ಗುಜರಾತ್ | ದಲಿತ ವಿದ್ಯಾರ್ಥಿಗೆ ಥಳಿತ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್, ಫೆ. 6: ಗುಜರಾತ್ನ ಮೆಹ್ಸಾನದಲ್ಲಿರುವ ಕಾಲೇಜು ಹಾಸ್ಟೆಲ್ ಸಮೀಪ ಕ್ಷುಲ್ಲಕ ಜೋಕ್ಗಾಗಿ ದಲಿತ ವಿದ್ಯಾರ್ಥಿಯೊಬ್ಬನನ್ನು ನಾಲ್ವರು ಯುವಕರು ಬೆಲ್ಟ್ ಹಾಗೂ ದೊಣ್ಣೆಯಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿ ಕಾಲೇಜು ಓರ್ವ ವಿದ್ಯಾರ್ಥಿಯನ್ನು ಹಾಸ್ಟೆಲ್ನಿಂದ ಅಮಾನತುಗೊಳಿಸಿದೆ.
ಮೆಹ್ಸಾನದ ಬಿಬಿಎ/ಬಿಸಿಎ ಕಾಲೇಜು ಹಾಸ್ಟೆಲ್ನಲ್ಲಿ ಪ್ರಸ್ತುತ ವಾಸಿಸುತ್ತಿರುವ ಪೋರ್ಬಂದರ್ನ ದಲಿತ ವಿದ್ಯಾರ್ಥಿಗೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಅವಮಾನ ಮಾಡಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಮೆಹ್ಸಾನ ಎ ವಿಭಾಗೀಯ ಪೊಲೀಸ್ ಠಾಣೆಯಲ್ಲಿ ಮಿತೇಶ್ ಹಾಗೂ ಆತನ ಇತರ ಮೂವರು ಸಹವರ್ತಿಗಳ ವಿರುದ್ಧ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story




