ಜಾಗತಿಕ ಮಾರುಕಟ್ಟೆಯಲ್ಲಿ ಬದಲಾಗದ ದರ; ಚಿನ್ನ-ಬೆಳ್ಳಿ ಪ್ರಿಯರಿಗೆ ನೆಮ್ಮದಿ

ಸಾಂದರ್ಭಿಕ ಚಿತ್ರ (AI)
ಹಾರ್ಮುಝ್ ಜಲಸಂಧಿ ಮತ್ತೆ ತೆರೆಯುವ ಗುರಿ ಈಡೇರಿರುವುದು ಹಣದುಬ್ಬರದ ಕಳವಳಗಳನ್ನು ಕಡಿಮೆಮಾಡಿ ಅಮೆರಿಕನ್ ಡಾಲರ್ ಅನ್ನು ದುರ್ಬಲಗೊಳಿಸಿದೆ. ಹೀಗಾಗಿ ಒಟ್ಟು ಮಾರುಕಟ್ಟೆಯ ಸಂವೇದನೆ ಸುಧಾರಿಸಿದೆ.
ವಾರಾಂತ್ಯದ ತೀವ್ರ ಲಾಭದ ನಂತರ ಮಂಗಳವಾರ ಚಿನ್ನದ ಬೆಲೆಗಳಲ್ಲಿ ಹೆಚ್ಚು ಬದಲಾವಣೆ ಕಂಡುಬಂದಿಲ್ಲ. ಕಳೆದ ವಾರವಿಡೀ ಕುಸಿತದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ವಾರಾಂತ್ಯದಲ್ಲಿ ದಿಢೀರ್ ಏರಿಕೆ ಕಂಡಿತ್ತು. ಸೋಮವಾರವೂ ಚಿನ್ನ-ಬೆಳ್ಳಿ ಮೌಲ್ಯ ಏರಿಕೆಯಾಗಿತ್ತು. ಆದರೆ ಇದೀಗ ಮಂಗಳವಾರ ಸ್ವಲ್ಪ ಮಟ್ಟಿಗೆ ಕುಸಿದಿದೆ. ಹೆಚ್ಚು ತೀವ್ರ ಏರಿಕೆಯಿಲ್ಲದೆ ಇರುವುದು ಚಿನ್ನ- ಬೆಳ್ಳಿಪ್ರಿಯರಿಗೆ ಸಮಾಧಾನ ಮೂಡಿಸಿದೆ.
ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆಯ ಸ್ಪಷ್ಟತೆಗಾಗಿ ಹೂಡಿಕೆದಾರರು ಕಾಯುತ್ತಿದ್ದರು. ಹಾರ್ಮುಝ್ ಜಲಸಂಧಿ ಮತ್ತೆ ತೆರೆಯುವ ಗುರಿ ಈಡೇರಿರುವುದು ಹಣದುಬ್ಬರದ ಕಳವಳಗಳನ್ನು ಕಡಿಮೆಮಾಡಿ ಅಮೆರಿಕನ್ ಡಾಲರ್ ಅನ್ನು ದುರ್ಬಲಗೊಳಿಸಿದೆ. ಹೀಗಾಗಿ ಒಟ್ಟು ಮಾರುಕಟ್ಟೆಯ ಸಂವೇದನೆ ಸುಧಾರಿಸಿದೆ.
ಕಚ್ಚಾ ತೈಲ ಬೆಲೆಗಳು ಗಮನಾರ್ಹ ಕುಸಿತವಾಗಿದೆ. ದೀರ್ಘಕಾಲ ಮುಂದುವರಿಯಬಹುದಾದ ಇಂಧನ ಚಾಲಿತ ಹಣದುಬ್ಬರದ ಆಘಾತದ ಭಯ ಕಡಿಮೆಯಾಗಿದೆ. ಫೆಡರಲ್ ರಿಸರ್ವ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಈ ವಾರದ ಕೊನೆಯಲ್ಲಿ ನೀತಿ ಫಲಿತಾಂಶಗಳನ್ನು ಪ್ರಕಟಿಸಲು ನಿರ್ಧರಿಸಿದ್ದು, ಹೂಡಿಕೆದಾರರು ನಿರೀಕ್ಷೆಯಲ್ಲಿದ್ದಾರೆ.
