದೆ.
ಸ್ಥಿರವಾದ ಬೆಳ್ಳಿಯ ದರ
ಮಂಗಳೂರಿನಲ್ಲಿ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷ ರೂ.ವರೆಗೂ ಏರಿತ್ತು. ನಂತರ, ಬಹುತೇಕ ಮೇ ತಿಂಗಳಿಡೀ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಆದರೆ ಜೂನ್ನಲ್ಲಿ ಸ್ವಲ್ಪ ಏರಿಳಿತ ಕಂಡುಬಂದು ಪ್ರತಿ ಕೆಜಿಗೆ 2,40,000 ರೂ.ಗೆ ಬಂದು ನಿಂತಿತ್ತು. ಜುಲೈ ಆರಂಭದಲ್ಲಿ ಅಲ್ಪಮಟ್ಟಿಗೆ ಏರಿಳಿತ ಕಂಡು ಪ್ರತಿ ಕೆಜಿಗೆ 2,50,000 ರೂ.ಗೆ ಬಂದಿತ್ತು. ಕಳೆದ ವಾರ ಕಡಿಮೆಯಾದ ಬೆಳ್ಳಿಯ ದರ ಪ್ರತಿ ಕೆಜಿಗೆ 2,35,000 ರೂ.ಗೆ ಬಂದು ತಲುಪಿದೆ. ನಂತರ ಸ್ವಲ್ಪ ಏರಿದ್ದ ಬೆಳ್ಳಿಯ ದರ ಕಳೆದ ಶನಿವಾರದ ನಂತರ 2,35,000 ರೂ.ಗೆ ಸ್ಥಿರವಾಗಿ ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,344 (-28) ರೂ., 22 ಕ್ಯಾರೆಟ್ ಚಿನ್ನದ ದರ 13,150 (-25) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,329 (-28) ರೂ., 22 ಕ್ಯಾರೆಟ್ ಚಿನ್ನದ ದರ 13,135 (-25) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,334 (-28) ರೂ., 22 ಕ್ಯಾರೆಟ್ ಚಿನ್ನದ ದರ 13,140 (-25) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,346 (-32) ರೂ., 22 ಕ್ಯಾರೆಟ್ ಚಿನ್ನದ ದರ 13,150 (-30) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,329 (-28) ರೂ., 22 ಕ್ಯಾರೆಟ್ ಚಿನ್ನದ ದರ 13,135 (-25) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,329 (-28) ರೂ., 22 ಕ್ಯಾರೆಟ್ ಚಿನ್ನದ ದರ 13,135 (-25) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,344 (-28) ರೂ., 22 ಕ್ಯಾರೆಟ್ ಚಿನ್ನದ ದರ 13,150 (-25) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,344 (-28) ರೂ., 22 ಕ್ಯಾರೆಟ್ ಚಿನ್ನದ ದರ 13,150 (-25) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,344 (-28) ರೂ., 22 ಕ್ಯಾರೆಟ್ ಚಿನ್ನದ ದರ 13,150 (-25) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 14,329 (-28) ರೂ., 22 ಕ್ಯಾರೆಟ್ ಚಿನ್ನದ ದರ 13,135 (-25) ರೂ.






