ಸತತ ಕುಸಿತದ ನಂತರ ಏರಿದ ಚಿನ್ನದ ಬೆಲೆ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಗುರುವಾರ ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಚಿನ್ನದ ದರ ಇಂದು ಏರಿಕೆ ಕಂಡಿದೆ.
ಮಂಗಳವಾರ, ಬುಧವಾರ ಮತ್ತು ಗುರುವಾರ ಕುಸಿದಿದ್ದ ಚಿನ್ನದ ಬೆಲೆಗಳು ಇದೀಗ ಶುಕ್ರವಾರ ಏರಿಕೆ ಕಂಡಿವೆ. ಗುರುವಾರ ಎರಡು ತಿಂಗಳ ಅತಿ ಕನಿಷ್ಠಕ್ಕೆ ತಲುಪಿದ ನಂತರ ಚಿನ್ನದ ದರ, ಶುಕ್ರವಾರ ಏರಿಕೆ ಕಂಡಿದೆ. ಶುಕ್ರವಾರ ಪ್ರಮುಖ ಜಾಗತಿಕ ಕರೆನ್ಸಿಗಳ ವಿರುದ್ಧ ಅಮೆರಿಕನ್ ಡಾಲರ್ ಮೌಲ್ಯ ಕುಸಿತ ಕಂಡಿದ್ದು, ಹೂಡಿಕೆದಾರರು ಚಿನ್ನ ಖರೀದಿಸುವಂತೆ ಮಾಡಿದೆ.
ಅಮೆರಿಕ ಮತ್ತು ಇರಾನ್ ಮಧ್ಯಪ್ರಾಚ್ಯದ ಕದನ ವಿರಾಮವನ್ನು ವಿಸ್ತರಿಸಲು ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಸಮುದ್ರ ಸಂಚಾರದ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಒಪ್ಪಂದಕ್ಕೆ ಬಂದಿವೆ ಎನ್ನುವ ಸುದ್ದಿಯ ನಂತರ ಡಾಲರ್ ಕುಸಿತ ಕಂಡಿದೆ.
ಹೂಡಿಕೆದಾರರು ಪ್ರಸ್ತಾಪಿತ ಕದನವಿರಾಮದ ಸುತ್ತಲಿನ ಬೆಳವಣಿಗೆಗಳನ್ನು ಗಮನಿಸಿರುವುದು, ಹಣದುಬ್ಬರ ಅಪಾಯ ಮತ್ತು ಅಮೆರಿಕದ ಬಡ್ಡಿದರಗಳ ನಿರೀಕ್ಷೆಯ ನಡುವೆ ಚಿನ್ನದ ಬೆಲೆಗಳು ಸಾಧಾರಣ ಲಾಭ ಗಳಿಸಿದವು.
ಏರಿದ ಚಿನ್ನದ ದರ
ಮೇ 29ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 158 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,57,640 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 145 ರೂ. ಏರಿದ್ದು, ಹತ್ತು ಗ್ರಾಂಗೆ 1,44,500 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 119 ರೂ. ಹೆಚ್ಚಾಗಿದ್ದು, ಹತ್ತು ಗ್ರಾಂಗೆ 1,18,230 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮೇ 29ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,764 (+158) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,450 (+145) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,823 (+119) ರೂ. ಬೆಲೆಗೆ ಬಂದು ತಲುಪಿದೆ.
ಮತ್ತೆ ಏರಿದ ಬೆಳ್ಳಿಯ ಮೌಲ್ಯ
ಮಾರ್ಚ್ ಮತ್ತು ಏಪ್ರಿಲ್ನಲ್ಲಿ 2,55,000 ರೂ. ಸುತ್ತ ಮುತ್ತ ಬಂದು ನಿಂತಿದ್ದ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷದವರೆಗೂ ಏರಿತ್ತು. ನಂತರ, ಬಹುತೇಕ ತಿಂಗಳಿಡೀ ಅದೇ ಬೆಲೆಯ ಆಸುಪಾಸಿನಲ್ಲಿ ಮುಂದುವರಿದಿತ್ತು. ಕಳೆದ ವಾರ ಬೆಳ್ಳಿಯ ದರ ಪ್ರತಿ ಕೆಜಿಗೆ 2,85,000 ರೂ.ಗೆ ಬಂದು ತಲುಪಿತ್ತು. ನಿನ್ನೆ ಗುರುವಾರ ಪ್ರತಿ ಗ್ರಾಂಗೆ 10 ರೂ. ರಷ್ಟು ಕಡಿಮೆಯಾದ ಬೆಳ್ಳಿಯ ಬೆಲೆ ಮತ್ತೆ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ನಿಂತಿತ್ತು. ಇದೀಗ ಶುಕ್ರವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಏರಿದ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,779 (+158) ರೂ., 22 ಕ್ಯಾರೆಟ್ ಚಿನ್ನದ ದರ 14,465 (+145) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,764 (+158) ರೂ., 22 ಕ್ಯಾರೆಟ್ ಚಿನ್ನದ ದರ 14,450 (+145) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,769 (+158) ರೂ., 22 ಕ್ಯಾರೆಟ್ ಚಿನ್ನದ ದರ 14,455 (+145) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,928 (+110) ರೂ., 22 ಕ್ಯಾರೆಟ್ ಚಿನ್ನದ ದರ 14,600 (+100) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,764 (+158) ರೂ., 22 ಕ್ಯಾರೆಟ್ ಚಿನ್ನದ ದರ 14,450 (+145) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,764 (+158) ರೂ., 22 ಕ್ಯಾರೆಟ್ ಚಿನ್ನದ ದರ 14,450 (+145) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,779 (+158) ರೂ., 22 ಕ್ಯಾರೆಟ್ ಚಿನ್ನದ ದರ 14,465 (+145) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,779 (+158) ರೂ., 22 ಕ್ಯಾರೆಟ್ ಚಿನ್ನದ ದರ 14,465 (+145) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,779 (+158) ರೂ., 22 ಕ್ಯಾರೆಟ್ ಚಿನ್ನದ ದರ 14,465 (+145) ರೂ.