ಮತ್ತೆ ಅಲ್ಪ ಕುಸಿದ ಚಿನ್ನದ ದರ:
ಜೂನ್ 16ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 16 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,51,370 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 15 ರೂ. ಕುಸಿದಿದ್ದು, ಹತ್ತು ಗ್ರಾಂಗೆ 1,38,750 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 12 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,13,530 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಜೂನ್ 16ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,137 (-16) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,875 (-15) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,353 (-12) ರೂ. ಬೆಲೆಗೆ ಬಂದು ತಲುಪಿದೆ.
ಏರಿದೆ ಬೆಳ್ಳಿಯ ಮೌಲ್ಯ
ಮಾರ್ಚ್ ಮತ್ತು ಎಪ್ರಿಲ್ ನಲ್ಲಿ 2,55,000 ರೂ. ಸುತ್ತ ಮುತ್ತ ಬಂದು ನಿಂತಿದ್ದ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷ ರೂ.ವರೆಗೂ ಏರಿತ್ತು. ನಂತರ, ಬಹುತೇಕ ಮೇ ತಿಂಗಳಿಡೀ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಜೂನ್ ಆರಂಭದಲ್ಲೂ ಅದೇ ಬೆಲೆಗೆ ಸ್ಥಿರವಾಗಿ ನಿಂತಿತ್ತು. ಆದರೆ ಕಳೆದ ವಾರದ ಆರಂಭದಲ್ಲಿ ಕುಸಿಯುತ್ತಾ ಬಂದಿದ್ದ ಬೆಳ್ಳಿಯ ಮೌಲ್ಯ ಬುಧವಾರ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,50,000 ರೂ.ಗೆ ಬಂದು ನಿಂತಿತ್ತು. ಗುರುವಾರವೂ ಅದೇ ಬೆಲೆಗೆ ಸ್ಥಿರವಾಗಿತ್ತು. ಶುಕ್ರವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,60,000 ರೂ.ಗೆ ಬಂದು ನಿಂತಿತ್ತು. ಶನಿವಾರವೂ ಅದೇ ಬೆಲೆಯಲ್ಲಿ ಸ್ಥಿರವಾಗಿತ್ತು. ಆದರೆ ಈ ವಾರದ ಆರಂಭದಲ್ಲೇ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,65,000 ರೂ.ಗೆ ಬಂದು ನಿಂತಿದೆ. ಇಂದು ಮಂಗಳವಾರ ಪ್ರತಿ ಕೆಜಿಗೆ 100 ರೂ. ಏರಿಕೆಯಾಗಿ 2,65,100 ರೂ.ಗೆ ಬಂದು ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,152 (-16) ರೂ., 22 ಕ್ಯಾರೆಟ್ ಚಿನ್ನದ ದರ 13,890 (-15) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,137 (-16) ರೂ., 22 ಕ್ಯಾರೆಟ್ ಚಿನ್ನದ ದರ 13,875 (-15) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,142 (-16) ರೂ., 22 ಕ್ಯಾರೆಟ್ ಚಿನ್ನದ ದರ 13,880 (-15) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,338 (-11) ರೂ., 22 ಕ್ಯಾರೆಟ್ ಚಿನ್ನದ ದರ 14,060 (-10) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,137 (-16) ರೂ., 22 ಕ್ಯಾರೆಟ್ ಚಿನ್ನದ ದರ 13,875 (-15) ರೂ
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,137 (-16) ರೂ., 22 ಕ್ಯಾರೆಟ್ ಚಿನ್ನದ ದರ 13,875 (-15) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,152 (-16) ರೂ., 22 ಕ್ಯಾರೆಟ್ ಚಿನ್ನದ ದರ 13,890 (-15) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,152 (-16) ರೂ., 22 ಕ್ಯಾರೆಟ್ ಚಿನ್ನದ ದರ 13,890 (-15) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,152 (-16) ರೂ., 22 ಕ್ಯಾರೆಟ್ ಚಿನ್ನದ ದರ 13,890 (-15) ರೂ.






