300ನೇ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಹರ್ಮನ್ಪ್ರೀತ್ ಕೌರ್
ಟಿ20 ಕ್ರಿಕೆಟಿಗೆ ಕಾಲಿಟ್ಟ ಹಿರಿಯ ಆಟಗಾರ್ತಿ ಆಶಾ ಶೋಭನಾ

ಹರ್ಮನ್ಪ್ರೀತ್ ಕೌರ್ | PC : X
ಚೆನ್ನೈ: ಬಾಂಗ್ಲಾದೇಶ ವಿರುದ್ಧ ಸಿಲ್ಹೆಟ್ ನಲ್ಲಿ ಸೋಮವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಆಶಾ ಶೋಭನಾ ತನ್ನ 33ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದಾರೆ.
ಆಶಾ ಭಾರತದ ಪರ ಟಿ20 ಕ್ರಿಕೆಟಿಗೆ ಪಾದಾರ್ಪಣೆಗೈದ ಹಿರಿಯ ಆಟಗಾರ್ತಿಯಾಗಿದ್ದಾರೆ. ಲೆಗ್ ಸ್ಪಿನ್ನರ್ ಆಶಾ ಆಡುವ 11ರ ಬಳಗದಲ್ಲಿ ಶ್ರೇಯಾಂಕಾ ಪಾಟೀಲ್ ಬದಲಿಗೆ ಸೇರ್ಪಡೆಯಾದರು.
ಆಶಾ 2024ರ ಋತುವಿನಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ದು ಐದು ವಿಕೆಟ್ ಗೊಂಚಲು ಪಡೆದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ.
ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ 300 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಐದನೇ ಮಹಿಳಾ ಕ್ರಿಕೆಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪಟ್ಟಿಯಲ್ಲಿರುವ ಇನ್ನೋರ್ವ ಭಾರತೀಯ ಆಟಗಾರ್ತಿ ಮಿಥಾಲಿ ರಾಜ್ರೊಂದಿಗೆ ಕೌರ್ ಸೇರ್ಪಡೆಯಾದರು.
ಮಹಿಳೆಯರ ಕ್ರಿಕೆಟ್ ನಲ್ಲಿ ಗರಿಷ್ಠ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದವರು
1)ಮಿಥಾಲಿ ರಾಜ್-333
2)ಸುಝಿ ಬೇಟ್ಸ್-317
3)ಎಲ್ಲಿಸ್ ಪೆರ್ರಿ-314
4)ಚಾರ್ಲೊಟ್ ಎಡ್ವರ್ಡ್ಸ್-309
5)ಹರ್ಮನ್ಪ್ರೀತ್ ಕೌರ್-300







