ಮತ್ತೆ ಕುಸಿದ ಚಿನ್ನದ ದರ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಭೌಗೋಳಿಕ- ರಾಜಕೀಯ ಸಂಘರ್ಷದ ಸುತ್ತ ಇರುವ ಸಂಶಯಗಳು ಚಿನ್ನದ ಬೆಲೆ ಕುಸಿಯುವಂತೆ ಮಾಡಿವೆ.
ಫೆಬ್ರವರಿ 28ರಿಂದ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸಮರ ಸಾರಿದ ನಂತರದಿಂದ ಚಿನ್ನದ ಬೆಲೆ ಸುಮಾರು ಶೇ 10ರಷ್ಟು ಕುಸಿದಿದೆ. ಇಂಧನ ಬೆಲೆಗಳು ಏರುತ್ತಿರುವುದು ಹಣದುಬ್ಬರದ ಕಳವಳಗಳನ್ನು ಹೆಚ್ಚಿಸಿದೆ. ಹೀಗಾಗಿ ಹೂಡಿಕೆದಾರರು ಬಡ್ಡಿದರ ಕಡಿತದ ನಿರೀಕ್ಷೆ ಕಡಿಮೆಯಾಗಿದೆ. ಹೆಚ್ಚಿನ ಬಡ್ಡಿದರಗಳಿಂದ ಚಿನ್ನದ ಮೇಲೆ ಹೊರೆಯಾಗಿ ಲಾಭ ನೀಡುವುದಿಲ್ಲ. ಹೀಗಾಗಿ ಚಿನ್ನದ ಬೆಲೆ ಕುಸಿಯುತ್ತದೆ. ನಿನ್ನೆ ಬುಧವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ನಂತರ ದುರ್ಬಲ ಡಾಲರ್ ಎದುರು ಚಿನ್ನದ ಬೆಲೆ ಏರಿಕೆಯಾಗಿತ್ತು. ಆದರೆ ಬುಧವಾರದ ಮಾರುಕಟ್ಟೆಯ ಫಲಪ್ರದ ಅಂಶಗಳು ತಾತ್ಕಾಲಿಕ ಸಂವೇದನೆಯಾಗಿತ್ತು. ಇದೀಗ ಭೌಗೋಳಿಕ- ರಾಜಕೀಯ ಸಂಘರ್ಷದ ಸುತ್ತ ಇರುವ ಸಂಶಯಗಳು ಚಿನ್ನದ ಬೆಲೆ ಕುಸಿಯುವಂತೆ ಮಾಡಿವೆ.
ಇಂದಿನ ಚಿನ್ನದ ದರ ಹೇಗಿದೆ?
ಎಪ್ರಿಲ್ 09ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 234 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,51,480 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 215 ರೂ. ಕುಸಿದು ಹತ್ತು ಗ್ರಾಂಗೆ 1,38,850 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 176 ರೂ. ಕುಸಿದು ಹತ್ತು ಗ್ರಾಂಗೆ 1,13,610 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಎಪ್ರಿಲ್ 09ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,148 (-234) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,885 (-215) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,361 (-176) ರೂ. ಬೆಲೆಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಚಂಚಲತೆ
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಪ್ರತಿ ಕೆಜಿಗೆ 2,50,000 ರೂ. ಗೆ ಬಂದು ತಲುಪಿದ ನಂತರ ಈ ವಾರದ ಆರಂಭದಲ್ಲಿ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಬೆಳ್ಳಿಯ ಬೆಲೆ, ಬುಧವಾರ ಮತ್ತೆ ಏರಿಕೆಯಾಗಿದೆ. ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿ ಪ್ರತಿ ಕೆಜಿಗೆ 2,60,000 ರೂ.ಗೆ ಆಗಿದೆ. ಇದೀಗ ಗುರುವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ನಷ್ಟು ಕುಸಿದಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,55,000 ರೂ.ಗೆ ಬಂದು ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,163 (-234) ರೂ., 22 ಕ್ಯಾರೆಟ್ ಚಿನ್ನದ ದರ 13,900 (-215) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,148 (-234) ರೂ., 22 ಕ್ಯಾರೆಟ್ ಚಿನ್ನದ ದರ 13,885 (-215) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,153 (-234) ರೂ., 22 ಕ್ಯಾರೆಟ್ ಚಿನ್ನದ ದರ 13,890 (-215) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,273 (-218) ರೂ., 22 ಕ್ಯಾರೆಟ್ ಚಿನ್ನದ ದರ 14,000 (-200) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,148 (-234) ರೂ., 22 ಕ್ಯಾರೆಟ್ ಚಿನ್ನದ ದರ 13,885 (-215) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,148 (-234) ರೂ., 22 ಕ್ಯಾರೆಟ್ ಚಿನ್ನದ ದರ 13,885 (-215) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,163 (-234) ರೂ., 22 ಕ್ಯಾರೆಟ್ ಚಿನ್ನದ ದರ 13,900 (-215) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,163 (-234) ರೂ., 22 ಕ್ಯಾರೆಟ್ ಚಿನ್ನದ ದರ 13,900 (-215) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,163 (-234) ರೂ., 22 ಕ್ಯಾರೆಟ್ ಚಿನ್ನದ ದರ 13,900 (-215) ರೂ.







