ಸತತ ಕುಸಿತದ ನಂತರ ಏರಿದ ಚಿನ್ನದ ದರ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಕಳೆದೆರಡು ವಾರಗಳಲ್ಲಿ ಕುಸಿತದ ಹಾದಿಯಲ್ಲಿದ್ದ ಚಿನ್ನದ ದರಗಳು ಮತ್ತೆ ಏರಿಕೆ ಕಂಡಿವೆ.
ಪಶ್ಚಿಮ ಏಷ್ಯಾದ ಭೌಗೋಳಿಕ-ರಾಜಕೀಯ ಬೆಳವಣಿಗೆಗಳು, ಕಚ್ಚಾ ತೈಲ ಮಾರುಕಟ್ಟೆಗಳ ಏರಿಳಿತಗಳು ಮತ್ತು ಈ ವಾರ ಬಿಡುಗಡೆಯಾಗುವ ಅಮೆರಿಕದ ಆರ್ಥಿಕ ದತ್ತಾಂಶಗಳ ನಿರೀಕ್ಷೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಮೌಲ್ಯಗಳು ತೂಗುಯ್ಯಾಲೆಯಲ್ಲಿವೆ.
ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರಗಳು ಪ್ರಬಲವಾಗಿ ಆರಂಭವಾಗಿವೆ. ಕಳೆದೆರಡು ವಾರಗಳಿಂದ ಚಿನ್ನ ಸತತ ಕುಸಿತದ ಹಾದಿಯಲ್ಲಿತ್ತು. ಮೇ ತಿಂಗಳಲ್ಲಿ ಸ್ಥಿರವಾಗಿದ್ದ ಬೆಳ್ಳಿಯ ಬೆಲೆಯೂ ಜೂನ್ ಆರಂಭದಲ್ಲಿ ಕುಸಿಯಲು ಆರಂಭವಾಗಿತ್ತು. ಸೋಮವಾರವೂ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತದೊಂದಿಗೆ ಮಾರುಕಟ್ಟೆ ಆರಂಭವಾಗಿತ್ತು. ಆದರೆ ಮಂಗಳವಾರ ಚಿನ್ನದ ದರ ಅಲ್ಪ ಮಟ್ಟಿಗೆ ಏರಿಕೆಯಾಗಿದೆ. ಬೆಳ್ಳಿ ಸ್ಥಿರವಾಗಿದೆ.
ಮತ್ತೆ ಕುಸಿದ ಚಿನ್ನದ ದರ
ಜೂನ್ 8ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 147 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,53,160 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 135 ರೂ. ಏರಿದ್ದು, ಹತ್ತು ಗ್ರಾಂಗೆ 1,40,400 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 110 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,14,870 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಜೂನ್ 8ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,316 (+147) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,040 (+135) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,487 (+110) ರೂ. ಬೆಲೆಗೆ ಬಂದು ತಲುಪಿದೆ.
ತೀವ್ರ ಕುಸಿದ ಬೆಳ್ಳಿಯ ಮೌಲ್ಯ
ಮಾರ್ಚ್ ಮತ್ತು ಎಪ್ರಿಲ್ ನಲ್ಲಿ 2,55,000 ರೂ. ಸುತ್ತ ಮುತ್ತ ಬಂದು ನಿಂತಿದ್ದ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷದವರೆಗೂ ಏರಿತ್ತು. ನಂತರ, ಬಹುತೇಕ ತಿಂಗಳಿಡೀ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಕಳೆದ ವಾರವೂ ಅದೇ ಬೆಲೆಗೆ ಸ್ಥಿರವಾಗಿ ನಿಂತಿತ್ತು. ಆದರೆ, ಶುಕ್ರವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ತಲುಪಿತು. ಶನಿವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,65,000 ರೂ.ಗೆ ಬಂದು ನಿಂತಿತ್ತು. ಸೋಮವಾರ ಮತ್ತೆ ಕುಸಿದಿರುವ ಬೆಳ್ಳಿಯ ದರ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,60,000 ರೂ.ಗೆ ಬಂದು ತಲುಪಿದೆ. ಇದೀಗ ಮಂಗಳವಾರ ಅದೇ ಬೆಲೆಗೆ ಸ್ಥಿರವಾಗಿ ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,331 (+147) ರೂ., 22 ಕ್ಯಾರೆಟ್ ಚಿನ್ನದ ದರ 14,055 (+135) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,316 (+147) ರೂ., 22 ಕ್ಯಾರೆಟ್ ಚಿನ್ನದ ದರ 14,040 (+135) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,321 (+147) ರೂ., 22 ಕ್ಯಾರೆಟ್ ಚಿನ್ನದ ದರ 14,045 (+135) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,491 (+142) ರೂ., 22 ಕ್ಯಾರೆಟ್ ಚಿನ್ನದ ದರ 14,200 (+130) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,316 (+147) ರೂ., 22 ಕ್ಯಾರೆಟ್ ಚಿನ್ನದ ದರ 14,040 (+135) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,316 (+147) ರೂ., 22 ಕ್ಯಾರೆಟ್ ಚಿನ್ನದ ದರ 14,040 (+135) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,331 (+147) ರೂ., 22 ಕ್ಯಾರೆಟ್ ಚಿನ್ನದ ದರ 14,055 (+135) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,331 (+147) ರೂ., 22 ಕ್ಯಾರೆಟ್ ಚಿನ್ನದ ದರ 14,055 (+135) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,331 (+147) ರೂ., 22 ಕ್ಯಾರೆಟ್ ಚಿನ್ನದ ದರ 14,055 (+135) ರೂ.






