ಸತತ ಕುಸಿಯುತ್ತಿರುವ ಚಿನ್ನದ ದರ, ತುಸು ಏರಿದ ಬೆಳ್ಳಿ

ಸಾಂದರ್ಭಿಕ ಚಿತ್ರ (AI)
ಡಾಲರ್ ದೃಢವಾಗಿದ್ದಾಗ ಇತರ ಕರೆನ್ಸಿಗಳನ್ನು ಹೊಂದಿರುವ ಹೂಡಿಕೆದಾರರಿಗೆ ಅಮೆರಿಕದ ಕರೆನ್ಸಿ ಬೆಲೆಯಲ್ಲಿ ಚಿನ್ನ-ಬೆಳ್ಳಿ ದರ ಹೆಚ್ಚಾಗಿರುತ್ತದೆ.
ಮಾರ್ಚ್ ತಿಂಗಳ ಆರಂಭದಿಂದಲೇ ಚಿನ್ನದ ದರ ಕುಸಿಯುತ್ತಲೇ ಬಂದಿದೆ. ಇದೇ ಸೋಮವಾರ ಬೆಳಗಿನ ವಹಿವಾಟಿನಲ್ಲಿ ಇನ್ನಷ್ಟು ಕುಸಿತ ಕಂಡು ಹತ್ತು ಗ್ರಾಂಗೆ 1,40,020 ರೂ.ಗೆ ಬಂದು ನಿಂತಿದೆ. ನಂತರ ಸಂಜೆ ಚೇತರಿಸಿಕೊಂಡ ಮೇಲೆ ಇದೀಗ ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಶುದ್ಧ ಚಿನ್ನದ ಬೆಲೆ 1,40,350 ರೂ. ಮತ್ತು ಆಭರಣ ಚಿನ್ನದ ಬೆಲೆ ರೂ. 1,28,650 ಗೆ ಬಂದು ತಲುಪಿದೆ.
ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಎರಡನೇ ದಿನವೂ ಕುಸಿತದ ಜೊತೆಗೆ ವಹಿವಾಟು ಆರಂಭಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಮತ್ತು ಡಾಲರ್ ಬೆಲೆ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಗಳು ಕುಸಿತ ಕಂಡಿವೆ. ಡಾಲರ್ ದೃಢವಾಗಿದ್ದಾಗ ಇತರ ಕರೆನ್ಸಿಗಳನ್ನು ಹೊಂದಿರುವ ಹೂಡಿಕೆದಾರರಿಗೆ ಅಮೆರಿಕದ ಕರೆನ್ಸಿ ಬೆಲೆಯಲ್ಲಿ ಚಿನ್ನ-ಬೆಳ್ಳಿ ದರ ಹೆಚ್ಚಾಗಿರುತ್ತದೆ. ಹೀಗಾಗಿ ಖರೀದಿ ದುಬಾರಿಯಾಗುತ್ತದೆ. ಮಾತ್ರವಲ್ಲದೆ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ನಿಂದ ಶೀಘ್ರದಲ್ಲಿ ದರ ಕಡಿತದ ನಿರೀಕ್ಷೆಗಳು ಕಡಿಮೆಯಾಗಿರುವುದು ಕೂಡ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಚಿನ್ನದ ದರಗಳು ಶೇ 1ರಷ್ಟು ಕುಸಿತ ಕಂಡಿವೆ.
ಇಂದಿನ ಚಿನ್ನದ ದರ ಹೇಗಿದೆ?
ಮಾರ್ಚ್ 24ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 294 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,40,350 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 270 ರೂ. ಕುಸಿತ ಕಂಡು ಹತ್ತು ಗ್ರಾಂಗೆ 1,28,650 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 221 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,05,260 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮಾರ್ಚ್ 24ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,035 (-294) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 12,865 (-270) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,526 (-221) ರೂ. ಬೆಲೆಗೆ ತಲುಪಿದೆ.
ತುಸು ಏರಿದ ಬೆಳ್ಳಿಯ ದರ
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಕುಸಿತದ ಹಾದಿಯಲ್ಲಿದೆ. ಕಳೆದ ಸೋಮವಾರ ಮಾರ್ಚ್ 16ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ತಲುಪಿದರೆ, ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ ಮತ್ತೆ 2,75,000 ರೂ.ಗೆ ಬಂದು ನಿಂತಿದೆ. ಬುಧವಾರ ಪ್ರತಿಗ್ರಾಂಗೆ 10 ರೂ. ಕುಸಿತ, ಗುರುವಾರ ಮತ್ತು ಶುಕ್ರವಾರ ತಲಾ ಪ್ರತಿ ಗ್ರಾಂಗೆ 5 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,55,000 ರೂ.ಗೆ ಕುಸಿದಿದೆ. ಶನಿವಾರ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,45,000 ರೂ.ಗೆ ಕುಸಿದಿದೆ. ಸೋಮವಾರ ಪ್ರತಿ ಗ್ರಾಂಗೆ 15 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,30,000 ರೂ.ಗೆ ಬಂದು ತಲುಪಿದೆ. ಇದೀಗ ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆ ಕಂಡುಬಂದಿರುವ ಬೆಳ್ಳಿ ಪ್ರತಿ ಕೆಜಿಗೆ 2,35,000 ರೂ.ಗೆ ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,050 (-294) ರೂ., 22 ಕ್ಯಾರೆಟ್ ಚಿನ್ನದ ದರ 12,880 (-270) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,035 (-294) ರೂ., 22 ಕ್ಯಾರೆಟ್ ಚಿನ್ನದ ದರ 12,865 (-270) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,040 (-294) ರೂ., 22 ಕ್ಯಾರೆಟ್ ಚಿನ್ನದ ದರ 12,870 (-270) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,182 (-371) ರೂ., 22 ಕ್ಯಾರೆಟ್ ಚಿನ್ನದ ದರ 13,000 (-340) ರೂ
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,035 (-294) ರೂ., 22 ಕ್ಯಾರೆಟ್ ಚಿನ್ನದ ದರ 12,865 (-270) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,035 (-294) ರೂ., 22 ಕ್ಯಾರೆಟ್ ಚಿನ್ನದ ದರ 12,865 (-270) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,050 (-294) ರೂ., 22 ಕ್ಯಾರೆಟ್ ಚಿನ್ನದ ದರ 12,880 (-270) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,050 (-294) ರೂ., 22 ಕ್ಯಾರೆಟ್ ಚಿನ್ನದ ದರ 12,880 (-270) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,050 (-294) ರೂ., 22 ಕ್ಯಾರೆಟ್ ಚಿನ್ನದ ದರ 12,880 (-270) ರೂ.







